ಕೊರಟಗೆರೆ:- ಕೊರಟಗೆರೆ ಪಟ್ಟಣದ ಕೇಂದ್ರ ಗ್ರಂಥಾಲಯ ಸತತ ಮಳೆಯಿಂದ ಸೋರುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳು ಉಪಯುಕ್ತವಾಗುವ ಬಹಳಷ್ಟು ಪುಸ್ತಕಗಳು ಮಳೆ ನೀರು ಸೋರಿಕೆಯಿಂದ ಹಾಳಾಗುವ ಆತಂಕ ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಸುವ್ಯವಸ್ಥಿತ ಗ್ರಂಥಾಲಯಕ್ಕೆ ಹಲವರು ಒತ್ತಾಯಿಸಿದ್ದಾರೆ.
ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಾಗೂ ಸಾರ್ವಜನಿಕರ ಉಪಯುಕ್ತತೆಗಾಗಿ ತೆರೆಯಲಾದ ಗ್ರಂಥಾಲಯಗಳು ೧೦ ಹಲವು ಸಮಸ್ಯೆಗಳನ್ನ ಎದುರಿಸುತ್ತಿದ್ದು, ಕೊರಟಗೆರೆ ಪಟ್ಟಣದ ಪ್ರಮುಖ ಕೇಂದ್ರ ಗ್ರಂಥಾಲಯದಲ್ಲಿ ಮಳೆ ನೀರು ಸೋರಿಕೆ ಆಗುತ್ತಿದ್ದು, ಪ್ರಮುಖ ಬುಕ್ಕುಗಳಿಳು ಹಾಳಾಗುವಂತ ಆತಂಕ ನಿರ್ಮಾಣವಾಗಿದೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಕೇಂದ್ರ ಗ್ರಂಥಾಲಯ ವ್ಯಾಪ್ತಿಯ ಶಾಖಾಗಂಗO ತಾಲಯ ಕೊರಟಗೆರೆ ಪಟ್ಟಣದಲ್ಲಿ ಹಲವು ಸಮಸ್ಯೆಗಳಿಂದ ಕೊಡಿದು, ಗ್ರಂಥಾಲಯ ಬಹಳ ಕಿರಿದಾಗಿದ್ದು, ಗ್ರಂಥಾಲಯಕ್ಕೆ ಬರುವ ಸಂಖ್ಯೆ ಹೆಚ್ಚಾಗಿರುವ ಕಾರಣ ಸಾರ್ವಜನಿಕರು ಬಹಳ ಕಿರಿಕಿರಿ ಅನುಭವಿಸುತ್ತಿದ್ದು, ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಹಲವು ಪುಸ್ತಕಗಳು ಈ ಗ್ರಂಥಾಲಯದಲ್ಲಿದ್ದು ಸತತ ಮಳೆಯಿಂದ ಮಳೆ ನೀರು ಸೋರಿಕೆಯಾಗಿ ಹಲವು ಪುಸ್ತಕಗಳು ಮಳೆಗೆ ನೆಂದು ಹಾಳಾಗುತ್ತಿದ್ದು, ಗ್ರಂಥಪಾಲಕರಿಗೆ ಹಾಗೂ ಸಾರ್ವಜನಿಕರಿಗೆ ತಲೆ ನೋವಾಗಿ ಪ್ರಣಮಿಸಿದೆ ಜೊತೆಗೆ ಇಲ್ಲಿನ ಸಾರ್ವಜನಿಕರು ಸಂಬOಧಪಟ್ಟOತ ಇಲಾಖೆಗಳು ಗಮನ ಆರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೊರಟಗೆರೆ ಭಾಗದಲ್ಲಿ ಸುಸಜ್ಜಿತವಾದ ಅತ್ಯುನ್ನತ ತಂತ್ರಜ್ಞಾನವುಳ್ಳ ಡಿಜಿಟಲ್ ಗ್ರಂಥಾಲಯದ ಅವಶ್ಯಕತೆ ಇದ್ದು, ಆದರೆ ಬಹಳ ಕಿರಿದಾದ ಚಿಕ್ಕ ಕೊಠಡಿಯಲ್ಲಿ ಗ್ರಂಥಾಲಯ ಬಹಳ ವರ್ಷಗಳಿಂದ ನೆಡೆಯುತ್ತಿದ್ದು, ಈ ಗ್ರಂಥಾಲಯ ಕೊರಟಗೆರೆ ಹೃದಯ ಭಾಗದಲ್ಲಿರುವುದರಿಂದ ಬಹಳಷ್ಟು ನಿವೃತ್ತ ನೌಕರರು, ಹಲವು ಸಾರ್ವಜನಿಕರು ದಿನಪತ್ರಿಕೆ ಓದಲು ಜೊತೆಗೆ ಬಹಳಷ್ಟು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವಂಥ ಬಹಳಷ್ಟು ಪುಸ್ತಕಗಳನ್ನ ಓದಲು ಗ್ರಂಥಾಲಯಕ್ಕೆ ಬರುವುದು ಸಾಮಾನ್ಯವಾಗಿದ್ದು, ಬಹಳಷ್ಟು ಜನ ಓದುಗರ ಸಂಖ್ಯೆ ಹೆಚ್ಚಾಗಿದ್ದರು ಕುಳಿತುಕೊಳ್ಳಲು ಸ್ಥಳಾವಕಾಶ ಇಲ್ಲದಿರುವುದರಿಂದ ಬಹಳಷ್ಟು ಜನ ವ್ಯವಸ್ಥೆಯ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿರುವುದು ಸಾಮಾನ್ಯವಾಗಿದ್ದು, ಕೊರಟಗೆರೆ ಪಟ್ಟಣಕ್ಕೆ ಒಂದು ಸುಸಜ್ಜಿತವಾದಂತ ವಿಶಾಲ ಕೊಠಡಿ ಇದ್ದರೆ ಬಹಳಷ್ಟು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು, ಈಗ ನಡೆಯುತ್ತಿರುವ ಗ್ರಂಥಾಲಯ ಬಹಳ ವ್ಯವಸ್ಥೆಯಿಂದ ಕುಡಿದು ಮಳೆ ಬಂದ್ರೆ ಮಳೆ ನೀರು ಸೋರಿ ಕೆಲವು ಉಪಯುಕ್ತ ಪುಸ್ತಕಗಳು ಹಾಳಾಗುತ್ತಿವೆ.
ಮಳೆ ಬಂದರೆ ಕೊಠಡಿ: ಸೋರುತಿರುವುದರಿಂದ ಬುಕ್ಕು ಇಟ್ಕೋಳೋಕೆ ತುಂಬಾ ಸಮಸ್ಯೆ ಆಗಿದೆ ಬುಕ್ಕುಗಳಿರು ಸ್ಥಳದಲ್ಲಿ ಮಳೆ ನೀರು ಸೋರಿಕೆಯಿಂದ ನೆಂದು ಹಾಳಾಗುತ್ತಿದ್ದು, ಈ ಗ್ರಂಥಾಲಯದಲ್ಲಿ ಬಹಳಷ್ಟು ನಾವು ಕಿರಿಕಿರಿ ಅನುಭವಿಸುತ್ತಿದ್ದು, ಬೆಳಗ್ಗಿಂದ ಸಂಜೆವರೆಗೂ ನಾವು ಗ್ರಂಥಾಲಯದಲ್ಲಿ ಕೂತು ಕೆಲಸ ಮಾಡುವ ನಮಗೆ ನಮ್ಮ ಬಳಕೆಗೂ ಇಲ್ಲಿ ಶೌಚಾಲಯ ಇಲ್ಲದೆ ಗ್ರಂಥಾಲಯದಲ್ಲಿ ಬಹಳಷ್ಟು ಸಮಸ್ಯೆಯನ್ನು ಎದುರಿಸಲಾಗುತ್ತಿದೆ ಎಂದು ನೋವು ತೋಡಿಕೊಂಡಿದ್ದಾರೆ.