ರಾಜ್ಯಾಧ್ಯಂತ ಇ-ಆಸ್ತಿ ವ್ಯವಸ್ಥೆ ಜಾರಿ, ಇನ್ಮುಂದೆ ನಮೂನೆ 2, 3 ಇ-ಆಸ್ತಿ ತಂತ್ರಾಂಶದಲ್ಲಿ ಮಾತ್ರ ಲಭ್ಯ

ರಾಜ್ಯಾಧ್ಯಂತ ಇ-ಆಸ್ತಿ ವ್ಯವಸ್ಥೆ ಜಾರಿ, ಇನ್ಮುಂದೆ ನಮೂನೆ 2, 3 ಇ-ಆಸ್ತಿ ತಂತ್ರಾಂಶದಲ್ಲಿ ಮಾತ್ರ ಲಭ್ಯ

ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ-2 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶವನ್ನು ಸಂಯೋಜಿಸಲಾಗಿದ್ದು ಅಕ್ಟೋಬರ್ 07ರ ಇಂದಿನಿಂದ ಅನ್ವಯವಾಗುವಂತೆ ಅನುಷ್ಟಾನಗೊಳಿಸಲಾಗಿದೆ.

ಸರ್ಕಾರದ ಸುತ್ತೋಲೆಯ ಸೂಚನೆ ಮೇರೆಗೆ ರಾಜ್ಯಾಧ್ಯಂತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ-ಆಸ್ತಿ ತಂತ್ರಾಂಶದಲ್ಲಿ ಮಾತ್ರ ಸ್ವತ್ತಿನ ನಮೂನೆ 2/3ನ್ನು ನೀಡಲು ಹಾಗೂ ಹಕ್ಕು ವರ್ಗಾವಣೆಗೆ ಕ್ರಮವಹಿಸಲು ಮತ್ತು ಇ-ಆಸ್ತಿ ತಂತ್ರಾಂಶವನ್ನು ಹೊರತುಪಡಿಸಿ ಭೌತಿಕವಾಗಿ ಹಾಗೂ ಖಾಸಗಿ ತಂತ್ರಾಂಶವನ್ನು ಬಳಕೆ ಮಾಡಿ ನಮೂನೆ 2/3ನ್ನು ನೀಡಬಾರದಾಗಿ ಆದೇಶವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಅ.07ರ ಇಂದಿನಿಂದ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವತ್ತಿ ನಮೂನೆ 2/3ನ್ನು ಇ-ಆಸ್ತಿ ತಂತ್ರಾಂಶದಲ್ಲಿ ವಿತರಿಸಲಾಗುತ್ತದೆ. ಸಾರ್ವಜನಿಕರು ಸಹಕರಿಸುವಂತೆ ಇಲಾಖೆ ಮನವಿ ಮಾಡಿದೆ.

Leave a Reply

Your email address will not be published. Required fields are marked *