IPL 2025: 4 ತಿಂಗಳು ಮುಂಚೆಯೇ ಅಭ್ಯಾಸ ಶುರು ಮಾಡಿದ RCB

IPL 2025: 4 ತಿಂಗಳು ಮುಂಚೆಯೇ ಅಭ್ಯಾಸ ಶುರು ಮಾಡಿದ RCB

IPL 2025 RCB: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 18ನೇ ಆವೃತ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) 22 ಸದಸ್ಯರ ಬಲಿಷ್ಠ ಪಡೆಯನ್ನು ರೂಪಿಸಿಕೊಂಡಿದೆ. ಇವರಲ್ಲಿ 8 ವಿದೇಶಿ ಆಟಗಾರರಿದ್ದರೆ, 14 ಭಾರತೀಯರಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್ 18 ಆರಂಭಕ್ಕೆ ಇನ್ನೂ ನಾಲ್ಕು ತಿಂಗಳುಗಳಿವೆ. ಆದರೆ ಅದಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಮಾಸ್ಟರ್ ಪ್ಲ್ಯಾನ್ ಶುರು ಮಾಡಿದೆ.

RCB ಫ್ರಾಂಚೈಸಿಯು ಬೆಂಗಳೂರಿನಲ್ಲಿ ಪ್ರೀ ಸೀಸನ್ ಅಭ್ಯಾಸ ಕ್ಯಾಂಪ್ಗಳನ್ನು ಆರಂಭಿಸಿದ್ದು, ಈ ಅಭ್ಯಾಸ ಶಿಬಿರದಲ್ಲಿ ಸ್ಟಾರ್ ಆಟಗಾರ ಭುವನೇಶ್ವರ್ ಕುಮಾರ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದಾರೆ.

ಆರ್ಸಿಬಿ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಕೃನಾಲ್ ಪಾಂಡ್ಯ, ಜಿತೇಶ್ ಶರ್ಮಾ ಸೇರಿದಂತೆ ಒಂದಷ್ಟು ಆಟಗಾರರು ಕಠಿಣ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಮುಂದಿನ ಸೀಸನ್ಗಾಗಿ ಭರ್ಜರಿ ತಯಾರಿಯಲ್ಲಿದ್ದಾರೆ.

ಐಪಿಎಲ್ 2025 ಮಾರ್ಚ್ 14 ರಿಂದ ಶುರುವಾಗಲಿದ್ದು, ಅದಕ್ಕೂ ನಾಲ್ಕು ತಿಂಗಳು ಮುಂಚಿತವಾಗಿ ಅಭ್ಯಾಸ ಕ್ಯಾಂಪ್ ಶುರು ಮಾಡಿ RCB ಕುತೂಹಲ ಮೂಡಿಸಿದೆ. ಈ ಮೂಲಕ ಈ ಸಲ ಕಪ್ ಗೆಲ್ಲಲು ಭರ್ಜರಿ ಪ್ಲ್ಯಾನ್ ಗಳನ್ನು ರೂಪಿಸುತ್ತಿದ್ದಾರೆ. ಈ ಯೋಜನೆಯಂತೆ ಆರ್ಸಿಬಿ ಈ ಬಾರಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಝಲ್ವುಡ್, ರಸಿಖ್ ಸಲಾಂ, ಸುಯೇಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ಜೇಕೊಬ್ ಬೆಥೆಲ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರ, ದೇವದತ್ ಪಡಿಕ್ಕಲ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಲುಂಗಿ ಎನ್ಗಿಡಿ.

Leave a Reply

Your email address will not be published. Required fields are marked *