ಪ್ರಾಣಿಗಳು ಅಷ್ಟಾಗಿ ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ಕೆಲವೊಂದು ಬಾರಿ ಬೀದಿ ನಾಯಿಗಳು, ಬೀಡಾಡಿ ದನ, ಎತ್ತುಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಇಲ್ಲೊಂದು ಅಂತಹದ್ದೇ ಘಟನೆಯೊಂದು ನಡೆದಿದ್ದು, ಗೂಳಿಯೊಂದು ರಸ್ತೆಯಲ್ಲಿ ಹೋಗ್ತಿದ್ದ ಕಾರ್ ಮೇಲೆ ದಾಳಿ ನಡೆಸಲು ಮುಂದಾಗಿದೆ. ಹೌದು ಕಾರನ್ನು ಅಡ್ಡಗಟ್ಟಿ ಒಂಟಿ ಗೂಳಿ ಪೌರುಷ ತೋರಿದೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಹೆಚ್ಚಾಗಿ ಮನುಷ್ಯನೇ ಪ್ರಾಣಿಗಳಿಗೆ ತೊಂದರೆ ಕೊಡುತ್ತಿರುತ್ತಾರೆ. ಅಪರೂಪಕ್ಕೆ ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ನಡೆಸುವ ಘಟನೆಗಳು ನಡೆಯುತ್ತಿರುತ್ತವೆ. ಹೌದು ಬೀದಿ ಬದಿಯಲ್ಲಿ ನಡೆದುಕೊಂಡು ಹೋಗುವವರ ಹಾಗೂ ಬೈಕ್‌ನಲ್ಲಿ ಹೋಗುವವ ಮೇಲೆ ಬೀದಿ ನಾಯಿಗಳು ದಾಳಿ ನಡೆಸುವ, ಆನೆ, ಬೀಡಾಡಿ ದನ, ಗೂಳಿಗಳು ಮನುಷ್ಯರನ್ನು ಅಟ್ಟಾಡಿಸಿಕೊಂಡು ಬರುವ ಘಟನೆಗಳು ಹಿಂದೆಯೂ ನಡೆದಿದೆ. ಪುಣೆಯ ಮುಲ್ಶಿಯಲ್ಲಿ ಇದೇ ರೀತಿ ಘಟನೆಯೊಂದು ನಡೆದಿದ್ದು, ಬೀಡಾಡಿ ಗೂಳಿಯೊಂದು ನಾನು ಈ ಏರಿಯಾ ಡಾನ್ ಕಣೋ ಎನ್ನುತ್ತಾ ರಸ್ತೆಯಲ್ಲಿ ಹೋಗ್ತಿದ್ದ ಕಾರನ್ನು ತಡೆದು ನಿಲ್ಲಿಸಿ ಪೌರುಷ ಮೆರೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರನ್ನು ತಡೆದು ನಿಲ್ಲಿಸಿ ಗೂಳಿಯ ಪೌರುಷ:
ಪುಣೆಯ ಮುಲ್ಶಿಯ ಮಾನ್-ಘೋಟ್ವಾಡೆ ರಸ್ತೆಯಲ್ಲಿರುವ ಬಾಪುಜಿಬುವಾ ಘಾಟ್‌ನಲ್ಲಿ ಈ ಘಟನೆ ನಡೆದಿದ್ದು, ದಾರಿತಪ್ಪಿ ಗೂಳಿಯೊಂದು ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಹೋಗ್ತಿದ್ದ ಕಾರನ್ನು ತಡೆದು ನಿಲ್ಲಿಸಿ ಅದರ ಮೇಲೆ ದಾಳಿ ಮಾಡಲು ಯತ್ನಿಸಿದೆ. ಗೂಳಿಯ ಅಟ್ಟಹಾಸಕ್ಕೆ ಕಾರು ಚಾಲಕ ಭಯಭೀತರಾಗಿದ್ದು, ಸರಿಯಾದ ಸಮಕ್ಕೆ ಬಂದಂತಹ ರಾಜಕೀಯ ನಾಯಕ ಬಾಬಾಜಿ ಶೆಲ್ಕೆ ಟ್ರ್ಯಾಕ್ಟರ್ ಏರಿ ಗೂಳಿಯನ್ನು ಓಡಿಸುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.
For More Updates Join our WhatsApp Group :

