ಭ್ರಷ್ಟರು ಕಬಳಿಸಿದ್ದನ್ನು ವಾಪಸ್ ನೀಡಿದರೆ ಶಿಕ್ಷೆಯಿಂದ ಪಾರಾಗಲು ಸಾಧ್ಯವೇ..? : ಜೆಡಿಎಸ್ ಟೀಕೆ

ಭ್ರಷ್ಟರು ಕಬಳಿಸಿದ್ದನ್ನು ವಾಪಸ್ ನೀಡಿದರೆ ಶಿಕ್ಷೆಯಿಂದ ಪಾರಾಗಲು ಸಾಧ್ಯವೇ..? : ಜೆಡಿಎಸ್ ಟೀಕೆ

ಬೆಂಗಳೂರು – ಕಾನೂನು ಬಾಹಿರವಾಗಿ ರಾಜಕೀಯ ಪ್ರಭಾವ ಬಳಸಿ 5 ಎಕರೆ ಜಮೀನು ಕಬಳಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬವು ಕಾನೂನು ಕುಣಿಕೆಯಿಂದ ಪಾರಾಗಲು ಈಗ ಜಮೀನು ವಾಪಸ್ ನೀಡಿದೆ ಎಂದು ಜೆಡಿಎಸ್ ಆರೋಪಿಸಿದೆ.

ಈ ಸಂಬಂಧ ‘ಎಕ್ಸ್’ನಲ್ಲಿ ಪೊಸ್ಟ್ ಮಾಡಿರುವ ಜೆಡಿಎಸ್, ಭ್ರಷ್ಟರು ಕಬಳಿಸಿದ್ದನ್ನು ವಾಪಸ್ ಮಾಡಿದರೇ ಶಿಕ್ಷೆಯಿಂದ ಪಾರಾಗಲು ಸಾಧ್ಯವೇ? ಎಂದು ಪ್ರಶ್ನಿಸಿದೆ.ಈ ಅಕ್ರಮಗಳ ಬಗ್ಗೆ ವಿರೋಧ ಪಕ್ಷಗಳು ಧ್ವನಿ ಎತ್ತಿ ದಾಖಲೆಗಳ ಸಮೇತ ರಾಜ್ಯಪಾಲರಿಗೆ ದೂರು ನೀಡಿದ್ದವು. ಭಂಡತನದಿಂದ ಸಮರ್ಥನೆ ಮಾಡಿಕೊಳ್ಳುತ್ತಿದ್ದ ಸಚಿವ ಪ್ರಿಯಾಂಕ ಖರ್ಗೆ ಮತ್ತು ಕುಟುಂಬದವರು ಈಗ ಅಕ್ರಮವಾಗಿ ಕಬಳಿಸಿದ್ದ ಸಿಎ ನಿವೇಶನವನ್ನು ಕೆಐಎಡಿಬಿಗೆ ವಾಪಸ್ ನೀಡಿದ್ದಾರೆ.

ಮುಡಾ ಹಗರಣ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದವರು ಕಾನೂನು ಸುರುಳಿ ಬಿಗಿಯಾಗುತ್ತಿದ್ದಂತೆ ನಿವೇಶನ ಹಿಂದಿರುಗಿಸಿದ್ದರು. ಈಗ ಖರ್ಗೆ ಕುಟುಂಬಕ್ಕೂ ಕಾನೂನಿನ ಭಯ ಶುರುವಾಗಿದೆ ಎಂದು ವಾಗ್ದಾಳಿ ನಡೆಸಿದೆ.

ಕೆಟ್ಟ ಮೇಲೆ ಬುದ್ಧಿ ಬಂತು ಅಲ್ಲವೇ ಖರ್ಗೆ ಅವರೇ? ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು. ಕಳ್ಳ ಕದ್ದ ಮಾಲು ವಾಪಸ್ ಕೊಟ್ಟ ತಕ್ಷಣ ಆತನಿಗೆ ವಿನಾಯಿತಿ ಸಾಧ್ಯವಿಲ್ಲ. ತನಿಖೆ ಎದುರಿಸಲೇಬೇಕು ಎಂದು ಜೆಡಿಎಸ್ ಟೀಕಿಸಿದೆ.

Leave a Reply

Your email address will not be published. Required fields are marked *