ಕರಾವಳಿಯಲ್ಲಿ ಜೂ. NTR, ರಿಶಬ್ ಪ್ರವಾಸ : ಕೊಲ್ಲೂರು ಮೂಕಾಂಬಿಕೆಗೆ ವಿಶೇಷ ಪೂಜೆ

ಉಡುಪಿ : ಬಹುನಿರೀಕ್ಷಿತ ದೇವರ ಚಿತ್ರದ ರಿಲೀಸ್ ಬ್ಯುಸಿಯ ನಡುವೆ ಆರ್​ಆರ್​ಆರ್​ ಸ್ಟಾರ್​ ಜೂನಿಯರ್ ಎನ್​ಟಿಆರ್ ಎರಡು ದಿನದಿಂದ ಕುಟುಂಬದ ಜೊತೆ ಉಡುಪಿ ಜಿಲ್ಲೆಯಲ್ಲಿ ಟೆಂಪಲ್ ಟೂರ್ ಮುಂದುವರೆಸಿದ್ದಾರೆ.

ಕೊಲ್ಲೂರಮ್ಮನ ದರ್ಶನ ಪಡೆದರು. ಸಿನಿ ಗೆಳೆಯರ ಜೊತೆ ಸುತ್ತಾಡಿ, ಮಾತುಕತೆ ನಡೆಸಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದರಿಂದಾಗಿ ಅಭಿಮಾನಿಗಳಲ್ಲಿ ಕೆಲ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.

ಇದನ್ನು ಓದಿ : ಉಡುಪಿ ಶ್ರೀಕೃಷ್ಣ ಮಠಕ್ಕೆ ಜ್ಯೂ.NTR, ರಿಷಬ್ ಶೆಟ್ಟಿ ಭೇಟಿ

ಅಮ್ಮನ 4 ದಶಕದ ಆಸೆ ಈಡೇರಿಸಿದ ಪುತ್ರ; ಜೂನಿಯರ್ ಕುಟುಂಬ ಭಾನುವಾರ ಕೊಲ್ಲೂರಿಗೆ ಭೇಟಿ ನೀಡಿತ್ತು. ಮಧ್ಯಾಹ್ನದ ವೇಳೆಗೆ ದೇಗುಲಕ್ಕೆ ಆಗಮಿಸಿದ ಜೂ. ಎನ್​ಟಿಆರ್ ಕುಟುಂಬಕ್ಕೆ ನಟ ರಿಷಬ್ ಶೆಟ್ಟಿ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಫ್ಯಾಮಿಲಿ ಜೊತೆಯಾಗಿದೆ. ತಾಯಿ ಶಾಲಿನಿ ನಂದಮೂರಿ ಅವರ ಹುಟ್ಟುಹಬ್ಬದ ಹಿನ್ನೆಲೆ ಮಗ ನಂದಮೂರಿ ತಾರಕ ರಾಮ್ ಉಡುಪಿಯ ಪ್ರಮುಖ ದೇಗುಲಗಳ ದರ್ಶನ ಮಾಡಿಸಿದ್ದಾರೆ. ಈ ಮೂಲಕ 4 ದಶಕಗಳ ಅಮ್ಮನ ಆಸೆಯನ್ನು ಈಡೇರಿಸಿದ್ದಾರೆ. ಗೆಳೆಯರಿಗೆ ಥ್ಯಾಂಕ್ಸ್​ ಹೇಳಿದ್ದಾರೆ.

ಜೂನಿಯರ್ ಎನ್​ಟಿಆರ್ ಎರಡು ದಿನ ಉಡುಪಿಯಲ್ಲಿ ಬಂದು ಉಳಿದುಕೊಂಡಿರುವ ಬಗ್ಗೆ ಸಾಕಷ್ಟು ಕುತೂಹಲಗಳು, ಪ್ರಶ್ನೆಗಳು ಕೇಳಿಬರುತ್ತಿವೆ. ತನ್ನ ತಾಯಿಯ 40 ವರ್ಷದ ಕನಸನ್ನ ಈಡೇರಿಸಲು, ಅಮ್ಮನ ಆಸೆಯನ್ನು ಪೂರೈಸಲು ದೇಗುಲಗಳಿಗೆ ತೆರಳುತ್ತಿದ್ದೇನೆ ಎಂದು ನಂದಮೂರಿ ತಾರಕ ರಾಮ್ ಹೇಳಿಕೊಂಡಿದ್ದಾರೆ. ಜೊತೆಗೆ ರಿಷಬ್, ನೀಲ್ ಲಾಫಿಂಗ್ ಬುದ್ಧನೂ ಕಾಣಿಸಿಕೊಂಡಿದ್ದಾರೆ.

ಕಾಂತಾರ ಫ್ರಿಕ್ವೆಲ್​ನಲ್ಲಿ ಜೂನಿಯರ್ ಎನ್​ಟಿಆರ್ ಸ್ಕ್ರೀನ್ ಶೇರ್ ಮಾಡುತ್ತಾರಾ?, ಕಾಂತಾರ ಶೂಟಿಂಗ್ ಸ್ಪಾಟ್​ಗೆ ಹೋಗಿ ಸೆಟ್ ನೋಡಿಕೊಂಡ ಬಂದಿದ್ದಾರಾ? ಎಂಬ ಪ್ರಶ್ನೆಗಳು ಸಮುದ್ರದ ಗಾಳಿ ಜೊತೆ ತೇಲಾಡುತ್ತಿವೆ. ಈ ಪ್ರಶ್ನೆಗೆ ಸ್ವತಃ ತಾರಕ ಉತ್ತರ ಕೊಟ್ಟಿದ್ದಾರೆ. ಪ್ರಶ್ನೆಯನ್ನು ರಿಷಬ್ ಕಡೆಗೆ ತಳ್ಳಿಬಿಟ್ಟಿದ್ದಾರೆ. ಪ್ರವಾಸದ ನಡುವೆ ಆಂಧ್ರದ ಮೀಟೂ ಚರ್ಚೆ, ದರ್ಶನ್ ಕುರಿತಾದ ಪ್ರಶ್ನೆಗೆ ತಾರಕ ಮೌನವಾದರು. ಲಾಫಿಂಗ್ ಬುದ್ಧನಿಗೆ ಶುಭ ಹಾರೈಸಿ ಪಿಕ್ಚರ್ ನೋಡ್ತೇನೆ ಎಂದು ತಮ್ಮ ಖುಷಿಯ ಅಭಿಪ್ರಾಯ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *