KEA ನೇಮಕಾತಿ : GTTCಯಲ್ಲಿನ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚನೆ ಪ್ರಕಟಿಸಲಾಗಿದ್ದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಐದು ದಿನಗಳ ಬಾಕಿ ಇದೆ. ಕಳೆದ ಏಪ್ರಿಲ್​ನಲ್ಲಿ ಹೊರಡಿಸಲಾದ ಅಧಿಸೂಚನೆ ಹೆಚ್ಚುವರಿ ಹುದ್ದೆಗಳ ಸೇರಿಸಿ ಈ ಪರಿಷ್ಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಈ ಹುದ್ದೆಗಳ ವರ್ಗೀಕರಣ, ವಿದ್ಯಾರ್ಹತೆ, ವೇತನ, ಅರ್ಜಿ ಸಲ್ಲಿಕೆ ಸೇರಿದಂತೆ ಸಂಪೂರ್ಣ ವಿವರಗಳನ್ನೊಳಗೊಂಡ ವಿವರವಾದ ಮಾಹಿತಿ ಇಲ್ಲಿದೆ

ಹುದ್ದೆಗಳ ವಿವರ: ಜಿಟಿಟಿಸಿಯಲ್ಲಿ ಒಟ್ಟು 98 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಅದರ ವಿವರಗಳು ಇಂತಿದೆ.

  • ಲೆಕ್ಚರರ್ (ಎಂಜಿನಿಯರಿಂಗ್) – 30
  • ಇಂಜಿನಿಯರ್ – 2
  • ಅಧಿಕಾರಿ ದರ್ಜೆ ಗ್ರೇಡ್ 2 – 2
  • ಫೋರ್‌ಮನ್ ಗ್ರೇಡ್2 – 4
  • ಇನ್ಸ್​​ಪೆಕ್ಟರ್​​ ಗ್ರೇಡ್​​1 – 15
  • ಟೆಕ್ನಿಷಿಯನ್​ ಗ್ರೇಡ್​2 – 8
  • ಇನ್ಸ್​​ಪೆಕ್ಟರ್​​ ಗ್ರೇಡ್​​2 – 5
  • ಟೆಕ್ನಿಷಿಯನ್​ ಗ್ರೇಡ್​3 – 23
  • ಟೆಕ್ನಿಷಿಯನ್​ ಗ್ರೇಡ್​​4- 4
  • ಅಸಿಸ್ಟೆಂಟ್​ ಗ್ರೇಡ್​ – 5

ವಿದ್ಯಾರ್ಹತೆ: ಅಭ್ಯರ್ಥಿಗಳು ಈ ಹುದ್ದೆಗೆ ಸಂಬಂಧಿಸಿದಂತೆ ಇಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಪದವಿಯನ್ನು ಹೊಂದಿರಬೇಕು.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 27 ವರ್ಷ. ಪ.ಜಾ, ಪ.ಪಂ ಮತ್ತು ಪ್ರವರ್ಗ1 ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ವಿಶೇಷ ಚೇತನ ಅಭ್ಯರ್ಥಿಗಳಿಗೆ 250 ರೂ, ಪ.ಜಾ, ಪ.ಪಂ ಮತ್ತು ಪ್ರವರ್ಗ 1, ನಿವೃತ್ತ ಸೇವಾ ನೌಕರರಿಗೆ 500 ರೂ. ಮತ್ತು ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 750 ರೂ. ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ.

ಕೆಇಎನಿಂದ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಈ ಹುದ್ದೆಗಳಿಗೆ ಮೇ 16ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 15 ಆಗಿದೆ. ಶುಲ್ಕ ಪಾವತಿಗೆ ಕೊನೆಯ ದಿನಾಂಕ ಜೂನ್​ 18 ಆಗಿದೆ. ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು kae.kar.nic.in ಇಲ್ಲಿಗೆ ಭೇಟಿ ನೀಡಬಹುದು

Leave a Reply

Your email address will not be published. Required fields are marked *