ಆ ಹಾಡನ್ನು ನಾನು ಹಾಡಬೇಕಿತ್ತು’; ಬೇಸರ ಮಾಡಿಕೊಂಡ ಸೋನು ನಿಗಮ್

ಆ ಹಾಡನ್ನು ನಾನು ಹಾಡಬೇಕಿತ್ತು’; ಬೇಸರ ಮಾಡಿಕೊಂಡ ಸೋನು ನಿಗಮ್

ಸೋನು ನಿಗಮ್ ಅವರು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ಹಾಡಿದ ಹಾಡುಗಳು ಸೂಪರ್ ಹಿಟ್ ಆಗಿವೆ. ಕನ್ನಡದ ‘ಮಾಯಾವಿ..’ ಹಾಡನ್ನು ಹಾಡಿ ಅವರು ಮತ್ತೆ ಸುದ್ದಿ ಆಗಿದ್ದಾರೆ. ಈ ಹಾಡನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸೋನು ನಿಗಮ್ ಹಾಗೂ ಸಂಜಿತ್ ಹೆಗಡೆ ಜುಗಲ್ಬಂದಿ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಸೋನು ನಿಗಮ್ ಅವರು ‘ಮಾಯಾವಿ..’ ಹಾಡಿನ ಬಗ್ಗೆ ಸಂದರ್ಶನ ನೀಡುವಾಗ ಒಂದು ವಿಚಾರ ರಿವೀಲ್ ಮಾಡಿದ್ದಾರೆ.

ಸಲೀಂ ಮರ್ಚಂಟ್ ಅವರಿಗೆ ಸೋನು ನಿಗಮ್ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಸಲೀಂ ಅವರು ಸೋನು ನಿಗಮ್ಗೆ ಒಂದು ಪ್ರಶ್ನೆ ಇಟ್ಟಿದ್ದರು. ‘ಒಂದು ಹಾಡನ್ನು ನೀವು ಹಾಡಿಲ್ಲ ಮತ್ತು ಆ ಹಾಡನ್ನು ನಿಮಗೆ ಹಾಡಬೇಕು ಎಂದು ಯಾವಾಗಲೂ ಅನಿಸುತ್ತದೆ ಎಂದರೆ ಅದು ಯಾವ ಹಾಡು’ ಎಂದು ಕೇಳಲಾಯಿತು. ‘ಆ ರೀತಿಯ ಬಹಳಷ್ಟು ಹಾಡುಗಳು ಇವೆ’ ಎಂದರು ಸೋನು ನಿಗಮ್.

ಆದರೆ, ಸೋನು ನಿಗಮ್ಗೆ ಒಂದು ಹಾಡಿನ ಬಗ್ಗೆ ವಿಶೇಷ ಪ್ರೀತಿ ಇತ್ತು. ಆ ಬಗ್ಗೆ ಹೇಳಿಕೊಂಡರು. ‘ಖುದಾ ಜಾನೆ. ಇದು ನನ್ನ ಫೇವರಿಟ್ ಹಾಡು. ಅದು ನನಗೆ ಸಿಕ್ಕರೆ ಖುಷಿ ಆಗುತ್ತಿತ್ತು. ಆದರೆ, ಕೆಕೆ ಇದನ್ನು ಚೆನ್ನಾಗಿ ಹಾಡಿದ್ದಾರೆ. ನನಗೆ ಸಿಕ್ಕರೆ ನಾನು ಹಾಡುತ್ತಿದ್ದೆ. ಆದರೆ, ಕೆಕೆ ಅಷ್ಟು ಉತ್ತಮವಾಗಿ ಆ ಹಾಡು ಮೂಡಿ ಬರಲು ಸಾಧ್ಯವಾಗುತ್ತಲೇ ಇರಲಿಲ್ಲ’ ಎಂದಿದ್ದಾರೆ ಸೋನು ನಿಗಮ್.

Leave a Reply

Your email address will not be published. Required fields are marked *