ಭಾರತೀಯ ರೈಲ್ವೆ : ಸ್ಟೇಷನ್ ಮಾಸ್ಟರ್, ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನೂ ಅವಕಾಶವಿದೆ

ಭಾರತೀಯ ರೈಲ್ವೆ : ಸ್ಟೇಷನ್ ಮಾಸ್ಟರ್, ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನೂ ಅವಕಾಶವಿದೆ

ಬೆಂಗಳೂರು: ಸ್ಟೇಷನ್ ಮಾಸ್ಟರ್, ಟ್ರೈನ್ಸ್ ಕ್ಲರ್ಕ್, ಜೂನಿಯರ್ ಅಕೌಂಟೆಂಟ್ ಸೇರಿದಂತೆ 11,558 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದ ರೈಲ್ವೇ ನೇಮಕಾತಿ ಮಂಡಳಿ (RRB) ಇದೀಗ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 27ರವರೆಗೆ ಅವಕಾಶ ನೀಡಲಾಗಿದೆ.

ಹುದ್ದೆಗಳ ವಿವರ:

•          ಗೂಡ್ಸ್ ಟ್ರೈನ್ ಮ್ಯಾನೇಜರ್ – 3144

•          ಸ್ಟೇಷನ್ ಮಾಸ್ಟರ್ – 994

•          ಚೀಫ್ ಕಮರ್ಷಿಯಲ್ ಆ್ಯಂಡ್ ಟಿಕೆಟ್ ಸೂಪರ್ವೈಸರ್ – 1736

•          ಜೂನಿಯರ್ ಅಕೌಂಟೆಂಟ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್ – 1507

•          ಸೀನಿಯರ್ ಕ್ಲರ್ಕ್ ಆ್ಯಂಡ್ ಟೈಪಿಸ್ಟ್ – 732

•          ಅಕೌಂಟ್ ಕ್ಲರ್ಕ್ ಆ್ಯಂಡ್ ಟೈಪಿಸ್ಟ್ – 361

•          ಕಮರ್ಷಿಯಲ್ ಆ್ಯಂಡ್ ಟಿಕೆಟ್ ಕ್ಲರ್ಕ್ – 2022

•          ಜೂನಿಯರ್ ಕ್ಲರ್ಕ್ ಆ್ಯಂಡ್ ಟೈಪಿಸ್ಟ್ – 990

•          ಟ್ರೈನ್ ಕ್ಲರ್ಕ್- 72

ವಿದ್ಯಾರ್ಹತೆ: ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪೂರ್ಣಗೊಳಿಸಿರಬೇಕು. ಇನ್ನಿತರ ಹುದ್ದೆಗಳಿಗೆ ಪದವಿ ಹೊಂದಿರಬೇಕು.

ವಯೋಮಿತಿ: ಕ್ಲರ್ಕ್ ಮತ್ತು ಟೈಪಿಸ್ಟ್ ಹುದ್ದೆಗಳ ಗರಿಷ್ಟ ವಯೋಮಿತಿ 33 ವರ್ಷ. ಇನ್ನಿತರ ಹುದ್ದೆಗಳ ಗರಿಷ್ಠ ವಯೋಮಿತಿ 36 ವರ್ಷ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ.ಜಾ, ಪ.ಪಂ, ನಿವೃತ್ತ ಸೇವಾ ನೌಕರರು, ಮಹಿಳೆಯರು, ತೃತೀಯ ಲಿಂಗಿಗಳಿಗೆ ಅರ್ಜಿ ಶುಲ್ಕ 250 ರೂ, ಇತರೆ ಅಭ್ಯರ್ಥಿಗಳಿಗೆ 500 ರೂ.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ.

ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು indianrailways.gov.in ಇಲ್ಲಿಗೆ ಭೇಟಿ ನೀಡಿ.

Leave a Reply

Your email address will not be published. Required fields are marked *