ಕಲ್ಬುರ್ಗಿ || ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡು ದಬ್ಬಾಳಿಕೆ …?

ಕಲ್ಬುರ್ಗಿ || ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡು ದಬ್ಬಾಳಿಕೆ …?

ಕಲ್ಬುರ್ಗಿ : ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಪುರಸಭೆ ಎಲೆಕ್ಷನ್ ನಿಮಿತ್ತ  ಶಾಸಕರಿಗೆ ಚುನಾವಣಾ ವೀಕ್ಷಕರಾಗಿ ಮಾನ್ಯ ಬಸವರಾಜ್ ಮತ್ತಿಮುಡು ಶಾಸಕರಿಗೆ ನೇಮಿಸಿದ ಪ್ರಯುಕ್ತ.. ಜೇವರ್ಗಿ ಮತಕ್ಷೇತ್ರದ ಬಿಜೆಪಿಯ ಹಿರಿಯ ಮುಖಂಡರ ನೇತೃತ್ವದಲ್ಲಿ ಹಾಗೂ 12 ಪುರಸಭಾ ಸದಸ್ಯರೆಲ್ಲರೂ ಒಟ್ಟಿಗೆ ಸೇರಿ ಕಲ್ಬುರ್ಗಿಯಿಂದ ಜೇವರ್ಗಿಗೆ ರಸ್ತೆ ಮುಖಾಂತರ ತೆರಳುವ ಮಾರ್ಗ ಮಧ್ಯೆ ಮಾನ್ಯ ಶಾಸಕರು ಹಾಗೂ ಪುರಸಭಾ ಸದಸ್ಯರನ್ನು ಅಕ್ರಮವಾಗಿ ತಡೆಯಲು ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡು ದಬ್ಬಾಳಿಕೆ ನಡೆಸಿ ಶಾಬಾದ್ ಕ್ರಾಸ್ ನಲ್ಲಿ ತಡೆಯಲು ಪ್ರಯತ್ನಿಸಿ ವಿಫಲ.

ಶಾಬಾದ್ ಕ್ರಾಸ್ ನಲ್ಲಿ ತಡೆಯಲು ಪ್ರಯತ್ನಿಸಿ ವಿಫಲ ವಾದಪ್ರಯುಕ್ತ ಕಲ್ಬುರ್ಗಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಮನೆ ಶಾಸಕರು ಹಾಗೂ ಪುರಸಭಾ ಸದಸ್ಯರನ್ನು ಹಿಂಬಾಲಿಸಿಕೊಂಡು ಬಂದು ಪುರಸಭಾ ಆವರಣದಲ್ಲಿ ಚುನಾವಣೆ ನಿಮಿತ್ತ ಸದಸ್ಯರೆಲ್ಲರೂ ಸಾಲಾಗಿ  ಶಾಸಕರ ನೇತೃತ್ವದಲ್ಲಿ ಒಳಗಡೆ ಹೋಗುವ ಸಂದರ್ಭದಲ್ಲಿ ಕಲ್ಬುರ್ಗಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದಂತ ಮಹೇಶ್ ಮೇಗಣ್ಣವರ್ ರವರು ಬಿಜೆಪಿಗೆ ಬೆಂಬಲ ಸೂಚಿಸಿದ ಇಬ್ಬರು ಮಹಿಳಾ ಪುರಸಭಾ ಹಿರಿಯ ಸದಸ್ಯರನ್ನು ಬಲವಂತವಾಗಿ ಪೊಲೀಸ್ ವಾಹನದಲ್ಲಿ ಕೂಡಿಸಿ ಅಲ್ಲಿಂದ ಒತ್ತಾಯಪೂರ್ವಕವಾಗಿ ಕಳಿಸಿರುವುದು ಅಲ್ಲದೆ ಅದನ್ನು ತಡೆಯಲು ಮುಂದಾದ ಬಿಜೆಪಿಯ ಜಿಲ್ಲಾಧ್ಯಕ್ಷರು ಹಾಗೂ ಶಾಸಕರನ್ನು ಎದೆಗೆ ಮುಟ್ಟಿತಳ್ಳಿ ನೂಕು ನೂಕಲು ಎಬ್ಬಿಸಿ ಬಿಜೆಪಿಯ ಕಾರ್ಯಕರ್ತರಿಗೆ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಂಡು ಹೊಡಿ ಬಡಿ ಮಾಡಿಸಿ ದರ್ಪ ಮೆರೆದಿರುವುದು ಕೇದಕರ ಖಂಡನೀಯ ಇದನ್ನು ಪ್ರಶ್ನಿಸಿ ಬಿಜೆಪಿಯ ಮುಖಂಡರ ನೇತೃತ್ವದಲ್ಲಿ ಜೇವರ್ಗಿ ಪೊಲೀಸ್ ಠಾಣೆಗೆ ಹಿರ್ಯಾದಿ ಕೊಡಲು ಹೋದಾಗ ಸುಮಾರು ಗಂಟೆಗಳ ಕಾಲ ಮಾತಿನ ಚಕಮಕಿ ನಡಿಸಿ ಕಾಲಹರಣ ಮಾಡಿದ್ದಲ್ಲದೆ ಹಿರಿಯರು ವೃದ್ಧರು ಬಿಜೆಪಿಯ ಮುಖಂಡರ ಒಡನೆ ಅನುಚಿತವಾಗಿ ವರ್ತಿಸಿದ ಪೊಲೀಸ್ ವ್ಯವಸ್ಥೆಯ ದುರಾಡಳಿತ ಎದ್ದು ಕಾಣುವಂತಾಗಿದೆ..

ಇದರಿಂದ ಕಲಬುರಗಿ ಬೆಂಗಳೂರು ಮುಖ್ಯ ರಸ್ತೆಯನ್ನು ತಡೆದು ಸುಮಾರು ಗಂಟೆಗಳ ಕಾಲ ರಸ್ತರೋಕ್ ಮಾಡಿ ದುರಾಡಳಿತ ವ್ಯವಸ್ಥೆ ವಿರುದ್ಧ ಪ್ರತಿಭಟಿಸಲಾಯಿತು…

Leave a Reply

Your email address will not be published. Required fields are marked *