ಕೆಎಸ್ಆರ್ಟಿಸಿ ಬಸ್ ಹರಿದು 8 ಕುರಿಗಳು ಸಾವು

ಕೆಎಸ್ಆರ್ಟಿಸಿ ಬಸ್ ಹರಿದು 8 ಕುರಿಗಳು ಸಾವು

 ಮಧುಗಿರಿ : ಕೆಎಸ್ಆರ್ಟಿಸಿ ಬಸ್ ಹರಿದು ಎಂಟು ಕುರಿಗಳು ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ ಸುಮಾರು 6:30 ಘಂಟೆಯಲ್ಲಿ ನಡೆದಿದೆ. ಮಿಡಿಗೇಶಿ ಹೋಬಳಿ ಗಿರಿಯಮ್ಮನಪಾಳ್ಯ ಬಸ್ ನಿಲ್ದಾಣದ ಸಮೀಪ ಮಧುಗಿರಿಯಿಂದ ಪಾವಗಡಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ನ್ನು  ಅತಿ ವೇಗವಾಗಿ ಚಲಾಯಿಸಿ, ಕುರಿಗಳಿಗೆ ಡಿಕ್ಕಿಯಾಗಿದೆ. ಪರಿಣಾಮ 8 ಕುರಿಗಳು ಸ್ಥಳದಲ್ಲೆ ಸಾವನ್ನಪ್ಪಿವೆ. ಬಸ್ ಚಾಲಕ ಬಸ್ನ್ನು ಘಟನಾ ಸ್ಥಳದಲ್ಲಿ ನಿಲ್ಲಿಸದೆ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆಂದು ಕುರಿಗಳ ಮಾಲೀಕ ಪಡಸಾಲಹಟ್ಟಿಯ ಸಣ್ಣೀರಣ್ಣ ಆರೋಪಿಸಿದ್ದಾರೆ. ಮಿಡಿಗೇಶಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *