ತುಮಕೂರು: ತುಮಕೂರು ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಎಷ್ಟಿದೆಯೋ ನಿಖರವಾಗಿ ಗೊತ್ತಿಲ್ಲ, ಅದರೆ ಸಮುದಾಯದ ನಡುವೆ ಒಳಜಗಳಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಪ್ರಗತಿಪರ ವಿಚಾರಧಾರೆಗಳನ್ನು ಹೊಂದಿದಂತೆ ಕಾಣುವ ಇಶ್ರತ್ ಹೆಸರಿನ ಮಹಿಳೆಯ ವಿರುದ್ಧ ಸ್ಥಳೀಯ ಮುಸ್ಲಿಂ ಧಾರ್ಮಿಕ ಮುಖಂಡರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ದೂರೊಂದನ್ನು ಸಲ್ಲಿಸಿ ಅವರು ದೇಶವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆಂದು ಹೇಳಿದ್ದಾರೆ.
ಮೆಹದಿ ಫೌಂಡೇಶನ್ ಇಂಟರ್ನ್ಯಾಶನಲ್ ಹೆಸರಿನ ಸಂಸ್ಥೆಯು ಪಾಕಿಸ್ತಾನ ಮೂಲದ ಸೂಫಿ ಪಂಥದ ಪ್ರಚಾರದಲ್ಲಿ ಇಶ್ರತ್ ತೊಡಗಿದ್ದರೆಂದು ಅರೋಪಿಸಿದೆ. ದೇಶದ್ರೋಹದಂಥ ಯಾವುದೇ ಕೆಲಸ ನಡೆದಿಲ್ಲ, ತನ್ನ ಆಚಾರ ವಿಚಾರಗಳಿಂದ ಅವರಿಗೇನು ಸಮಸ್ಯೆ ಇದೆಯೋ ಗೊತ್ತಿಲ್ಲ, ಇಸ್ಲಾಂ ಧರ್ಮದ ಯಾವ ಕಟ್ಟುಪಾಡನ್ನೂ ತಾನು ಉಲ್ಲಂಘಿಸಿಲ್ಲ ಎಂದು ಇಶ್ರತ್ ಹೇಳುತ್ತಾರೆ.
For More Updates Join our WhatsApp Group :