ಐಪಿಎಲ್ 2025: ಆರ್‌ಸಿಬಿ ತಂಡದ ಆಟಗಾರರ ಪಟ್ಟಿ, ರಿಟೈನ್‌ ಹಾಗೂ ಹರಾಜಿನಲ್ಲಿ ಖರೀದಿಸಿದ ಆಟಗಾರರ ವಿವರ

ಐಪಿಎಲ್ 2025: ಆರ್‌ಸಿಬಿ ತಂಡದ ಆಟಗಾರರ ಪಟ್ಟಿ, ರಿಟೈನ್‌ ಹಾಗೂ ಹರಾಜಿನಲ್ಲಿ ಖರೀದಿಸಿದ ಆಟಗಾರರ ವಿವರ

ಐಪಿಎಲ್‌ ಹರಾಜಿನಲ್ಲಿ ಆರ್‌ಸಿಬಿ ತಂಡ ಬಿಡ್ಡಿಂಗ್‌ ವಾರ್‌ ನಡೆಸಿದೆ. 2025ರ ಆವೃತ್ತಿಯ ಹರಾಜಿಗೂ ಮುನ್ನ ತಂಡವು ಮೂವರು ಆಟಗಾರರನ್ನು ರಿಟೈನ್‌ ಮಾಡಿಕೊಂಡಿತ್ತು. ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿಯನ್ನು ತಂಡವು 21 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಇವರೊಂದಿಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ರಜತ್ ಪಾಟೀದಾರ್ ಅವರನ್ನು 11 ಕೋಟಿ ರೂಗೆ ರಿಟೈನ್‌ ಮಾಡಿತ್ತು. ಅತ್ತ ಎಡಗೈ ವೇಗಿ ಯಶ್ ದಯಾಲ್ ಅವರ ಮೇಲೆ ಭಾರಿ ವಿಶ್ವಾಸ ಇಟ್ಟ ಫ್ರಾಂಚೈಸಿ 5 ಕೋಟಿ ರೂ. ಕೊಟ್ಟು ತಂಡದಲ್ಲೇ ಉಳಿಸಿಕೊಂಡಿತು. ಇದೀಗ ಎರಡು ದಿನಗಳ ಕಾಲ ನಡೆದ ಮೆಗಾ ಹರಾಜಿನಲ್ಲಿ ಮತ್ತಷ್ಟು ಬಲಿಷ್ಠ ಆಟಗಾರರನ್ನು ತೆಕ್ಕೆಗೆ ಹಾಕಿಕೊಂಡಿದೆ. ಆದರೆ, ನಾಯಕನ ಸ್ಥಾನಕ್ಕೆ ಸೂಕ್ತವಾಗುವ ಆಟಗಾರರು ಹೊಸ ಖರೀದಿಯಲ್ಲಿ ಇಲ್ಲ

ಹರಾಜಿನಲ್ಲಿ 83 ಕೋಟಿ ರೂ ಪರ್ಸ್‌ ಜೊತೆಗೆ ಹರಾಜಿಗೆ ಇಳಿಯಿದ ತಂಡವು 0.75 ಕೋಟಿ ರೂ. ಮಾತ್ರ ಉಳಿಸಿದೆ. ತಂಡವು ಪ್ರಮುಖ ಆಟಗಾರರನ್ನು ಖರೀದಿಸುವ ಗುರಿಯೊಂದಿಗೆ ಹರಾಜಿಗಿಳಿಯಿತು. ಮೊದಲ ದಿನದ ಬಿಡ್ಡಿಂಗ್‌ನಲ್ಲಿ ತಂಡವು ಲಿಯಾಮ್ ಲಿವಿಂಗ್‌ಸ್ಟನ್, ಜೋಶ್‌ ಹೇಜಲ್‌ವುಡ್‌, ಫಿಲ್‌ ಸಾಲ್ಟ್‌ ಸೇರಿದಂತೆ ಕೆಲವು ಆಟಗಾರರನ್ನು ಖರೀದಿಸಿತ್ತು. ಎರಡನೇ ದಿನ, ವೇಗಿ ಭುವನೇಶ್ವರ್‌ ಕುಮಾರ್‌ ಪ್ರಮುಖ ಖರೀದಿಯಾದರು. ಉಳಿದಂತೆ ಕೃನಾಲ್‌ ಪಾಂಡ್ಯ, ಕನ್ನಡಿಗ ದೇವದತ್ ಪಡಿಕ್ಕಲ್ ಪ್ರಮುಖ ಖರೀದಿಯಾಗಿವೆ.

ಐಪಿಎಲ್‌ 2025ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಹೀಗಿದ್ದಾರೆ. ಮೊದಲ ಮತ್ತು ಎರಡನೇ ದಿನದ ಹರಾಜಿನಲ್ಲಿ ತಂಡ ಖರೀದಿ ಮಾಡಿದ ಆಟಗಾರರ ಪಟ್ಟಿ ಇಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಉಳಿಸಿಕೊಂಡ ಆಟಗಾರರು

ವಿರಾಟ್ ಕೊಹ್ಲಿ – 21 ಕೋಟಿ

ರಜತ್ ಪಾಟೀದಾರ್ – 11 ಕೋಟಿ

ಯಶ್ ದಯಾಳ್ – 5 ಕೋಟಿ

ಮೆಗಾ ಹರಾಜಿನಲ್ಲಿ ಖರೀದಿಸಿದ ಆಟಗಾರರು

ಲಿಯಾಮ್ ಲಿವಿಂಗ್‌ಸ್ಟನ್ -8.75 ಕೋಟಿ ರೂ.

ಫಿಲ್‌ ಸಾಲ್ಟ್‌ -11.50 ಕೋಟಿ ರೂ.

ಜಿತೇಶ್‌ ಶರ್ಮಾ ಶರ್ಮಾ -11 ಕೋಟಿ ರೂ

ಜೋಶ್‌ ಹೇಜಲ್‌ವುಡ್‌ -12.50 ಕೋಟಿ‌

ರಾಸಿಖ್‌ ದಾರ್‌ -6 ಕೋಟಿ ರೂ.

ಸುಯಶ್ ಶರ್ಮಾ -2.60 ಕೋಟಿ ರೂ.

ಕೃನಾಲ್‌ ಪಾಂಡ್ಯ -5.75 ಕೋಟಿ ರೂ.

ಭುವನೇಶ್ವರ್‌ ಕುಮಾರ್‌ 10.75 ಕೋಟಿ ರೂ.

ಸ್ವಪ್ನಿಲ್ ಸಿಂಗ್ (50 ಲಕ್ಷ ರೂ.)

ಟಿಮ್ ಡೇವಿಡ್ (3 ಕೋಟಿ ರೂ.)

ರೊಮಾರಿಯೊ ಶೆಫರ್ಡ್ (ರೂ. 1.50 ಕೋಟಿ)

ನುವಾನ್ ತುಷಾರ (1.60 ಕೋಟಿ ರೂ.)

ಮನೋಜ್ ಭಾಂಡಗೆ (30 ಲಕ್ಷ ರೂ.)

ಜಾಕೋಬ್ ಬೆಥೆಲ್ (2.60 ಕೋಟಿ ರೂ.)

ದೇವದತ್ ಪಡಿಕ್ಕಲ್ (ರೂ. 2 ಕೋಟಿ)

ಸ್ವಸ್ತಿಕ್ ಚಿಕಾರ (30 ಲಕ್ಷ ರೂ.)

ಲುಂಗಿ ಎನ್‌ಗಿಡಿ (1 ಕೋಟಿ ರೂ.)

ಅಭಿನಂದನ್ ಸಿಂಗ್ (30 ಲಕ್ಷ ರೂ.)

ಮೋಹಿತ್ ರಥಿ (30 ಲಕ್ಷ ರೂ.).

ತಂಡದ ಬಳಿ ಉಳಿದ ಪರ್ಸ್: 0.75 ಕೋಟಿ ರೂ.

ತಂಡ ರಿಲೀಸ್‌ ಮಾಡಿದ ಆಟಗಾರರು

ಫಾಫ್ ಡು ಪ್ಲೆಸಿಸ್, ಮೊಹಮ್ಮದ್ ಸಿರಾಜ್, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ಸೌರವ್ ಚೌಹಾಣ್, ದಿನೇಶ್ ಕಾರ್ತಿಕ್, ಮನೋಜ್ ಭಾಂಡಗೆ, ಟಾಮ್ ಕರನ್, ವಿಲ್ ಜಾಕ್ಸ್, ಕ್ಯಾಮರೂನ್ ಗ್ರೀನ್, ಮಹಿಪಾಲ್ ಲೊಮ್ರರ್, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್, ಮಯಾಂಕ್ ಡಾಗರ್, ಲಾಕಿ ಫರ್ಗುಸನ್, ರಾಜನ್ ಕುಮಾರ್, ಹಿಮಾಂಶು ಶರ್ಮಾ, ಕರ್ಣ್ ಶರ್ಮಾ, ಸ್ವಪ್ನಿಲ್ ಸಿಂಗ್, ರೀಸ್ ಟೋಪ್ಲಿ, ವಿಜಯ್‌ಕುಮಾರ್ ವೈಶಾಕ್.

Leave a Reply

Your email address will not be published. Required fields are marked *