ಹಿಂದೂಗಳಿಗೆ, ನವರಾತ್ರಿ 2024 ರ ದೊಡ್ಡ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯೊಂದಿಗೆ ವರ್ಣರಂಜಿತ ಆಚರಣೆಯಾಗಿದೆ. ಈ ಒಂಬತ್ತು ದಿನಗಳ ಆಚರಣೆಯು ದುರ್ಗಾ ದೇವಿಯ ಒಂಬತ್ತು ಅಭಿವ್ಯಕ್ತಿಗಳನ್ನು ಗೌರವಿಸುತ್ತದೆ ಮತ್ತು ಭಾರತದಾದ್ಯಂತ ವ್ಯಾಪಕವಾಗಿ ಧಾರ್ಮಿಕ ಉತ್ಸಾಹದಿಂದ ಆಚರಿಸಲಾಗುತ್ತದೆ. ಹಿಂದಿನ ವಿಡಿಯೊದಲ್ಲಿ ೯ ದಿನಗಳು ಮಾ ದುರ್ಗೆಯ ಯಾವ ರೂಪವನ್ನು ಪೂಜಿಸುತ್ತೆವೆ ಎಂಬುದನ್ನು ತಿಳಿದಿದ್ದೆವು. ಈಗ ೯ ದಿನಗಳ ಕಾಲ ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು ಎಂಬುದನ್ನು ತಿಳಿಯೊಣ ಬನ್ನಿ.
ಮೊದಲನೆಯ ದಿನ ಹಳದಿ ಬಣ್ಣದಿಂದ ಪ್ರಾರಂಬವಾಗಿ, ನಂತರ ಹಸಿರು ಬಣ್ಣ, ಬೂದಿ ಬಣ್ಣ, ಕೆತ್ತಳೆ ಬಣ್ಣ, ಬಿಳಿ ಬಣ್ಣ, ಕೆಂಪು ಬಣ್ಣ, ನೀಲಿ ಬಣ್ಣ, ಗುಲಾಬಿ ಬಣ್ಣ, ಕೊನೆಗೆ ನೇರಳೆ ಬಣ್ಣ ಈ ಕ್ರಮವಾಗಿ ೯ ದಿನಗಳ ಕಾಲ ಈ ಮಂಗಳಕರ ನಾಡಹಬ್ಬವು ಸಂಪೂರ್ಣಗೊಳ್ಳುತ್ತದೆ.
ನವರಾತ್ರಿ ಪ್ರಾರಂಭವಾಗುವ ವಾರದ ದಿನದ ಆಧಾರದ ಮೇಲೆ ನವರಾತ್ರಿಯ ಮೊದಲ ಬಣ್ಣವನ್ನು ನಿರ್ಧರಿಸಲಾಗುತ್ತದೆ ಮತ್ತು ಉಳಿದ 8 ದಿನಗಳು ಬಣ್ಣಗಳ ಸ್ಥಿರ ಚಕ್ರವನ್ನು ಅನುಸರಿಸುತ್ತವೆ.