ತಮಿಳುನಾಡು: ಜಪಾನಿಯರು ವಿಶ್ವಶಾಂತಿಗಾಗಿ ತಮಿಳುನಾಡಿನ ತಿರುವಣೈಕೋಲಿ ಅರುಲ್ಮಿಗು ಜಂಬುಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸಯೋಕಾ ಕಿಮುರಾ ಎಂಬುವವರು ಮಾತನಾಡಿ, ನಾವು ಜಪಾನ್ನಿಂದ ಬಂದಿದ್ದೇವೆ, ಇಲ್ಲಿ 120 ಮಂದಿ ಸೇರಿ ವಿಶೇಷ ಯಾಗ ಮಾಡಿದ್ದೇವೆ. ನಮ್ಮ ಇತಿಹಾಸವನ್ನು ಗಮನಿಸಿದರೆ ಜಪಾನೀಸ್ ಹಾಗೂ ತಮಿಳು ನಡುವೆ ಸಂಪರ್ಕವಿರುವುದು ತಿಳಿದುಬರುತ್ತದೆ. ದೇವಸ್ಥಾನದ ವಾಸ್ತುಶಿಲ್ಪವನ್ನು ಕಂಡು ನಾವು ಬೆರಗಾಗಿದ್ದೇವೆ. ಪಾಂಡಿಚೇರಿಯಲ್ಲಿ ಹೊಸ ಆಶ್ರಮವನ್ನು ಕಟ್ಟುವ ಕನಸಿದೆ. ನಾವು ಇಲ್ಲಿ 100ಕ್ಕೂ ಅಧಿಕ ಆಶ್ರಮಕ್ಕೆ ಭೇಟಿ ನೀಡಲಿದ್ದೇವೆ. ಎರಡು ದಿನಕ್ಕೊಂದು ಪೂಜೆ, ಅಭಿಶೇಕ, ಯಾಗ ಮಾಡಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಜಪಾನಿಯರು ವಿಶ್ವಶಾಂತಿಗಾಗಿ ತಮಿಳುನಾಡಿನ ತಿರುವಣೈಕೋಲಿ ಅರುಲ್ಮಿಗು ಜಂಬುಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸಯೋಕಾ ಕಿಮುರಾ ಎಂಬುವವರು ಮಾತನಾಡಿ, ನಾವು ಜಪಾನ್ನಿಂದ ಬಂದಿದ್ದೇವೆ, ಇಲ್ಲಿ 120 ಮಂದಿ ಸೇರಿ ವಿಶೇಷ ಯಾಗ ಮಾಡಿದ್ದೇವೆ. ನಮ್ಮ ಇತಿಹಾಸವನ್ನು ಗಮನಿಸಿದರೆ ಜಪಾನೀಸ್ ಹಾಗೂ ತಮಿಳು ನಡುವೆ ಸಂಪರ್ಕವಿರುವುದು ತಿಳಿದುಬರುತ್ತದೆ. ದೇವಸ್ಥಾನದ ವಾಸ್ತುಶಿಲ್ಪವನ್ನು ಕಂಡು ನಾವು ಬೆರಗಾಗಿದ್ದೇವೆ. ಪಾಂಡಿಚೇರಿಯಲ್ಲಿ ಹೊಸ ಆಶ್ರಮವನ್ನು ಕಟ್ಟುವ ಕನಸಿದೆ. ನಾವು ಇಲ್ಲಿ 100ಕ್ಕೂ ಅಧಿಕ ಆಶ್ರಮಕ್ಕೆ ಭೇಟಿ ನೀಡಲಿದ್ದೇವೆ. ಎರಡು ದಿನಕ್ಕೊಂದು ಪೂಜೆ, ಅಭಿಶೇಕ, ಯಾಗ ಮಾಡಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.