ಗಾ*ಜಾ, ಹೆರಾಯಿನ್ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ ಜಿಗಣಿ ಪೊಲೀಸರು

ಗಾ*ಜಾ, ಹೆರಾಯಿನ್ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ ಜಿಗಣಿ ಪೊಲೀಸರು

ಆನೇಕಲ್, ಬೆಂಗಳೂರು: ತಾಲೂಕಿನ ಬುಕ್ಕಸಾಗರ ಕೆರೆ ಬಳಿ ಗಾಂಜಾ, ಹೆರಾಯಿನ್ ಮಾರಾಟ ಮಾಡುತ್ತಿದ್ದ ನಾಲ್ಕು ಮಂದಿ ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಜಿಗಣಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಒಡಿಶಾದ ಬದ್ರಕ್ ಜಿಲ್ಲೆ ಮೂಲದ ಮಾಸ್ತೇನಹಳ್ಳಿ ವಾಸಿ ಬಿಗ್ ಬಾಸ್ಕೆಟ್ನಲ್ಲಿ ಕೆಲಸ ಮಾಡುತ್ತಿದ್ದ ಅಕ್ಷಯ್ (24), ಅಸ್ಸಾಂನ ದೆಮಾಜಿ ಜಿಲ್ಲೆ ಮೂಲದ ವೀರಸಂದ್ರದ ಪ್ಲಿಪ್ಕಾರ್ಟ್ ಉದ್ಯೋಗಿ ಬಿಸ್ವಜಿತ್ ದಾವೊ(24), ಅಸ್ಸಾಂನ ಕರಿಮಾಗಂಜ್ ಜಿಲ್ಲೆ ಮೂಲದ ವೀರಸಂದ್ರ ಡೆಲಿವರಿ ಬಾಯ್ ಜಾಕಿರ್ ಹುಸೇನ್ (24), ಮಂಗಳೂರು ನಗರ ಮೂಲದ ತಿರುಪಾಳ್ಯ ವಾಸಿ ಚಾಲಕ ಸರ್ಪುದ್ದೀನ್ (28) ಬಂದಿತ ಆರೋಪಿಗಳಾಗಿದ್ದಾರೆ.

ಆರೋಪಿಗಳಿಂದ 88 ಗ್ರಾಂ ಎಂಡಿಎಂಎ, 01.100 ಕಿಲೋ ಗಾಂಜಾ, 04.06 ಗ್ರಾಂ ಹೆರಾಯಿನ್, 4 ಸಿರೆಂಜ್, 4 ಮೊಬೈಲ್ ಸಮೇತ ಎರಡು ಬೈಕ್ ಗಳನ್ನ ಜಿಗಣಿ ಎಸ್ಐ ಶಿವಲಿಂಗ ನಾಯಕ್ ವಶಪಡಿಸಿಕೊಂಡಿದ್ದಾರೆ. ರ್ಯಾಚರಣೆಯಲ್ಲಿ ಡಿವೈಎಸ್ಪಿ ಮೋಹನ್, ಪಿಐ ಮಂಜುನಾಥ್, ಪಿಸಿಗಳಾದ, ಮನು, ಪರ್ವೇಜ್, ವೆಂಕಟೇಶ್, ಆನಂದ್, ಚನ್ನಬಸವಪ್ಪ, ಕಾಶಿ, ದೀಪು ಮತ್ತು ಮಂಜುನಾಥ್ ಭಾಗಿಯಾಗಿದ್ದರು. ಮಾದಕವಸ್ತು ಮಾರಾಟ ನಿಷೇಧ ಕಾಯಿದೆಯಂತೆ ಪ್ರಕರಣ ದಾಖಲಿಸಿರುವ ಜಿಗಣಿ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಪರಪ್ಪನ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ.

Leave a Reply

Your email address will not be published. Required fields are marked *