ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಭೂತ್ಪೂರ ಗ್ರಾಮಕ್ಕೆ ಹೋಗುವ ರಸ್ತೆಯಿದು. ರಸ್ತೆ ಎಲ್ಲಿ ಅಂತ ಕೇಳಬೇಡಿ. ಅಸಲಿಗೆ ಇಲ್ಲೊಂದು ಸೇತುವೆ ಇದ್ದು ಅದು ಸಂಪೂರ್ಣವಾಗಿ ಮುಳುಗಿಹೋಗಿ ರಸ್ತೆಯ ಮೇಲೆ ರಭಸದಿಂದ ನೀರು ಹರಿಯುತ್ತಿದೆ.

ಭೂತ್ಪೂರ ಗ್ರಾಮದ ನಿವಾಸಿಗಳಿಗೆ ಸೇಡಂ, ಕಾಳಗಿ ಮತ್ತು ಚಿಂಚೋಳಿಗೆ ಹೋಗುವ ರಸ್ತೆ ಇದೇ ಆಗಿರವುದರಿಂದ ಸಂಪರ್ಕ ಕಟ್ ಆಗಿದೆ. ದ್ವಿಚಕ್ರವಾಹನಗಳಲ್ಲಿ ತೆರಳುವವರು ಸೇತುವೆ ಮೇಲೆ ನೀರು ಭೋರ್ಗರೆಯುತ್ತಿರುವುದನ್ನು ನೋಡಿ ವಿಧಿಯಿಲ್ಲದೆ ವಾಪಸ್ಸು ಹೋಗುತ್ತಿದ್ದಾರೆ. ಮತ್ತೇ ಮಳೆಯಾಗುವ ಮುನ್ಸೂಚನೆ ಇರೋದ್ರಿಂದ ಜನರು ನಿರಾಳರಾಗುವ ಸನ್ನಿವೇಶವೇನೂ ಇಲ್ಲ.