ಮೆಟ್ಟಿಲು ಹತ್ತಿ ಆರೋಗ್ಯ ಕಾಪಾಡಿಕೊಳ್ಳಿ!

ಮೆಟ್ಟಿಲು ಹತ್ತಿ ಆರೋಗ್ಯ ಕಾಪಾಡಿಕೊಳ್ಳಿ!

ಲಿಫ್ಟ್ ಬಿಟ್ಟು ಮೆಟ್ಟಿಲು ಹತ್ತಿದ್ರೆ ಹೇಗೆ ಲಾಭ?

ಇಂದಿನ ವೇಗದ ಜೀವನದಲ್ಲಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಂದು ಸವಾಲಾಗಿದೆ. ಜನರು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮಧುಮೇಹ ತೂಕ ಹೆಚ್ಚಾಗುವುದು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚುತ್ತಿದೆ. ಅದರಲ್ಲಿಯೂ ಬೊಜ್ಜುಅನೇಕರಲ್ಲಿ ಕಾಡುತ್ತಿರುವ ಸಮಸ್ಯೆಯಾಗಿದೆ. ಹಾಗಾಗಿ ಅನೇಕರು ಜಿಮ್‌ಗಳಿಗೆ ಸೇರುತ್ತಿದ್ದಾರೆ, ಇದು ಆರೋಗ್ಯವಾಗಿರಲು ಸಹಾಯ ಮಾಡುತ್ತದೆಯಾದರೂ ಸಾಕಷ್ಟು ಹಣ ಖರ್ಚಾಗುತ್ತದೆ. ಅದರ ಜೊತೆಗೆ ವಿವಿಧ ರೀತಿಯ ಆಹಾರ ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ. ಆದರೆ ನಿಮ್ಮ ಮನೆಯಲ್ಲಿರುವ ಮೆಟ್ಟಿಲು ಹತ್ತುವುದರಿಂದ  ಒಂದು ರೂಪಾಯಿಯ ಖರ್ಚಿಲ್ಲದೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರೆ ನಂಬುತ್ತೀರಾ… ಹೌದು, ಮನೆಯಲ್ಲಿರುವ ಮೆಟ್ಟಿಲುಗಳು ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಹಾಗಾದರೆ ಮೆಟ್ಟಿಲು ಹತ್ತುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಸ್ಟೋರಿ ಮೂಲಕ ತಿಳಿದುಕೊಳ್ಳಿ.

6 ನಿಮಿಷ ಮೆಟ್ಟಿಲು ಹತ್ತುವುದರಿಂದ ಸಿಗುವ ಪ್ರಯೋಜನ:

ಮೆಟ್ಟಿಲು ಹತ್ತುವುದರಿಂದ ದೇಹಕ್ಕೆ ಅದ್ಭುತವಾದ ಆರೋಗ್ಯ ಪ್ರಯೋಜನಗಳು ಸಿಗುತ್ತದೆ. ದೇಹದ ಶಕ್ತಿಯನ್ನು ಹೆಚ್ಚಿಸುವುದು, ಕೊಬ್ಬನ್ನು ಕಡಿಮೆ ಮಾಡುವುದು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುವಂತಹ ಹಲವಾರು ಉಪಯೋಗಗಳು ಈ ಒಂದು ಚಟುವಟಿಕೆಯಿಂದ ಸಿಗುತ್ತದೆ. ನಿಯಮಿತ ವಾಕಿಂಗ್ ಅಥವಾ ಜಾಗಿಂಗ್ ಗಿಂತ ಮೆಟ್ಟಿಲುಗಳನ್ನು ಹತ್ತುವುದು ದೇಹಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಸಂಶೋಧನೆಯೂ ಸೂಚಿಸುತ್ತದೆ. 6 ನಿಮಿಷಗಳ ಕಾಲ ನಿರಂತರವಾಗಿ ಮೆಟ್ಟಿಲುಗಳನ್ನು ಹತ್ತುವುದರಿಂದ ದೇಹದ ಒಟ್ಟು ಕೊಬ್ಬಿನ ಶೇಕಡಾ 15 ರಷ್ಟು ಕಡಿಮೆಯಾಗುತ್ತದೆ. ವಿಶೇಷ ವ್ಯಾಯಾಮದ ಅಗತ್ಯವಿಲ್ಲದೆಯೇ ಮೆಟ್ಟಿಲುಗಳನ್ನು ಹತ್ತುವುದರ ಮೂಲಕ ನೀವು ಸುಲಭವಾಗಿ ಕೊಬ್ಬನ್ನು ಕರಗಿಸಬಹುದು. ಇದು ಕಡಿಮೆ ಸಮಯದಲ್ಲಿ ಬಹಳಷ್ಟು ಕ್ಯಾಲೊರಿಗಳನ್ನು ಬರ್ನ್ ಮಾಡುವ ಮೂಲಕ ತೂಕವನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

30 ನಿಮಿಷಗಳ ಕಾಲ ಮೆಟ್ಟಿಲುಗಳನ್ನು ಹತ್ತುವುದರಿಂದ 250- 300 ಕ್ಯಾಲೊರಿಗಳು ಬರ್ನ್ ಆಗುತ್ತದೆ. ಈ ಅಭ್ಯಾಸವನ್ನು ಪ್ರತಿನಿತ್ಯ ರೂಢಿಸಿಕೊಳ್ಳುವುದರಿಂದ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಕಾಲು, ಸೊಂಟ, ಕ್ವಾಡ್ರೆಸ್ ಮತ್ತು ಕರು ಸ್ನಾಯುಗಳನ್ನು ಕೂಡ ಬಲಪಡಿಸುತ್ತದೆ. ಇಂದಿನ ಕಾರ್ಯನಿರತ ಜೀವನದಲ್ಲಿ, ಸರಿಯಾದ ದೈಹಿಕ ವ್ಯಾಯಾಮಕ್ಕಾಗಿ ಸಮಯವನ್ನು ಮೀಸಲಿಡಲು ಸಾಧ್ಯವಾಗದಿರುವವರು ದೈನಂದಿನ ಚಟುವಟಿಕೆಗಳಲ್ಲಿ ಮೆಟ್ಟಿಲುಗಳಿಗೆ ಆದ್ಯತೆ ನೀಡುವುದರಿಂದ ದೇಹಕ್ಕೆ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *