ಕಿಚ್ಚ ಸುದೀಪ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡಿರುವ ವಿಷಯ ಗೊತ್ತೆ ಇದೆ. ಅಕ್ಟೋಬರ್ 20ರ ಬೆಳಿಗ್ಗೆ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ನಿಧನ ಹೊಂದಿದರು. ಅವರಿಗೆ ಸಾಕಷ್ಟು ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಕಿಚ್ಚಾ ಸುದೀಪ ಅವರು, ಅವರ ತಾಯಿಯ ಅಂತ್ಯಕ್ರಿಯೆಯನ್ನು ಮಾಡುವ ವೇಳೆ ಎಲ್ಲವನ್ನು ಗಮನಿಸಿದ ಸುದೀಪ್ ಅವರ ಮಗಳು ಸಾನ್ವ ಭಾವುಕರಾಗಿ ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿವೋಂದನ್ನ ಪೋಸ್ಟ್ ಮಾಡಿದ್ದಾರೆ.
”ಇಂದು ನನ್ನ ಕುಟುಂಬಕ್ಕೆ ತುಂಬಾ ಕಷ್ಟದ ದಿನವಾಗಿತ್ತು, ಆದರೆ ನನ್ನ ಅಜ್ಜಿಯನ್ನು ಕಳೆದುಕೊಳ್ಳುವುದು ಕೆಟ್ಟ ಭಾಗವಾಗಿರಲಿಲ್ಲ. ನನ್ನ ಮನೆಯ ಹೊರಗೆ ಬಂದಿದ್ದ ಜನರು, ಜೋರಾಗಿ ಕೂಗುತ್ತಿದ್ದರು, ನಾನು ದುಃಖಿಸಲು ಪ್ರಯತ್ನಿಸುತ್ತಿರುವಾಗ ನನ್ನ ಮುಖಕ್ಕೆ ಕ್ಯಾಮೆರಾಗಳನ್ನು ತರುತ್ತಿದ್ದರು. ಜನರು ಇಷ್ಟು ಅಮಾನವೀಯನಾಗಿರಬಹುದೆಂದು ನನಗೆ ತಿಳಿದಿಲ್ಲ. ನನ್ನ ತಂದೆ ತನ್ನ ತಾಯಿಗಾಗಿ ಅಳುತ್ತಿದ್ದಾಗ, ಜನರು ಅವರನ್ನಾ ತಳ್ಳುತ್ತಿದ್ದರು ಮತ್ತು ಆಕೆಗೆ ಅರ್ಹವಾದ ವಿದಾಯ ನೀಡಲು ನಮಗೆ ತುಂಬಾ ತೊಂದರೆಯಾಯಿತು. ಇಂದು ನಾನು ನನ್ನ ಪ್ರೀತಿಪಾತ್ರರನ್ನು ಕಳೆದುಕೊಳ್ಳುವ ಬಗ್ಗೆ ಅಳುತ್ತಿದ್ದೇ ಆದರೆ ಈ ಜನರು ಅವರು ಪೋಸ್ಟ್ ಮಾಡಬಹುದಾದ ರೀತಿಯ ರೀಲ್ ಬಗ್ಗೆ ಕಾಳಜಿ ವಹಿಸುತ್ತಾರೆ.” ಎಂದು ಸಾನ್ವಿ ನಮ್ಮ ಬೇಸರವನ್ನ ವ್ಯಕ್ತಪಡಿಸಿದ್ದಾರೆ.