ಜುಲೈನಲ್ಲಿ ಉದ್ಯೋಗ ನೇಮಕಾತಿ ಶೇ 12ರಷ್ಟು ಏರಿಕೆ

ನವದೆಹಲಿ : ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಜುಲೈನಲ್ಲಿ ಭಾರತದಲ್ಲಿ ಉದ್ಯೋಗ ನೇಮಕಾತಿಗಳು ಶೇ 12ರಷ್ಟು ಹೆಚ್ಚಳವಾಗಿದ್ದು, ಹೆಚ್ಚಿನ ವಲಯಗಳು ಅತ್ಯುತ್ತಮ ಎರಡಂಕಿ ಬೆಳವಣಿಗೆಯನ್ನು ದಾಖಲಿಸಿವೆ ಹಾಗೂ ಫಾರ್ಮಾ/ಬಯೋಟೆಕ್ ಮತ್ತು ಎಫ್ಎಂಸಿಜಿ ವಲಯಗಳು ನೇಮಕಾತಿಯಲ್ಲಿ ಮುಂಚೂಣಿಯಲ್ಲಿವೆ ಎಂದು ವರದಿಯೊಂದು ತಿಳಿಸಿದೆ.

ನೌಕ್ರಿ ಜಾಬ್ ಸ್ಪೀಕ್ ಸೂಚ್ಯಂಕದ ಪ್ರಕಾರ, ಜೂನ್​ಗೆ ಹೋಲಿಸಿದರೆ, ನೇಮಕಾತಿಯಲ್ಲಿ (ತ್ರೈಮಾಸಿಕದಿಂದ ತ್ರೈಮಾಸಿಕ) ಶೇಕಡಾ 11 ರಷ್ಟು ಬೆಳವಣಿಗೆ ಕಂಡುಬಂದಿದೆ. ಫಾರ್ಮಾ/ಬಯೋಟೆಕ್ ವಲಯದಲ್ಲಿನ ಉದ್ಯೋಗ ನೇಮಕಾತಿಯು ಶೇ 26ರಷ್ಟು ಏರಿಕೆಯನ್ನು ದಾಖಲಿಸಿದ್ದು, ಬರೋಡಾ (ಶೇ 61) ಮತ್ತು ಹೈದರಾಬಾದ್ (ಶೇ 39) ನಗರಗಳಲ್ಲಿ ಹೆಚ್ಚಿನ ನೇಮಕಾತಿ ಕಂಡು ಬಂದಿದೆ.

ಹಾಗೆಯೇ ಎಫ್​​ಎಂಸಿಜಿ ವಲಯದಲ್ಲಿನ ನೇಮಕಾತಿ ಶೇಕಡಾ 26 ರಷ್ಟು ಏರಿಕೆಯಾಗಿದ್ದು, ಬೆಂಗಳೂರು (52 ಶೇಕಡಾ) ಮತ್ತು ಕೋಲ್ಕತ್ತಾ (43 ಶೇಕಡಾ) ಗಳಲ್ಲಿ ಹೆಚ್ಚಿನ ನೇಮಕಾತಿಗಳು ನಡೆದಿವೆ.

ದೆಹಲಿ-ಎನ್​ಸಿಆರ್ ಮತ್ತು ಹೈದರಾಬಾದ್​ಗಳ ರಿಯಲ್ ಎಸ್ಟೇಟ್ ವಲಯದಲ್ಲಿನ ನೇಮಕಾತಿಯು ಶೇಕಡಾ 23 ರಷ್ಟು ಬಲವಾದ ಬೆಳವಣಿಗೆಯನ್ನು ಪ್ರದರ್ಶಿಸಿದೆ ಎಂದು ಡೇಟಾ ತೋರಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜುಲೈನಲ್ಲಿ ಐಟಿ ವಲಯದಲ್ಲಿನ ನೇಮಕಾತಿ ಶೇಕಡಾ 17 ರಷ್ಟು ಬೆಳವಣಿಗೆಯಾಗಿದೆ.

ಈ ವರ್ಷದಲ್ಲಿ ಇದೇ ಮೊದಲ ಬಾರಿ ಈ ತಿಂಗಳು ನೇಮಕಾತಿಗಳು ಹೆಚ್ಚಾಗಿವೆ. ವಿಭಿನ್ನ ವಲಯಗಳು ಮತ್ತು ವಿಭಿನ್ನ ಪ್ರದೇಶಗಳಲ್ಲಿ ನೇಮಕಾತಿಗಳು ಹೆಚ್ಚಾಗಿರುವುದು ನಿಜವಾಗಿಯೂ ಭರವಸೆದಾಯಕವಾಗಿದೆ” ಎಂದು ನೌಕ್ರಿ ಜಾಬ್ ಸ್ಪೀಕ್​ನ ಮುಖ್ಯ ವ್ಯವಹಾರ ಅಧಿಕಾರಿ ಡಾ. ಪವನ್ ಗೋಯಲ್ ಹೇಳಿದರು. “ಈ ವಿಶಾಲ ವ್ಯಾಪ್ತಿಯ, ಸಕಾರಾತ್ಮಕ ಬದಲಾವಣೆಯು ಭಾರತೀಯ ವೈಟ್-ಕಾಲರ್ ಉದ್ಯೋಗ ಮಾರುಕಟ್ಟೆಯ ಏರಿಕೆ ಪರ್ವದ ಆರಂಭವಾಗಿರಬಹುದು” ಎಂದು ಅವರು ಹೇಳಿದರು

Leave a Reply

Your email address will not be published. Required fields are marked *