42 ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದ ಖದೀಮ ಅರೆಸ್ಟ್!

42 ದ್ವಿಚಕ್ರ ವಾಹನ ಕಳ್ಳತನ ಮಾಡಿದ್ದ ಖದೀಮ ಅರೆಸ್ಟ್!

ತುಮಕೂರು:- ಅಬ್ಬಬ್ಬಾ..! ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾನಾ  ಕಂಪನಿಯ ಬರೋಬ್ಬರಿ 42 ಬೈಕ್ ಕಳ್ಳತನ ಮಾಡಿದ್ದ ಆರೋಪಿ ಕೊನೆಗೂ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಹನ್ನೊಂದು ಲಕ್ಷದ ಅರವತ್ತು ಸಾವಿರದ ಐದನೂರು ಹನ್ನೊಂದು ರೂ. ಬೆಲೆ ಬಾಳುವ ೪೨ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಖತರ್ನಾಕ್ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

ಶಿಡ್ಲಘಟ್ಟ ನಗರದ ೫೩ ವರ್ಷದ ಮುಭಾರಕ್ ಖಾನ್ ಅಲಿಯಾಸ್ ಮಟನ್ ಮುಭಾರಕ್ ಬಿನ್ ಮುಸ್ತಫಾ ಬಂಧಿತ ಆರೋಪಿಯಾಗಿದ್ದಾನೆ.  ಬಂಧಿತ ಆರೋಪಿ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ 2, ತುಮಕೂರು ನಗರ ಪೊಲೀಸ್ ಠಾಣೆ 3, ಶ್ರೀನಿವಾಸಪುರ ಪೊಲೀಸ್ ಠಾಣೆ 2, ಆಂಧ್ರಪ್ರದೇಶದ ಕುಪ್ಪ ಪೊಲೀಸ್ ಠಾಣೆ 1, ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆ 1, ಯಲಹಂಕ ಪೊಲೀಸ್ ಠಾಣೆ 1, ಬಾಗೇಪಲ್ಲಿ ಪೊಲೀಸ್ ಠಾಣೆ 1, ಪಾವಗಡ ಪೊಲೀಸ್ ಠಾಣೆ 1, ಯಲಹಂಕ ಪೊಲೀಸ್ ಠಾಣೆ 1, ಬಾಗೇಪಲ್ಲಿ ಪೊಲೀಸ್ ಠಾಣೆ 1, ದೊಡ್ಡಬಳ್ಳಾಪುರ ಪೊಲೀಸ್ ಠಾಣೆ 1, ನೆಲಮಂಗಲ ಪೊಲೀಸ್ ಠಾಣೆ 1 ಮತ್ತು ಬೆಂಗಳೂರು ರೈಲ್ವೆ ಪೊಲೀಸ್ ಠಾಣೆ 1 ಸೇರಿದಂತೆ ಇತರೆ ಪ್ರಕರಣಗಳು ದಾಖಲಾಗದೆ ಇರುವ ದ್ವಿಚಕ್ರ ವಾಹನಗಳು 27 ಸೇರಿದಂತೆ ಒಟ್ಟು 42 ದ್ವಿಚಕ್ರ ವಾಹನಗಳನ್ನು 15 ಪ್ರಕರಣಗಳಲ್ಲಿ ಕಳ್ಳತನ ಮಾಡಿದ್ದ. ಕಳ್ಳತನ ಮಾಡಿದ್ದ ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಕ್ಕಿದ್ದೇಗೆ ಖತರ್ನಾಕ್ ಕಳ್ಳ:- ಕ್ಯಾತ್ಸಂದ್ರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬೈಕ್‌ಗಳು ಕಳ್ಳತನವಾಗುತ್ತಿದ್ದ ಬಗ್ಗೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಪ್ರಕರಣಕ್ಕೆ ಸಂಬಧಿಸಿದAತೆ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಈ ಸಂಬAಧ ಅಕ್ಟೋಬರ್ 16 ರಂದು ತಂಡದ ಅಧಿಕಾರಿಗಳಾದ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೆ.ಎ. 52 ಕ್ಯೂ 1236 ನೇ ದ್ವಿಚಕ್ರ ವಾಹನ ಪತ್ತೆ ಕಾರ್ಯದಲ್ಲಿ ಆರೋಪಿ ಮುಭಾರಕ್ ಸಿಕ್ಕಿಬಿದ್ದಿದ್ದಾನೆ.

Leave a Reply

Your email address will not be published. Required fields are marked *