ಆಂಧ್ರಪ್ರದೇಶದ ನೂತನ ಸಿಎಂ ಆಗಿ ಇಂದು ಚಂದ್ರಬಾಬು ನಾಯ್ಡು ಪ್ರಮಾಣ ವಚನ

ವಿಜಯವಾಡ (ಆಂಧ್ರಪ್ರದೇಶ): ತೆಲುಗು ದೇಶಂ ನಾಯಕ ನಾರಾ ಚಂದ್ರಬಾಬು ನಾಯ್ಡು ಅವರು ಇಂದು (ಬುಧವಾರ)ವಿಜಯವಾಡದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇದರಿಂದ ಕೇಂದ್ರ ಸಚಿವರು ಹಾಗೂ ವಿವಿಐಪಿಗಳು ಈಗಾಗಲೇ ವಿಜಯವಾಡಕ್ಕೆ ಆಗಮಿಸಿದ್ದಾರೆ.

ಗನ್ನವರಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಮೆಗಾ ಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಇತರರನ್ನು ತೆಲುಗು ದೇಶಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಮತ್ತು ಟಿಡಿಪಿ ಮುಖಂಡರು ಸ್ವಾಗತಿಸಿದ್ದಾರೆ.

ರಾಜ್ಯಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ನಾರಾ ಲೋಕೇಶ್ ಅವರು ನಿನ್ನೆ (ಮಂಗಳವಾರ) ಗನ್ನವರಂ ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಿದ್ದಾರೆ. ಬಳಿಕ ಈ ನಾಯಕರು ಉಂಡವಳ್ಳಿಯಲ್ಲಿರುವ ಚಂದ್ರಬಾಬು ನಾಯ್ಡು ಮನೆಗೆ ತೆರಳಿದರು.

ಪ್ರಮಾಣ ವಚನಕ್ಕೆ ಸಕಲ ಸಿದ್ಧತೆ: ಪ್ರಮಾಣ ವಚನಕ್ಕೆ ಸಿದ್ದವಾಗಿರುವ ಚಂದ್ರಬಾಬು ನಾಯ್ಡು ಅವರು ಈಗಾಗಲೇ ನೂತನ ಸಚಿವರ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ಸಚಿವರಾಗುವ ಅವಕಾಶ ಗಿಟ್ಟಿಸಿಕೊಂಡಿರುವ ಬಿಜೆಪಿ ನಾಯಕರನ್ನು ಚಂದ್ರಬಾಬು ಅವರೇ ಕರೆಸಿಕೊಂಡು ಮಾತನಾಡಿದ್ದಾರೆ. ಹಲವು ಆಕಾಂಕ್ಷಿಗಳು ಈಗಾಗಲೇ ವಿಜಯವಾಡ ಮತ್ತು ಗುಂಟೂರಿನಲ್ಲಿ ನೆಲೆಸಿದ್ದಾರೆ. ಅವರಲ್ಲಿ ಕೆಲವು ನಾಯಕರಿಗೆ ಚಂದ್ರಬಾಬು ನಾಯ್ಡು ದೂರವಾಣಿ ಕರೆ ಮಾಡಿ ಶುಭ ಸುದ್ದಿಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *