Lawyer Jagadish ಶ*  ನೈಸ್ ರೋಡ್ನಲ್ಲಿ ಪತ್ತೆ, ಕೊಲೆ ಶಂಕೆ

Lawyer Jagadish ಶ* ನೈಸ್ ರೋಡ್ನಲ್ಲಿ ಪತ್ತೆ, ಕೊಲೆ ಶಂಕೆ

ಬೆಂಗಳೂರು: ಬೆಂಗಳೂರಿನ ಬನ್ನೇರುಘಟ್ಟ-ಕನಕಪುರ ನೈಸ್ ರಸ್ತೆಯಲ್ಲಿ ವಕೀಲ ಜಗದೀಶ್ ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಜಗದೀಶ್ ಅವರ ಕಾರು ನಿಲ್ಲಿಸಿದ್ದ ಜಾಗದಿಂದ ಕೆಲವೇ ಮೀಟರ್ ದೂರದಲ್ಲಿ ಅವರ ಮೃತದೇಹ ಸಿಕ್ಕಿದೆ. ಇವರ ಮೃತದೇಹವು ರಕ್ತಸಿಕ್ತವಾಗಿ ಕಂಡುಬಂದಿದ್ದು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿರುವುದಾಗಿ ವರದಿಯಾಗಿದೆ. ಈ ಘಟನೆ ನೋಡಿದರೆ ಜಗದೀಶ್ ಅವರನ್ನು ಕೊಲೆ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ.

ಈ ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಮೇಲ್ನೋಟಕ್ಕೆ ಇದು ಕೊಲೆ ಎಂದು ಸಂಶಯ ವ್ಯಕ್ತವಾಗಿದ್ದು, ನೈಸ್ ರಸ್ತೆಯಲ್ಲಿ ಕಾರಿನಿಂದ ಹೊರಗೆ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮೇ 2ರ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸದ್ಯ ಕೊಲೆಯ ಶಂಕೆ ವ್ಯಕ್ತವಾಗಿದ್ದು, ಕೆಂಗೇರಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಜಗದೀಶ್ ಅವರ ಕಾರು ನಿಂತಿದ್ದ ಸ್ಥಳದಿಂದ ಸುಮಾರು 200 ಮೀಟರ್ ಅಂತರದಲ್ಲಿ ಹೊರಗೆ ಅವರ ಮೃತದೇಹ ಬಿದ್ದಿತ್ತು. ಅಲ್ಲದೆ ಆ ಕಾರಿನ ಮೇಲೆ ಅಪಘಾತದ ಗುರುತುಗಳು ಕೂಡ ಕಂಡುಬಂದಿವೆ. ನೈಸ್ ರಸ್ತೆಯಲ್ಲಿ ಕಾರೊಂದು ನಿಂತಿತ್ತು. ಇದನ್ನು ಪರಿಶೀಲಿಸಿದಾಗ ಒಳಗೆ ಯಾರೂ ಇರಲಿಲ್ಲ. ಬಳಿಕ ಅಕ್ಕಪಕ್ಕ ಹುಡುಕಾಡಿದಾಗ ಜಗದೀಶ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಕೆಂಗೇರಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಕೇಸ್ ದಾಖಲಿಸಿಕೊಂಡಿದ್ದಾರೆ. ಜಗದೀಶ್ ಅವರ ದೇಹದ ಹಲವೆಡೆ ಗಾಯಗಳು ಕೂಡ ಕಂಡುಬಂದಿವೆ. ಇದು ಅಪಘಾತವೇ ಅಥವಾ ಕೊಲೆ ಯತ್ನವೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ಘಟನೆಯು ನೈಸ್ ರಸ್ತೆಯಲ್ಲಿ ಸಂಚರಿಸುವವರನ್ನು ಬೆಚ್ಚಿಬೀಳಿಸಿದೆ.

ಪೊಲೀಸರು ಹೇಳಿದ್ದೇನು? ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್ ಗಿರೀಶ್, ಪೊಲೀಸರು ಕೆಂಗೇರಿಯ ಸಿವಿ ರಾಮನ್ ಎಸ್ಟೇಟ್ನ ನೈಸ್ ರಸ್ತೆಯಲ್ಲಿ ವಕೀಲ ಎಚ್.ಜಗದೀಶ್ ಅವರ ಶವವನ್ನು ವಶಪಡಿಸಿಕೊಂಡಿದ್ದಾರೆ. ಮೃತರು ಕೆಂಗೇರಿಯ ಎಸ್ಎಂವಿ ಲೇಔಟ್ ನಿವಾಸಿ ಎಂದು ತಿಳಿದುಬಂದಿದೆ. ಅವರ ಶವ ಅವರ ಕಾರಿನಿಂದ ಕೆಲವು ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಅವರ ಕಾರಿನ ದೀಪಗಳು ಆನ್ ಆಗಿದ್ದವು ಮತ್ತು ಬಾಗಿಲುಗಳು ಲಾಕ್ ಆಗಿದ್ದವು. ಅವರ ತಲೆ ಮತ್ತು ದೇಹದ ಇತರ ಭಾಗಗಳಿಗೆ ಪೆಟ್ಟು ಬಿದ್ದಿತ್ತು. ಮೃತರ ಸಂಬಂಧಿ ನೀಡಿದ ದೂರಿನ ಮೇರೆಗೆ ಕೆಂಗೇರಿ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

Leave a Reply

Your email address will not be published. Required fields are marked *