ಬಹು ನಿರೀಕ್ಷಿತ ‘ಕಾಂತಾರ: ಚಾಪ್ಟರ್ 1′ ಚಿತ್ರ ಇದೀಗ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅಬ್ಬರ ಹೊರಹಾಕಲು ಸಜ್ಜಾಗಿದೆ. ಚಲನಚಿತ್ರದ ಟ್ರೈಲರ್ ಬಿಡುಗಡೆಗೆ ದಿನಾಂಕವನ್ನು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಘೋಷಿಸಿದೆ – ಅಭಿಮಾನಿಗಳ ಕಾಯುವಿಕೆಗೂ ಅಂತ್ಯವಾಗಿದೆ!
ಟ್ರೈಲರ್ ರಿಲೀಸ್ ಯಾವಾಗ?
‘ಕಾಂತಾರ: ಚಾಪ್ಟರ್ 1’ ಟ್ರೈಲರ್ ಇದೇ ಸೆಪ್ಟೆಂಬರ್ 22, ಮಧ್ಯಾಹ್ನ 12:45ಕ್ಕೆ ಬಿಡುಗಡೆಯಾಗಲಿದೆ. ಟ್ರೈಲರ್ನ್ನು ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ವೀಕ್ಷಿಸಬಹುದು.
“ಪ್ರಚಾರವೇ ಇಲ್ಲ” ಎಂಬ ಅಭಿಪ್ರಾಯಕ್ಕೆ ಉತ್ತರವೇ ಈ ಟ್ರೈಲರ್?
ಇತ್ತೀಚೆಗೆ ಸಿನಿಮಾದ ಪ್ರಚಾರಕ್ಕೇನೂ ವೇಗವಿಲ್ಲ ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದ್ದವು.
- ಪ್ರೆಸ್ ಮೀಟ್ ಇಲ್ಲ
- ಪ್ರಿ ರಿಲೀಸ್ ಕಾರ್ಯಕ್ರಮವಿಲ್ಲ
- ಹಾಡುಗಳ ಬಿಡುಗಡೆ ಆಗಿಲ್ಲ
ಎನ್ನುವ ರೀತಿಯ ದೂರುಗಳು ಕೇಳಿಬಂದಿದ್ದವು.
ಈಗ ಟ್ರೈಲರ್ ರಿಲೀಸ್ ಘೋಷಣೆಯೊಂದಿಗೆ ಚಿತ್ರತಂಡ ಪ್ರಚಾರಕ್ಕೆ ನಾಂದಿ ಹಾಡಿದೆ.
ಮೇಕಿಂಗ್ ವಿಡಿಯೋ ಸಖತ್ ವೈರಲ್ ಆಗಿತ್ತು
ಕೆಲ ವಾರಗಳ ಹಿಂದೆ ಬಿಡುಗಡೆಯಾದ ಮೇಕಿಂಗ್ ವಿಡಿಯೋ ಚಿತ್ರತಂಡದ ಶ್ರಮ, ಸೆಟ್ ಡಿಸೈನ್, ತಂತ್ರಜ್ಞರ ಪರಿಶ್ರಮವನ್ನು ಹೀಗೆಯೇ ತೋರಿಸಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಚಿತ್ರೀಕರಣ, ಕಥೆ – ಎಲ್ಲವೂ ಗುಟ್ಟಾಗೇ ಇತ್ತು!
ರಿಷಬ್ ಶೆಟ್ಟಿ ಈ ಸಿನಿಮಾದ ಕಥೆ ಹಾಗೂ ಚಿತ್ರೀಕರಣದ ವಿವರಗಳನ್ನು ಅತ್ಯಂತ ರಹಸ್ಯವಾಗಿ ಇಟ್ಟುಕೊಂಡಿದ್ದರು. ಎರಡು ವರ್ಷಗಳ ಚಿತ್ರೀಕರಣ, ಆದರೆ ಬಿಡುಗಡೆಯಾದುದು ಕೇವಲ 2 ಪೋಸ್ಟರ್ ಮತ್ತು 1 ಮೇಕಿಂಗ್ ವಿಡಿಯೋ!
ಈಗ ಟ್ರೈಲರ್ ಮೂಲಕ ಮೊದಲ ಬಾರಿಗೆ ‘ಕಾಂತಾರ: ಚಾಪ್ಟರ್ 1’ನ ಕತೆ, ದೃಶ್ಯವಿನ್ಯಾಸ, ಪಾತ್ರಗಳ ಬಗ್ಗೆ ಪ್ರೇಕ್ಷಕರಿಗೆ ಸ್ಪಷ್ಟ ಚಿತ್ರಣ ಸಿಗಲಿದೆ.
‘ಕೆಜಿಎಫ್ 2′ ರೆಕಾರ್ಡ್ ಮುರಿಯಲಿದೆಯಾ ‘ಕಾಂತಾರ’?
‘ಕೆಜಿಎಫ್ 2’ ಟ್ರೈಲರ್ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ದಾಖಲೆ ದಾಖಲೆಯ ವೀಕ್ಷಣೆ ಪಡೆದಿತ್ತು.ಇದೀಗ ‘ಕಾಂತಾರ: ಚಾಪ್ಟರ್ 1’ ಟ್ರೈಲರ್ ಕೂಡ ಅದನ್ನು ಮೀರಿಸಲಿದೆ ಎಂಬ ಭಾರೀ ನಿರೀಕ್ಷೆ ಅಭಿಮಾನಿಗಳಲ್ಲಿ ಉಂಟಾಗಿದೆ.
For More Updates Join our WhatsApp Group :




