ಕೈದಿಗಳ ಮೊಬೈಲ್ ಬಳಕೆ ವೈರಲ್ – ಜೈಲು ಭದ್ರತೆ ಪ್ರಶ್ನೆಗೊಳಿಸಿದ ಘಟನೆ
ಬೆಂಗಳೂರು: ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಕರ್ಮಕಾಂಡಕ್ಕೆ ಬ್ರೇಕ್ ಬೀಳುವ ಲಕ್ಷಣವೇ ಕಾಣ್ತಿಲ್ಲ. ಹಲವು ಶಿಸ್ತು ಕ್ರಮಗಳನ್ನು ಕೈಗೊಂಡ್ರೂ ಕೈದಿಗಳ ಆಟಾಟೋಪ ಹೆಚ್ಚುತ್ತಲೇ ಇದೆ. ಇದೀಗ ಜೈಲಿನಲ್ಲಿರೀ ಕೈದಿಯೊಬ್ಬ ಸೆಲ್ನಲ್ಲಿ ಕುಳಿತು ತನ್ನ ಪತ್ನಿಗೆ ವಿಡಿಯೋ ಕಾಲ್ ಮಾಡಿರೋ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಈ ವಿಡಿಯೋ ತುಣುಕು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪರಪ್ಪನ ಅಗ್ರಹಾರದಲ್ಲಿ ಮತ್ತೆ ಕೈದಿಗಳ ಮೊಬೈಲ್ ಬಳಕೆ ಆರೋಪ ಕೇಳಿ ಬಂದಿದೆ. ವಿಚಾರಣಾಧೀನ ಖೈದಿಯಾಗಿದ್ದ ಅಕ್ಬರ್ ಎಂಬಾತ ಜೈಲಿನಲ್ಲಿ ಕುಳಿತುಕೊಂಡೇ ಪತ್ನಿಗೆ ವಿಡಿಯೋ ಕಾಲ್ ಮಾಡಿರೋದು ಬೆಳಕಿಗೆ ಬಂದಿದೆ.
ಅಕ್ಬರ್ ಎಂಬಾತನಿಂದ ಮೊಬೈಲ್ ಬಳಕೆ, ವಿಚಾರಣಾಧೀನ ಕೈದಿಯಾಗಿದ್ದ ಅಕ್ಬರ್ ಎಂಬಾತನಿಂದ ಕದ್ದು-ಮುಚ್ಚಿ ಸೆಲ್ನಲ್ಲಿ ಮೊಬೈಲ್ ಇಟ್ಟುಕೊಂಡು ಬಳಕೆ ಮಾಡ್ತಿದ್ದ ಎನ್ನುವ ಆರೋಪವಿದೆ. ಸದ್ಯ ಈತ ಜೈಲಿನಿಂದ ಬಿಡುಗಡೆಯಾಗಿದ್ದು, ಇದೀಗ ವಿಡಿಯೋ ವೈರಲ್ ಆಗ್ತಿದೆ.
ಇನ್ಸ್ಟಾದಲ್ಲಿ ಹೆಂಡ್ತಿಯಿಂದ ವಿಡಿಯೋ ಶೇರ್ ಜೈಲಿನ ಒಳಭಾಗದಲ್ಲಿ ಕುಳಿತು ಪತ್ನಿಗೆ ವೀಡಿಯೋ ಕಾಲ್ ಮಾಡಿರೋ ವಿಡಿಯೋ ಈಗ ವೈರಲ್ ಆಗ್ತಿದೆ. ವಿಡಿಯೋ ಕಾಲ್ ಮಾಡಿರುವುದನ್ನ ಸ್ಕ್ರೀನ್ ರೆಕಾರ್ಡ್ ಮಾಡಿ ಅದನ್ನ ಆಕೆಯ ಪತ್ನಿಯೇ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಆತ ಏನೋ ದೊಡ್ಡ ಸಾಧನೆ ಮಾಡಿದ್ದಾನೆ ಅನ್ನೋ ಹಾಗೇ ಜೈಲಿಂದ ರಿಲೀಸ್ ಆಗಿರುವ ವಿಡಿಯೋವನ್ನ ಕೂಡ ಪತ್ನಿ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಹಾಗೂ ಉಗ್ರರಿಗೂ ರಾಜಾತಿಥ್ಯ ನೀಡಲಾಗ್ತಿದೆ ಎನ್ನುವ ಆರೋಪ ಕೇಳಿ ಬರ್ತಾನೆ ಇದೆ. ಜೈಲಿನ ಕರ್ಮಕಾಂಡಕ್ಕೆ ಬ್ರೇಕ್ ಬೀಳುವ ಲಕ್ಷಣವೇ ಕಾಣ್ತಿಲ್ಲ. ಹಲವು ಶಿಸ್ತು ಕ್ರಮಗಳನ್ನು ಕೈಗೊಂಡ್ರೂ ಕೈದಿಗಳ ಅಟ್ಟಹಾಸ ಹೆಚ್ಚುತ್ತಲೇ ಇದೆ. ಜೈಲಿನಲ್ಲಿ ರಾಜಾತಿಥ್ಯದ ಬಗ್ಗೆ ಕುರಿತ ನಾನಾ ವಿಡಿಯೋ ಹರಿದಾಡಿತ್ತು. ಬಳಿಕ ಅಲರ್ಟ್ ಆದ ಜೈಲಾಧಿಕಾರಿಗಳು ಸೆಲ್ಗಳಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
For More Updates Join our WhatsApp Group :



