ಜೆಇಇ ಮೇನ್ಸ್ 2025 ರ ಜನವರಿ ಅವಧಿಯ ಫಲಿತಾಂಶಗಳು ಬಿಡುಗಡೆಯಾಗಿದ್ದು, 14 ವಿದ್ಯಾರ್ಥಿಗಳು ಶೇ 100ಕ್ಕೆ 100ರಷ್ಟು ಅಂಕಗಳನ್ನು ಪಡೆದುಕೊಂಡು ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಕರ್ನಾಟಕದ ಕುಶಾಗ್ರ ಗುಪ್ತಾ ಸಹ 100ಕ್ಕೆ ನೂರು ಅಂಕ ಪಡೆದು ಲಿಸ್ಟ್ ನಲ್ಲಿ ತಮ್ಮ ಹೆಸರನ್ನೂ ನಮೂದಿಸಿಕೊಂಡಿದ್ದಾರೆ.
14 ಟಾಪರ್ ಗಳ ಲಿಸ್ಟ್ ಹೀಗಿದೆ:
| 1 | 250310009213 | ಆಯುಷ್ ಸಿಂಗಲ್ | ರಾಜಸ್ಥಾನ
| 2 | 250310034720 | ಕುಶಾಗ್ರ ಗುಪ್ತಾ | ಕರ್ನಾಟಕ
| 3 | 250310133572 | ದಕ್ಷ | ದೆಹಲಿ (NCT)
| 4 | 250310143408 | ಹರ್ಷಾ ಜಾ | ದೆಹಲಿ (NCT)
| 5 | 250310150634 | ರಜಿತ್ ಗುಪ್ತಾ | ರಾಜಸ್ಥಾನ
| 6 | 250310210195 | ಶ್ರೇಯಸ್ ಲೋಹಿಯಾ | ಉತ್ತರಪ್ರದೇಶ
| 7 | 250310236696 | ಸಕ್ಷಮ್ ಜಿಂದಾಲ್ | ರಾಜಸ್ಥಾನ
| 8 | 250310254844 | ಸೌರವ್ | ಉತ್ತರಪ್ರದೇಶ
| 9 | 250310299968 | ವಿಶಾದ್ ಜೈನ್ | ಮಹಾರಾಷ್ಟ್ರ
| 10 | 250310312145 | ಅರ್ನವ್ ಸಿಂಗ್ | ರಾಜಸ್ಥಾನ
| 11 | 250310391420 | ಶಿವನ್ ವಿಕಾಶ ತೋಹಸಿನ್ವಾಲ್ | ಗುಜರಾತ್
| 12 | 250310564942 | ಸಾಯಿ ಮನೋಜ್ಞ ಗುತಿಕೊಂಡ | ಆಂಧ್ರಪ್ರದೇಶ
| 13 | 250310569571 | ಓಂ ಪ್ರಕಾಶ ಬೆಹ್ರಾ | ರಾಜಸ್ಥಾನ
| 14 | 250310746461 | ಬಾನಿ ಬ್ರಾತಾ ಮಾಜಿ | ತೆಲಂಗಾಣ
ಜೆಇಇ ಮೇನ್ಸ್ 2025ರ ಪರೀಕ್ಷೆಯಲ್ಲಿ ಒಟ್ಟು 13,11,544 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 12,58,136 (ಶೇ 95.93) ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಜನವರಿ 22-24 ಮತ್ತು ಜನವರಿ 28-29 ರಂದು ದೇಶದ 304 ನಗರಗಳ 618 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಬಾರಿ 14 ವಿದ್ಯಾರ್ಥಿಗಳು ಶೇ 100ಕ್ಕೆ 100ರಷ್ಟು ಅಂಕಗಳನ್ನು ಗಳಿಸಿದ್ದಾರೆ.