ಮಕ್ಕಳಿಗೆ ದಸರಾ ಡಬ್ಬಲ್ ಧಮಾಕಾ! 18 ದಿನ ಶಾಲೆಗೆ ರಜೆ, ಕೇವಲ 2 ದಿನ ಹೊರತು.

ಮಕ್ಕಳಿಗೆ ದಸರಾ ಡಬ್ಬಲ್ ಧಮಾಕಾ! 18 ದಿನ ಶಾಲೆಗೆ ರಜೆ, ಕೇವಲ 2 ದಿನ ಹೊರತು.

 ಬೆಂಗಳೂರು :ಮೈಸೂರು ದಸರಾ ಮಹೋತ್ಸವದ ಸದ್ದು ಮಿಂಚು ಆರಂಭವಾಗಿದ್ದು, ಈ ಬಾರಿ ಮಕ್ಕಳಿಗೂ ಅದನ್ನು ಸಂಪೂರ್ಣ ಅನುಭವಿಸುವ ಅವಕಾಶ ದೊರೆಯುತ್ತಿದೆ. ಶಿಕ್ಷಣ ಇಲಾಖೆ ಇದೀಗ 18 ದಿನದ ದಸರಾ ರಜೆ ಘೋಷಿಸಿದೆ – ಅದು ಕೂಡ ಕೇವಲ ಎರಡು ದಿನಗಳನ್ನು ಹೊರತುಪಡಿಸಿ!

ರಜೆ ದಿನಾಂಕಗಳು: ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7 ರವರೆಗೆ

ಸೆಪ್ಟಂಬರ್ 20 (ಶನಿವಾರ) ರಿಂದ ಅಕ್ಟೋಬರ್ 7 (ಮಂಗಳವಾರ)ರವರೆಗೆ ರಾಜ್ಯದ ಸರ್ಕಾರಿ ಶಾಲೆಗಳಿಗೆ ದಸರಾ ರಜೆ ಇದ್ದು, ಇದರಿಂದ ವಿದ್ಯಾರ್ಥಿಗಳಿಗೆ ಹಬ್ಬದ ಸಂಭ್ರಮ ಇನ್ನಷ್ಟು ಹೆಚ್ಚಾಗಿದೆ.

ಅಕ್ಟೋಬರ್ 2 ಕಾರ್ಯಕ್ರಮಕ್ಕೆ ಹಾಜರಾತಿ ಕಡ್ಡಾಯ

ದಸರಾ ರಜೆಯ ಮಧ್ಯೆ ಬರುವ ಅಕ್ಟೋಬರ್ 2 – ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಮೈಸೂರು ದಸರಾ ಸಿದ್ದತೆ ಫುಲ್ ಸ್ವಿಂಗ್ನಲ್ಲಿ!

  • ಅರಮನೆ ದರ್ಬಾರ್‌ಗೆ ಕೌಂಟ್‌ಡೌನ್ ಶುರುವಾಗಿದೆ
  • ಗಜಪಡೆ ಚಿನ್ನದ ಅಂಬಾರಿ ಮೆರೆಯಲು ಸಜ್ಜಾಗಿದೆ
  • ಮೈಸೂರು ದಸರಾ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಕ್ಕಳನ್ನು ಸೆಳೆಯಲು ಈ ರಜೆ ಹೆಚ್ಚು ಅನುಕೂಲವಾಗಿದೆ

ಶಿಕ್ಷಣ ಇಲಾಖೆಯ ಅಧಿಕೃತ ಆದೇಶ

ಶುಕ್ರವಾರ (ಸೆ. 19) ನಷ್ಟೆ ಬಿಡುಗಡೆಗೊಂಡ ಈ ಆದೇಶದಲ್ಲಿ, “ಮಕ್ಕಳಿಗೆ ದಸರಾ ಹಬ್ಬದ ಸಂಭ್ರಮವನ್ನು ಸಜೀವವಾಗಿ ಅನುಭವಿಸಲು ಅವಕಾಶ ಸಿಗಬೇಕು ಎಂಬ ದೃಷ್ಟಿಯಿಂದ 18 ದಿನಗಳ ರಜೆ ಘೋಷಿಸಲಾಗಿದೆ,” ಎಂದು ಉಲ್ಲೇಖಿಸಲಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *