ಶ್ರೀ ಅಭಯ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಧ್ವಜಸ್ತಂಬ ಪ್ರತಿಷ್ಠಾಪನೆ ಬಹಳ ವಿಜೃಂಭಣೆಯಿOದ ನೆರವೇರಿತು, ಪ್ರತಿಷ್ಠಾಪನೆ ಸಂದರ್ಭದಲ್ಲಿ ಶ್ರೀ ಕಾಗಿನೆಲೆ ಕನಕ ಗುರು ಪೀಠದ ಶ್ರೀಗಳಾದ ಶ್ರೀ ಶ್ರೀ ಈಶ್ವರಾನಂದ ಪುರಿ ಮಹಾಸ್ವಾಮಿಜಿಗಳು ಭಾಗವಹಿಸಿ ಆಶೀರ್ವಚನ ನೀಡಿದರು.

ಕೊರಟಗೆರೆ ಗಡಿಭಾಗದ ಕೊಡಿಗೇಹಳ್ಳಿ ಬಳಿಯ ರಂಗನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗದ ಶ್ರೀ ಅಭಯ ಆಂಜನೇಯ ಸ್ವಾಮಿ ನೂತನ ದೇವಸ್ಥಾನದ ಶ್ರೀ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ದ್ವಜಸ್ತಂಬ ಪ್ರತಿಷ್ಠಾಪನೆ ನೆರವೇರಿತು, ಕಾಗಿನೆಲೆ ಶ್ರೀ ಈಶ್ವರಾನಂದ ಪುರಿ ಮಹಾಸ್ವಾಮೀಜಿಗಳು ದೇವತಾ ಕಾರ್ಯದಲ್ಲಿ ಭಾಗವಹಿಸಿದ್ದರು
ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಪೂಜಾ ಕಾರ್ಯಕ್ಕೆ ಕಾಗಿನಲ್ಲಿ ಶ್ರೀ ಈಶ್ವರನಂದಪುರಿ ಮಹಾಸ್ವಾಮೀಜಿಗಳು ಆಗಮಿಸುತ್ತಿದ್ದಂತೆ , ನೂರಾರು ಮಹಿಳೆಯರು ಪೂರ್ಣ ಕುಂಭದೊAದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು, ಶ್ರೀಗಳು ದೇವಾಲಯದಲ್ಲಿ ಪೂಜೆ ಸಲ್ಲಿಸಿ ಭಕ್ತರಿಗೆ ಆಶೀರ್ವದಿಸಿದರು..
ದೇವರುಗಳನ್ನ ಸದ್ಗುದ್ದಿ ಕೊಡುವ ಎಂದು ಪ್ರಾರ್ಥಿಸಿ ಕೊಡಬೇಕು, ಮನುಷ್ಯನಿಗೆ ಹಣ, ಐಶ್ವರ್ಯ ಎಲ್ಲ ಇದ್ದರೂ ನೆಮ್ಮದಿ ಇಲ್ಲ, ನೆಮ್ಮದಿ ದೊರಕಬೇಕಾದರೆ ದೇವರು ಮರೆವು ಹೋಗಬೇಕು.