ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಸಾಣಾಪುರ ಕೆರೆ ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಸಾವಿರಾರು ಪ್ರವಾಸಿಗರು ಅದರಲ್ಲೂ ವಿಶೇಷವಾಗಿ ವಿದೇಶಿಯರು ಇದನ್ನು ವೀಕ್ಷಿಸಲು ಬರುತ್ತಾರೆ ಮತ್ತು ಇಲ್ಲಿಂದ ಕಲ್ಲೆಸತ ಅಳತೆ ದೂರದಲ್ಲಿರುವ ರೆಸಾರ್ಟ್ಗಳಲ್ಲಿ ತಂಗುತ್ತಾರೆ.
ಸಾಣಾಪುರ ಕೆರೆಗೆ ಬೋಂಗಾ ಬಿದ್ದಿದ್ದು ಸ್ಥಳೀಯರಲ್ಲಿ ಬೀತಿಯನ್ನುಂಟು ಮಾಡಿದೆ. ನಮ್ಮ ಕೊಪ್ಪಳ ವರದಿಗಾರ ಕೆರೆ ಮತ್ತು ಬೋಂಗಾ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ತುಂಗಭದ್ರಾ ಜಲಾಶಯದಿಂದ ಸಾಣಾಪುರ ಕೆರೆಗೆ 5,000 ಕ್ಯೂಸೆಕ್ಸ್ ನೀರು ಬಿಡಲಾಗಿದೆ ಮತ್ತು ಕೆರೆಯಿಂದಲೇ ನದಿಯ ಎಡದಂಡೆ ಕಾಲುವೆಗಳಿಗೆ ನೀರು ಹರಿಬಿಡಲಾಗುತ್ತದೆ. ಕೆರೆಗೆ ಬೋಂಗಾ ಬಿದ್ದಿರುವ ಕಾರಣ ಅದು ಒಡೆಯುವ ಸಾಧ್ಯತೆಯನ್ನು ಅಲ್ಲಗಳೆಯಲಾಗಲ್ಲ, ಹಾಗೇನಾದರೂ 1,500 ಜನಸಂಖ್ಯೆ ಇರುವ ಸಾಣಾಪುರ ಗ್ರಾಮ ಮತ್ತು ಇಲ್ಲಿರುವ ರೆಸಾರ್ಟ್ಗಳು ಮುಳಗಡೆಯಾಗಲಿವೆ.
For More Updates Join our WhatsApp Group :