ಮೈಸೂರು : ಕನ್ನಡ ನಾಡಿನ ಹೆಮ್ಮೆಯ ಮೈಸೂರು ದಸರಾ ವಿಶ್ವವಿಖ್ಯಾತಿಯನ್ನ ಪಡೆದುಕೊಂಡಿರುವಂತಹದ್ದು, ಇದರ ಮೆರವಣಿಗೆ ಪ್ರಮುಖ ಆಕರ್ಷಣೀಯ ಮತ್ತು ವಿಶ್ವ ಮಟ್ಟದಲ್ಲಿ ಪಡೆದುಕೊಂಡಿದೆ ಎಂದರೆ ಅದು ಜಂಬೂ ಸವಾರಿ. ಇನ್ನೇನು ಕೆಲವೇ ದಿನಗಳಲ್ಲಿ ದಸರಾ ಆರಂಭವಾಗುತ್ತದೆ. ಇಂತಹ ಸಂದರ್ಭದಲ್ಲಿ ಜಂಬೂ ಸವಾರಿ ಮಾಡಿದ ಆನೆಗಳನ್ನ ನೆನಪು ಮಾಡಿಕೊಳ್ಳುವುದು ಅತ್ಯುತ್ತ ಅವಶ್ಯಕ.
ಹೌದು.. ನಾಡ ಹಬ್ಬ ದಸರಾದಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿ ಪ್ರಮುಖ ಆಕರ್ಷಣೆ. ಅಂತಹ ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಆನೆಗಳಿಗೂ ಅಷ್ಟೇ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಸುಮಾರು 18 ಬಾರಿ ಅಂಬಾರಿ ಹೊತ್ತ ಆನೆ ದ್ರೋಣ ಹಾಗೂ 3 ಬಾರಿ ಅಂಬಾರಿ ಹೊತ್ತ ರಾಜೇಂದ್ರ ಆನೆಗನ್ನ ಕನ್ನಡಿಗರು ಮರೆಯುವಹಾಗಿಲ್ಲ.
ನಾಡಹಬ್ಬ ದಸರಾದ ಸಂದರ್ಭದಲ್ಲಿ ಇವುಗಳನ್ನು ನೆನಪು ಮಾಡಿಕೊಳ್ಳಲಾಗುತ್ತದೆ. ಇವರಿಬ್ಬರ ಸಮಾಧಿಗಳನ್ನ ಹೆಚ್ ಡಿ ಕೋಟೆ ತಾಲೂಕು ಬಳ್ಳೆ ಹಾಡಿ ಗ್ರಾಮದಲ್ಲಿ ಮಾಡಲಾಗಿದೆ. ಇನ್ನೂ ರಾಜೇಂದ್ರ ಆನೆಯನ್ನು ಗಂಧದಗುಡಿ ಸಿನಿಮಾದಲ್ಲಿ ಬಳಸಿಕೊಂಡಿರುವುದು ವಿಶೇಷ.