ನಮಗೆ ಆಹಾರವಿಲ್ಲದೆಯೂ ನೀರನ್ನು ಸೇವಿಸಿಕೊಂಡು ಒಂದು ವಾರಗಳ ಕಾಲ ಬದುಕಬಹುದು. ದಿನಕ್ಕೆ 4ರಿಂದ 5 ಲೀ ನೀರನ್ನು ಕುಡಿಯಬೇಕು ಎಂಬುದು ತಜ್ಞರ ಅಭಿಪ್ರಾಯ. ಆರೋಗ್ಯವಾಗಿರಲು ದೇಹವು ಹೈಡ್ರಿಕರಿಸಿದ ಸ್ಥಿತಿಯಲ್ಲಿರುವುದು ಬಹಳ ಮುಖ್ಯ. ಬಹಳಷ್ಟು ಸಮಯದಲ್ಲಿ ನಾವು ನೀರನ್ನು ಸರಿಯಾಗಿ ಸೇವಿಸುವುದಿಲ್ಲ, ನಿಂತು ನೀರು ಕುಡಿಯುವುದು, ಅವಸರವಾಗಿ ನೀರು ಕುಡಿಯುವುದು ಹೀಗೆ ನೀರನ್ನು ಕುಡಿಯುವಾಗ ಸರಿಯಾದ ಭಂಗಿಯಲ್ಲಿ ಕುಡಿಯುವುದಿಲ್ಲ. ನೀರು ಹೀರುತ್ತಾ ನಿಧಾನವಾಗಿ ಕುಡಿಯಬೇಕು ಎಂದು ಮನೆಯ ಹಿರಿಯರು ಹೇಳುತ್ತಾರೆ ಇನ್ನು ಓದುವಾಗ ನಿಂತಾಗ ಅಥವಾ ಅವಸರದಲ್ಲಿ ನೀರು ಕುಡಿಯಬಾರದು. ಸಾಮಾನ್ಯವಾಗಿ ಜನರು ನಿಂತಿರುವಾಗ ನೀರು ಕುಡಿಯುವುದರಿಂದ ದೇಹಕ್ಕೆ ಹಾನಿಯಾಗುವುದಿಲ್ಲ ಆದರೆ ಇದು ಕೀಲು ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ಮೊಣಕಾಲುಗಳ ಮೇಲೆ ಪರಿಣಾಮ ಹೆಚ್ಚು ಬೀರುತ್ತದೆ ಎನ್ನುತ್ತಾರೆ ತಜ್ಞರು. ನಿಂತು ನೀರು ಕುಡಿಯುವುದರಿಂದ ಮೊಣಕಾಲುಗಳಿಗೆ ನೀರು ಬರುತ್ತದೆ ಎಂದು ಹಲವರು ನಂಬುತ್ತಾರೆ ಇದು ಕೀಲು ನೋವನ್ನು ಹೆಚ್ಚಿಸಬಹುದು ಮತ್ತು ಸಂಧಿವಾತದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಸಹಜವಾಗಿ ನೀವು ಆರಾಮವಾಗಿ ಮತ್ತು ನಿಧಾನವಾಗಿ ನೀರನ್ನು ಕುಡಿಯಬೇಕು ಆದರೆ ನಿಂತಲ್ಲೇ ನೀರನ್ನು ಕುಡಿಯುವುದರಿಂದ ಮೊಣಕಾಲುಗಳಿಗೆ ಹಾನಿಯಾಗಬಹುದು ಅಥವಾ ಕೀಲುಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬ ಸಂಶೋಧನೆಗಳು ಬೆಳಕಿಗೆ ಬಂದಿಲ್ಲ ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವು ಇರುವುದು ಒಳ್ಳೆಯದು.
ನೀವು ನಿಂತು ನೀರು ಕುಡಿಯುತ್ತಿದ್ದರೆ, ಸತ್ಯ ತಿಳಿಯಿರಿ!
