ಬೆಂಗಳೂರು: ನಟ ದರ್ಶನ್ ಜೈಲಿನಲ್ಲಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಜೈಲು ಜೀವನ ಎಷ್ಟು ಕಠಿಣವೋಂದು ಅನುಭವ ಹಂಚಿಕೊಂಡಿದ್ದಾರೆ ಮಡೆನೂರು ಮನು. ‘ಜೈಲು ಎಂದರೆ ನರಕಯಾತನೆ, ಅಲ್ಲಿದ್ದರೆ ಡಿಪ್ರೆಶನ್ ಕಾಡುವುದು ಸಹಜ’ ಎಂದು ಅವರು ಹೇಳಿದ್ದಾರೆ.
ಮಡೆನೂರು ಮನು ಹೇಳಿದ್ದೇನು?
- * ಜೈಲು ಜೀವನ ತುಂಬಾ ಕಷ್ಟಕರ, ಕುಟುಂಬದಿಂದ ದೂರವಾಗುವುದರಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ.
- * ‘ಯಾವ ಶತ್ರುಗಳಿಗೂ ಈ ಶಿಕ್ಷೆ ಬೇಡ’ ಎಂದು ಅಭಿಪ್ರಾಯಪಟ್ಟಿದ್ದಾರೆ.
- * ಪ್ರತಿದಿನವೂ ನರಕ ಅನುಭವ, ದಿನ ಕಳೆಯುವುದು ಕಷ್ಟ.
- * ಸ್ವಲ್ಪ ಸಮಯ ಯಾರಾದರೂ ಭೇಟಿ ನೀಡಿದರೆ ಮಾತ್ರ ಮನಸ್ಸಿಗೆ ಹಗುರ.
- * ಜೈಲು ದಿನಚರಿ: ಬೆಳಿಗ್ಗೆ 7ಕ್ಕೆ ತಿಂಡಿ, 11ಕ್ಕೆ ಮಧ್ಯಾಹ್ನದ ಊಟ, ಸಂಜೆ 5ಕ್ಕೆ ಭೋಜನ.
- * ಕೇಸಿನಲ್ಲಿರುವ ವಿವಿಧ ಜನರೊಂದಿಗೆ ಇರಬೇಕಾದ ಪರಿಸ್ಥಿತಿ ಕಠಿಣ.
- ಮನು, ಅತ್ಯಾಚಾರ ಆರೋಪ ಪ್ರಕರಣದಲ್ಲಿ ಕೆಲಕಾಲ ಜೈಲಿನಲ್ಲಿ ಇದ್ದು, ಅಲ್ಲಿ ಅನುಭವಿಸಿದ ತೊಂದರೆಗಳನ್ನು ಹಂಚಿಕೊಂಡಿದ್ದಾರೆ.
- ದರ್ಶನ್ ಬೇಗ ಬಿಡುಗಡೆಯಾಗಲಿ’ ಎಂದು ತಮ್ಮ ಪ್ರಾರ್ಥನೆಯನ್ನು ತಿಳಿಸಿದ್ದಾರೆ.
For More Updates Join our WhatsApp Group :

