ಬೆಂಗಳೂರು: ಬೆಂಗಳೂರು Metro trainನಿಗಮ ಸಂಸ್ಥೆಯಲ್ಲಿ ಕೆಲಸ ಮಾಡಲು ಇಚ್ಛಿಸುವ ಉತ್ಸಾಹಿಗಳಿಗೆ ಮಹತ್ವದ ಸುದ್ದಿ ಇಲ್ಲಿದೆ. ತನ್ನ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಮೆಟ್ರೋ ನಿಲ್ದಾಣ ಹಾಗೂ ಮೆಟ್ರೊ ಡಿಪೋಗಳಲ್ಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಕೆ ಹೇಗೆ? ವಿದ್ಯಾರ್ಹತೆ ಏನಿರಬೇಕು? ವಯಸ್ಸಿನ ಮಿತಿ, ವೇತನ? ಇತರ ವಿವರ ಇಲ್ಲಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ಸಹಾಯಕ ಮುಖ್ಯ ಭದ್ರತಾ ಅಧಿಕಾರಿ ಹುದ್ದೆಗಳು ಖಾಲಿ ಇವೆ. ಒಟ್ಟು 05 ಸಹಾಯಕ ಮುಖ್ಯ ಭದ್ರತಾ ಅಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಕಾಂಟ್ರ್ಯಾಕ್ಟ್ ಆಧಾರದಲ್ಲಿ ನೇಮಕಾತಿ ನಡೆಯಲಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಆಗಸ್ಟ್ 12ರೊಳಗೆ ಅರ್ಜಿ ಸಲ್ಲಿಸಬೇಕು. ಕೊನೆಯ ದಿನದವರೆಗೆ ಕಾಯದೇ ಈಗಲೇ ಕಾರ್ಯಪ್ರವೃತ್ತರಾಗಬೇಕು.
ನೇಮಕಾತಿ ಪೂರ್ಣ ಮಾಹಿತಿ ನೇಮಕಾತಿ ಸಂಸ್ಥೆ: ಬೆಂಗಳೂರು ಮೆಟ್ರೋ ರೈಲು ನಿಗಮ ಒಟ್ಟು ಹುದ್ದೆಗಳು: ಐದು ಹುದ್ದೆ ಹೆಸರು: ಸಹಾಯಕ ಮುಖ್ಯ ಭದ್ರತಾ ಅಧಿಕಾರಿ ಅರ್ಜಿ ಸಲ್ಲಿಕೆ: ಆನ್ಲೈನ್ ಕೊನೆ ದಿನಾಂಕ: ಆಗಸ್ಟ್ 12 & 18 ಪೋಸ್ಟಿಂಗ್: ಬೆಂಗಳೂರು ಮಾಸಿಕ ವೇತನ: ನಿಯಮಾನುಸಾರ
ವಿದ್ಯಾರ್ಹತೆ ಏನಿರಬೇಕು? ಬಿಎಂಆರ್ಸಿಎಲ್ ಹುದ್ದೆಗಳನ್ನು ಸೇರಬಯಸುವವರು ಭಾರತೀಯ ಸೇನೆ/ನೌಕಾಪಡೆ/ವಾಯುಪಡೆ ಅಥವಾ ರಾಜ್ಯ ಪೊಲೀಸ್ ಇಲಾಖೆಬಿಎಸ್ಎಫ್ ಅಥವಾ ಸಿಐಎಸ್ಎಫ್//ಸಿಎಪಿಎಫ್/ಸಿಆರ್ಪಿಎಫ್/ರಾಜ್ಯ ಅಗ್ನಿಶಾಮಕ ಇಲಾಖೆ ಸೇರಿದಂತೆ ಇತರ ಹುದ್ದೆ ಸಮಾನ ಸೇವೆ ಮಾಡುತ್ತಿರುವ ಇಲ್ಲವೇ ನಿವೃತ್ತ ಸಿಬ್ಬಂದಿಗಳು ಅರ್ಜಿ ಸಲ್ಲಿಸಲು ಅರ್ಹರು ಎಂದು ಅಧಿಸೂಚನೆ ಮಾಹಿತಿ ನೀಡಿದೆ. ಇದಷ್ಟೇ ಅಲ್ಲದೇ ಪ್ರೈಟ್ ಲೆಫ್ಟಿನೆಂಟ್/ಕ್ಯಾಪ್ಟನ್/ಲೆಫ್ಟಿನೆಂಟ್/ಸಹಾಯಕ ಕಮಾಂಡೆಂಟ್/ಸಹಾಯಕ ಪೊಲೀಸ್ ಆಯುಕ್ತ ಹುದ್ದೆಗಳಲ್ಲಿರುವವರು ಇಲ್ಲವೇ ಆ ಹುದ್ದೆಗೆಸಮಾನ ಶ್ರೇಣಿಗಿಂತ ಕಡಿಮೆಯಿಲ್ಲದ ಹುದ್ದೆಯಲ್ಲಿರುವವರು ಅಥವಾ ನಿವೃತ್ತ ಸಿಬ್ಬಂದಿ ಅರ್ಜಿ ಸಲ್ಲಿಸಬಹುದು.