ಹಾಸನ : ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಂದು ಸೈಡ್ ಸಮಾವೇಶ ಆಗಬಾರದು ಎಂದು ಪಕ್ಷದಲ್ಲಿಯೇ ಗೊಂದಲ ಉಂಟಾಗಿ ಅಹಿಂದ ಸಮಾವೇಶ ಬದಲು ಈಗ ಸ್ವಾಭಿಮಾನಿ ಸಮಾವೇಶಕ್ಕೆ ಮುಂದಾಗಿದ್ದಾರೆ ಎಂದು ಬಿಜೆಪಿ ಮುಖಂಡರಾದ ಜಿ. ದೇವರಾಜೇಗೌಡ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಪಕ್ಷವು ಡಿಸೆಂಬರ್ 5 ರಂದು ಬೃಹತ್ ಸಮಾವೇಶವನ್ನು ಹಮ್ಮಿಕೊಂಡು ಈಗಾಗಲೇ ಎಲ್ಲಾ ಪೂರ್ವ ಸಿದ್ಧತೆಗಳು ಆಗಿದೆ. ಅಂದು ಇಡೀ ಸಚಿವ ಸಂಪೂಟವೇ ಹಾಸನ ಜಿಲ್ಲೆಗೆ ಆಗಮಿಸಿ ಸ್ಥಳ ವೀಕ್ಷಣೆ ಮಾಡಿ ಜಾಗ ಕೂಡ ನಿಗಧಿ ಮಾಡಿದೆ. ವಿರೋಧಿಗಳಿಗೆ ಸೆಡ್ಡು ಹೊಡೆಯಲು ಮತ್ತು ಉತ್ತರ ಕೊಡಲು ಈ ಸಮಾವೇಶ ಮಾಡಲಾಗುತ್ತಿದೆ. ಮೊದಲು ಅಹಿಂದ ಸಮಾವೇಶ ಎಂದು ಹೇಳಲಾಗಿತ್ತು. ಹೀಗೆ ಮಾಡಿದರೇ ಸಿದ್ದರಾಮಯ್ಯ ಅವರ ಒಂದು ಸೈಡ್ ಸಮಾವೇಶ ಆಗುತ್ತದೆ ಎಂದು ಹೇಳಿ ಪಕ್ಷದಲ್ಲೆ ಗೊಂದಲಗಳು ಪ್ರಾರಂಭವಾಗಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಆ ಸಭೆಯಿಂದ ದೂರ ಉಳಿಯುವುದಾಗಿ ಮಾಹಿತಿ ಬಂದ ನಂತರ ಈಗ ಸ್ವಾಭಿಮಾನಿ ಸಮಾವೇಶ ಎಂದು ಮಾಡುತ್ತಿದ್ದಾರೆ ಎಂಬುದು ಬಲ್ಲ ಮೂಲಗಳಿದ ತಿಳಿದು ಬಂದಿದೆ ಎಂದರು.
ಬಿಜೆಪಿ ಪಕ್ಷದ ಜವಬ್ಧಾರಿ ವ್ಯಕ್ತಿಯಾಗಿ ಸರಕಾರಕ್ಕೆ ಹೇಳುವುದು ಏನೆಂದರೇ ಇದು ಸರಕಾರಿ ಸಮಾವೇಶನಾ, ರಾಜ್ಯ ಸರಕಾರದ ಹಣದಿಂದ ಮಾಡುತ್ತೀದಿರಾ. ಇದು ಸರಕಾರಿ ಅಸಮಾವೇಶನಾ ಇಲ್ಲ ಪಕ್ಷದ ಸಮಾವೇಶನ ಬಗ್ಗೆ ಸ್ಪಷ್ಟಿಕರಣ ಕೊಡುವಂತೆ ಡಿ.ಕೆ. ಶಿವಕುಮಾರ್ ಅವರಿಗೆ ಪ್ರಶ್ನೆ ಮಾಡಿದರು. ಹುಡಾ ಜಾಗ ಅಭಿವೃದ್ಧಿ ಪಡಿಸಿರುವ ಜಾಗದಲ್ಲಿ ಈ ಸಮಾವೇಶ ನಡೆಯುತ್ತಿದೆ. ಇದು ಯಾರ ಮನೆ ಆಸ್ತಿ ಎಂದು ಆ ಜಾಗದಲ್ಲಿ ನಡೆಸುತ್ತಿದ್ದೀರಾ. ಈ ಜಾಗದಲ್ಲಿ ಅನುಮತಿ ಕೊಟ್ಟಿದವರು ಯಾರು? ಹುಡಾ ಮತ್ತು ನಗರಸಭೆಗೆ ಹೋಗಿ ಈ ಬಗ್ಗೆ ಮಾಹಿತಿ ಪಡೆಯಲಾಗಿದೆ. ಈ ಜಾಗವನ್ನು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 15 ವರ್ಷಕ್ಕೆ ಲೀಸಿಗೆ ಕೊಡಲಾಗಿದೆ. ಯಾರಿಗೂ ಬಾಡಿಗೆಗೆ ಕೊಡಬಾರದೆಂದು ಷರತ್ತುಗಳಿವೆ. ಆದರೇ ಸರಕಾರಿ ಕಾರ್ಯಕ್ರಮಕ್ಕೆ ಇಲ್ಲಿ ಅವಕಾಶವಿದೆ. ಪಕ್ಷದ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ. ಈ ವೇಳೆ ಜಿಲ್ಲಾಡಳಿತ ಏನು ಮಾಡುತ್ತಿದೆ ಎಂದರು.
ಹಾಸನದಲ್ಲಿ ಮೂವರು ದೇವತೆಯಂತೆ ಅಧಿಕಾರಿಗಳು ಇದ್ದು, ಸರಕಾರದ ಸಚಿವರು ಬಂದಾಗ ಮೂರು ಜನ ದೇವತೆಗಳು ಇದ್ದೆ ಇರುತ್ತಾರೆ. ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಬರುತ್ತಾರೆ ಎಂದಾಗ ಅವರಿಗೆ ಭದ್ರತೆ ಕೊಡಬೇಕು ಮಾಡಲಿ ಸಾಕು. ಇದು ಸರಕಾರಿ ಕಾರ್ಯಕ್ರಮನಾ ಎಂದು ಸಿಡಿಮಿಡಿಗೊಂಡರು.
ಸರಕಾರದಿಂದ ನೇಮಿಸಲ್ಪಟ್ಟಿದ್ದೇವೆ ಎಂದು ಪಕ್ಷದ ಕಾರ್ಯಕ್ರಮಕ್ಕೆ ಹೋದರೇ ಸಾಮಾಜಿಕ ನ್ಯಾಯ ಬದ್ಧತೆ, ಪ್ರಜಾಪ್ರಭುತ್ವ ಎಲ್ಲಿದೆ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ದಿವಾಳಿ ಆಗಿರುವ ಸರಕಾರ ಇದು. ಯಾವ ನೈತಿಕತೆ ಇಟ್ಟುಕೊಂಡು ಈ ಸಮಾವೇಶ ಮಾಡುತ್ತಿದ್ದೀರಾ ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ಹರಿಹಾಯ್ದರು. ಈ ಸಮಾವೇಶ ಏಕೆ ಮತ್ತು ಯಾವ ಕಾರಣಕ್ಕೆ ಮಾಡುತ್ತೀದ್ದಾರೆ ಎಂದು ಹಾಸನದ ಕಾಂಗ್ರೆಸ್ ಪಕ್ಷದವರಿಗೆ ಗೊತ್ತಿಲ್ಲದೆ ಇರುವುದು ಇದೊಂದು ದುರಂತವಾಗಿದೆ ಎಂದು ಹೇಳಿದರು.