ಬೆಂಗಳೂರಿಗಿಂತ ಹೈದರಾಬಾದ್ ಬೆಸ್ಟ್: ಸಿಎಂ ಚಂದ್ರಬಾಬು ನಾಯ್ಡು!

ಬೆಂಗಳೂರಿಗಿಂತ ಹೈದರಾಬಾದ್ ಬೆಸ್ಟ್: ಸಿಎಂ ಚಂದ್ರಬಾಬು ನಾಯ್ಡು!ಬೆಂಗಳೂರಿಗಿಂತ ಹೈದರಾಬಾದ್ ಬೆಸ್ಟ್: ಸಿಎಂ ಚಂದ್ರಬಾಬು ನಾಯ್ಡು!

ಬೆಂಗಳೂರು : ಬೆಂಗಳೂರು vs ಹೈದರಾಬಾದ್ ಯಾವುದು ಉತ್ತಮ ಎನ್ನುವುದು ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಬೆಂಗಳೂರಿಗೆ ಹೋಲಿಕೆ ಮಾಡಿದರೆ ಹೈದರಾಬಾದ್ ಹಲವು ಕ್ಷೇತ್ರಗಳಲ್ಲಿ ಇದೀಗ ಮುಂಚೂಣಿಯಲ್ಲಿ ಇದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಹೇಳಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಬೆಂಗಳೂರು ಹಾಗೂ ಹೈದರಾಬಾದ್ ಎರಡೂ ನಗರಗಳು ಐಟಿ ವಿಚಾರದಲ್ಲಿ ದಶಕಗಳಿಂದ ಪೈಪೋಟಿಯಲ್ಲಿವೆ. ಬೆಂಗಳೂರು ಹೈದರಾಬಾದ್ ನಗರವನ್ನು ಬೀಟ್ ಮಾಡಿ ಮುಂಚೂಣಿಯಲ್ಲಿ ಇದೆ. ಆದರೆ ಇದೀಗ ಸಿಎಂ ಚಂದ್ರಬಾಬು ನಾಯ್ಡು ಅವರ ಟ್ವೀಟ್ ಹೊಸ ಚರ್ಚೆಗೆ ಹಾಗೂ ಕನ್ನಡಿಗರ ಅಸಮಾಧಾನಕ್ಕೂ ಕಾರಣವಾಗಿದೆ.

ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಹಾಗೂ ಆಂಧ್ರಪ್ರದೇಶ – ತೆಲಂಗಾಣದ ರಾಜಧಾನಿ ಹೈದರಾಬಾದ್ ಪರಸ್ಪರ ಪೈಪೋಟಿಯಲ್ಲಿ ಇವೆ. ಈ ಎರಡೂ ಪ್ರಮುಖ ನಗರಗಳೂ ಸಿಲಿಕಾನ್ – ಐಟಿ ಹಬ್ ವಿಚಾರದಲ್ಲಿ ಕಳೆದ ಎರಡು ದಶಕಗಳಿಂದಲೂ ಪರಸ್ಪರ ದೈತ್ಯ ಸ್ಪರ್ಧೆಯನ್ನೇ ನಡೆಸಿವೆ. ದೇಶದಲ್ಲೇ ಐಟಿ ಕ್ಷೇತ್ರಕ್ಕೆ ದಕ್ಷಿಣ ಭಾರತದಲ್ಲಿ ಭದ್ರ ಬುನಾದಿಯನ್ನು ಹಾಕಿದವರಲ್ಲಿ ಕರ್ನಾಟಕದ ಮಾಜಿ ಸಿಎಂ ಎಸ್.ಎಂ ಕೃಷ್ಣ ಹಾಗೂ ಅಖಂಡ ಆಂಧ್ರಪ್ರದೇಶದ ಸಿಎಂ ಆಗಿದ್ದ ಚಂದ್ರಬಾಬು ನಾಯ್ಡು ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಇನ್ನು ಎರಡೂ ನಗರಗಳು ಅತ್ಯಂತ ವೇಗವಾಗಿ ಬೆಳೆಯುತ್ತಿರುವುದರ ಜೊತೆ ಜೊತೆಗೆ ಪೈಪೋಟಿಯೂ ಜೋರಾಗಿದೆ. ಇದೀಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ನಾವೇನು ಕಡಿಮೆ ಇಲ್ಲ. ಹೈದರಾಬಾದ್ ಎರಡನೇ ಸ್ಥಾನದಲ್ಲಿ ಇದೆ ಎಂದರೆ ಮೊದಲನೇ ಸ್ಥಾನಕ್ಕೆ ಬರುವುದಕ್ಕೆ ಅವಿರತವಾಗಿ ಶ್ರಮಿಸುತ್ತಿದೆ ಎಂದೇ ಅರ್ಥ ಎಂದು ಹೇಳಿದ್ದಾರೆ. ಇನ್ನು ಎರಡೂ ನಗರಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗಳ ನಡೆಯುವುದು ಸಾಮಾನ್ಯ. ಆದರೆ, ಇದೀಗ ಚಂದ್ರಬಾಬು ನಾಯ್ಡು ಅವರ ಟ್ವೀಟ್ ರಾಜಕೀಯ ಚರ್ಚೆಗೂ ಕಾರಣವಾಗಿದೆ. ಚಂದ್ರಬಾಬು ನಾಯ್ಡು ಟ್ವೀಟ್ ಮಾಡಿ ಹೇಳಿದ್ದೇನು ? ಬೆಂಗಳೂರು ಹಾಗೂ ಹೈದರಾಬಾದ್ ಚರ್ಚೆ ಮತ್ತೆ ಮುನ್ನೆಲೆಗೆ ಬರುವುದಕ್ಕೆ ಮುಖ್ಯ ಕಾರಣ ಚಂದ್ರಬಾಬು ನಾಯ್ಡು ಅವರು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಮಾಡಿರುವ ಪೋಸ್ಟ್, 1990ರ ದಶಕದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಮೊದಲ ಬಾರಿ ಅಧಿಕಾರ ಸ್ವೀಕರಿಸಿದಾಗ ಹೈದರಾಬಾದ್ ಬೆಂಗಳೂರಿಗೆ ಪರ್ಯಾಯವಾಗಿ / ಎರಡನೇ ಸ್ಥಾನಕ್ಕೆ ಬರುವುದಕ್ಕೆ ಪ್ರಾರಂಭವಾಯಿತು ಎನ್ನುವುದು ನನಗೆ ನೆನಪಿದೆ ಎಂದು ಹೇಳಿದ್ದಾರೆ. ಮುಂದುವರಿದು ಇಂದು ಹೈದರಾಬಾದ್ ಎಲ್ಲಾ ಕ್ಷೇತ್ರ ಅಥವಾ ವಿಷಯಗಳಲ್ಲೂ (Parameters) ಭಾರತದ ನಂ. 1 ನಗರವಾಗಿದೆ ಎಂದು ಅವರು ಹೇಳಿದ್ದಾರೆ.

ನಾಯ್ಡು ಅವರು ಹೈದರಾಬಾದ್ ಎರಡನೇ ಸ್ಥಾನದಲ್ಲಿ ಇದೆ ಎನ್ನುವುದನ್ನು ಸವಾಲು ಮತ್ತು ಅವಕಾಶ ಎಂದಿದ್ದಾರೆ. ನಂ. 2 ಆಗಿರುವುದು ಎಂದರೆ ನಾವು ಹೆಚ್ಚು ಶ್ರಮಿಸಬೇಕು ಎಂದರ್ಥ ಅಂತಲೂ ಹೇಳಿದ್ದಾರೆ. ಈ ಮೂಲಕ ಬೆಂಗಳೂರಿಗೆ ಭರ್ಜರಿ ಪೈಪೋಟಿ ನೀಡುವ ಮುನ್ಸೂಚನೆಯನ್ನು ಕೊಟ್ಟಿದ್ದಾರೆ. ಬೆಂಗಳೂರಿಗೆ ಹೋಲಿಕೆ ಮಾಡಿದರೆ ಹೈದರಾಬಾದ್ ಯಾವುದರಲ್ಲೂ ಕಮ್ಮಿ ಇಲ್ಲ ಎಂದಿದ್ದಾರೆ. ಇನ್ನು ಈಚೆಗೆ ಆರ್ಥಿಕ ದತ್ತಾಂಶದಲ್ಲಿ ಆಂಧ್ರಪ್ರದೇಶ ಎರಡನೇ ಸ್ಥಾನದಲ್ಲಿದೆ ಎನ್ನುವ ಮಾಹಿತಿಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಅವರು ಈ ಪೋಸ್ಟ್ ಮಾಡಿದ್ದಾರೆ. ಆ ರೀತಿ ನೋಡಿದರೆ 10 ವರ್ಷಗಳ ಅವಧಿಗೆ ಮಾತ್ರ ಹೈದರಾಬಾದ್ ಎರಡೂ ರಾಜ್ಯಗಳಿಗೂ ರಾಜಧಾನಿಯಾಗಿತ್ತು. ಆ ಅವಧಿ ಇದೀಗ ಮುಕ್ತಾಯವಾಗಿದೆ. ಈ ಟ್ವೀಟ್ ಬೆಂಗಳೂರು – ಹೈದರಾಬಾದ್ ಸ್ಪರ್ಧೆಗೆ ಮಾತ್ರವಲ್ಲ. ತೆಲಂಗಾಣದ ಮುಖ್ಯಮಂತ್ರಿ ರೇವಂತ ರೆಡ್ಡಿಗೂ ಟಾಂಗ್ ಕೊಟ್ಟಿರುವಂತಿದೆ.

Leave a Reply

Your email address will not be published. Required fields are marked *