ಕಲಬುರಗಿ || ಪರ ಸ್ತ್ರೀ ಜೊತೆ ಸಲುಗೆ – ಪತಿಯ ಕಾಲು ಮುರಿಯಲು ಪತ್ನಿಯಿಂದಲೇ 5 ಲಕ್ಷಕ್ಕೆ ಸುಪಾರಿ

ಕಲಬುರಗಿ || ಪರ ಸ್ತ್ರೀ ಜೊತೆ ಸಲುಗೆ – ಪತಿಯ ಕಾಲು ಮುರಿಯಲು ಪತ್ನಿಯಿಂದಲೇ 5 ಲಕ್ಷಕ್ಕೆ ಸುಪಾರಿ

ಕಲಬುರಗಿ: ಪರ ಸ್ತ್ರೀ ಜೊತೆ ಸಲುಗೆಯಿಂದ ಇದ್ದ ಪತಿಯ ಕಾಲು ಮುರಿಯಲು ಆತನ ಪತ್ನಿಯೇ ಸುಪಾರಿ ನೀಡಿರುವ ಘಟನೆ ಕಲಬುರಗಿ (Kalaburagi) ನಗರದ ಅತ್ತರ ಕಂಪೌಡ್ ಬಳಿ ನಡೆದಿದೆ.

ವೆಂಕಟೇಶ್ ಎಂಬಾತ ಎರಡು ಕಾಲು ಮುರಿತಕ್ಕೆ ಒಳಗಾದ ಪತಿಯಾಗಿದ್ದು, ಸುಪಾರಿ ನೀಡಿದ ಪತ್ನಿ ಉಮಾದೇವಿ ಹಾಗೂ ಹಂತಕರಾದ ಆರೀಫ್, ಮನಹೋರ, ಸುನೀಲ್ ರನ್ನ ಪೊಲೀಸರು ಬಂಧಿಸಿದ್ದಾರೆ.

ವೆಂಕಟೇಶ್ ಕೆಲ ತಿಂಗಳಿನಿಂದ ಮತ್ತೊಬ್ಬ ಮಹಿಳೆಯ ಜೊತೆಗೆ ಸಲುಗೆಯಿಂದ ವರ್ತಿಸುತ್ತಿದ್ದ, ಹೀಗಾಗಿ ದಂಪತಿಗಳ ನಡುವೆ ಹಲವು ಬಾರಿ ಜಗಳವಾಗಿತ್ತು. ಕೊನೆಗೆ ಮಾತು ಕೇಳದ ಪತಿಯ ಎರಡೂ ಕಾಲುಗಳನ್ನ ಮುರಿದ್ರೆ ಮನೆಯಲ್ಲಿಯೇ ಬಿದ್ದಿರುತ್ತಾನೆ ಅಂತ ಪತ್ನಿ ಸ್ಕೆಚ್‌ ಹಾಕಿದ್ದಾಳೆ.

ಪತಿಯ ಎರಡೂ ಕಾಲುಗಳನ್ನ ಮುರಿಯಲು 5 ಲಕ್ಷಕ್ಕೆ ಪತ್ನಿ ಸುಪಾರಿ ನೀಡಿದ್ದಳು. ಆದ್ರೆ ವೆಂಕಟೇಶ್‌ ಮಗ ಇದು ದರೋಡೆ ಪ್ರಕರಣದ ವೇಳೆ ಕಾಲು ಮುರಿತ ಎಂದು ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾಗ ಉಮಾದೇವಿಯ ಅಸಲಿ ಬಣ್ಣ ಬಯಲಾಗಿದೆ. ಸದ್ಯ ಸುಪಾರಿ ನೀಡಿದ ಪತ್ನಿ ಸೇರಿದಂತೆ ಕಾಲು ಮುರಿದ ಆರೋಪಿಗಳನ್ನ ಬ್ರಹ್ಮಪೂರ ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *