ಸಂಪಾದಕೀಯ || ಅತ್ಯಾ*ರಿಗೆ ಜೀವಾವಧಿ ಶಿಕ್ಷೆ : ವಿಶ್ವಾಸ ಮೂಡಿಸಿದ ತೀರ್ಪು.

law

ಹಾಸನದ ಲೋಕಸಭಾ ಸದಸ್ಯರಾಗಿದ್ದ ಜಾತ್ಯತೀತ ಜನತಾ ದಳ ಪಕ್ಷದ 34 ವರ್ಷದ ಪ್ರಜ್ವಲ್ ರೇವಣ್ಣ ವಿರುದ್ಧ ಮನೆಕೆಲಸದ 48 ವರ್ಷದ ಮಹಿಳೆಯ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದ ಆರೋಪ ಸಾಬೀತಾಗಿದ್ದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಕಠಿಣ ಶಿಕ್ಷೆ ವಿಧಿಸಿದೆ.

ಹನ್ನೊಂದು ಲಕ್ಷದ ಅರವತ್ತು ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದ್ದು ಅದರಲ್ಲಿ ಹನ್ನೊಂದು ಲಕ್ಷ ಇಪ್ಪತ್ತೆöÊದು ಸಾವಿರ ರೂಪಾಯಿಯನ್ನು ಸಂತ್ರಸ್ತೆಗೆ ಮತ್ತು ಉಳಿದ ಮೂವತ್ತೆöÊದು ಸಾವಿರ ರೂಪಾಯಿಯನ್ನು ಸರ್ಕಾರಕ್ಕೆ ಸಲ್ಲಿಸಲು ತೀರ್ಪಿನಲ್ಲಿ ಆದೇಶ ನೀಡಲಾಗಿದೆ.

ಕರ್ನಾಟಕದ ಪ್ರಭಾವಿ ರಾಜಕೀಯ ಕುಟುಂಬಕ್ಕೆ ಸೇರಿದ ಪ್ರಜ್ವಲ್ ರೇವಣ್ಣ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ. ರಾಜ್ಯ ಸರ್ಕಾರದಲ್ಲಿ ಹಲವು ಬಾರಿ ಸಚಿವರಾಗಿದ್ದ ಎಚ್.ಡಿ.ರೇವಣ್ಣನವರ ಎರಡನೇ ಪುತ್ರ. ಎರಡು ಸಲ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣನವರ ಚಿಕ್ಕಪ್ಪ. ಪ್ರಜ್ವಲ್ ಅಣ್ಣ ಸೂರಜ್ ರೇವಣ್ಣ ಕರ್ನಾಟಕ ವಿಧಾನಪರಿಷತ್ತಿನ ಸದಸ್ಯ.

ಇಷ್ಟು ಪ್ರಭಾವಿ ಕುಟುಂಬದ ಹಿನ್ನೆಲೆ ಇದ್ದರೂ ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಈ ತೀರ್ಪು ದೃಢಪಡಿಸಿ ನ್ಯಾಯಾಲಯಗಳ ಬಗ್ಗೆ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸಿದೆ. ಈ ತೀರ್ಪು ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದಾಖಲಾದ ನಾಲ್ಕು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಮೊದಲನೆಯದಾಗಿದೆ.

2024 ರ ಏಪ್ರಿಲ್ನಲ್ಲಿ 2,900 ಕ್ಕೂ ಹೆಚ್ಚು ಅಶ್ಲೀಲ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಡಿದಾಗ ಬೆಳಕಿಗೆ ಬಂದ ಪ್ರಕರಣ ಇದಾಗಿದ್ದು ಈ ವಿಡಿಯೊಗಳಲ್ಲಿ ಸುಮಾರು 50 ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಚಿತ್ರಿಸಿಕೊಂಡಿದ್ದು ಬಯಲಾಗಿತ್ತು. ಇವರಲ್ಲಿ ನಾಲ್ಕು ಮಂದಿ ಮಾತ್ರ ದೂರು ದಾಖಲಿಸಿದ್ದರು.

ಪ್ರಕರಣಗಳ ಹಿನ್ನೆಲೆಯಲ್ಲಿ ರಚನೆಯಾದ ವಿಶೇಷ ತನಿಖಾ ತಂಡ (ಎಸ್ ಐಟಿ) ವ್ಯಾಪಕವಾಗಿ ತನಿಖೆ ನಡೆಸಿ 1,632 ಪುಟಗಳ ಚಾರ್ಜಿ್ಶÃಟ್ ಸಲ್ಲಿಸಿತು, ಇದರಲ್ಲಿ 113 ಸಾಕ್ಷಿಗಳು ಮತ್ತು ಡಿಎನ್‌ಎ ಸಾಕ್ಷ÷್ಯಗಳು ಪ್ರಮುಖ ಪಾತ್ರವಹಿಸಿದವು. ವಿಡಿಯೊದಲ್ಲಿ ಪ್ರಜ್ವಲ್ ಅವರ ಮುಖ ಗೋಚರಿಸದಿದ್ದರೂ, ಫಾರೆನ್ಸಿಕ್ ವಿಶ್ಲೇಷಣೆಯು ಅವರ ಗುರುತನ್ನು ದೃಢಪಡಿಸಿದ್ದು ಪ್ರಕರಣದಲ್ಲಿ ನಿರ್ಣಾಯಕ ಪುರಾವೆಗಳನ್ನು ಒದಗಿಸಿದೆ.

ಸಂತ್ರಸ್ತೆಯು ವಿಚಾರಣೆಯ ಕಾಲದಲ್ಲಿ ದೃಢವಾಗಿದ್ದು ತಮ್ಮ ಮೇಲಿನ ದೌರ್ಜನ್ಯವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿರುವುದನ್ನು ತನಿಖಾ ತಂಡವು ಗುರುತಿಸಿದೆ. ಈ ತೀರ್ಪು ಕರ್ನಾಟಕದಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧದ ಹೋರಾಟಕ್ಕೆ ಸಿಕ್ಕಿದ ಗೆಲುವಾಗಿದ್ದು ಒಂದು ಮಹತ್ವದ ಮೈಲಿಗಲ್ಲಾಗಿದೆ.

ಇದು ಇತರ ಸಂತ್ರಸ್ತ ಮಹಿಳೆಯರಿಗೆ ಧೈರ್ಯ ನೀಡಬಹುದೆಂಬ ವಿಶ್ವಾಸವನ್ನು ಸಾಮಾಜಿಕ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ. ಜನವಾದಿ ಮಹಿಳಾ ಸಂಘಟನೆಯು ಸಂತ್ರಸ್ತರ ಪುನರ್ವಸತಿಗೆ ಒತ್ತಾಯಿಸಿದೆ. ಪ್ರಕರಣ ದಾಖಲಾದ ಹದಿನಾಲ್ಕು ತಿಂಗಳಲ್ಲಿ ತೀರ್ಮಾನಕ್ಕೆ ಬಂದಿದ್ದು, ರಾಜಕೀಯ ಪ್ರಭಾವದ ವ್ಯಕ್ತಿಗಳ ವಿರುದ್ಧವೂ ಕಾನೂನು ತ್ವರಿತವಾಗಿ ಕಾರ್ಯನಿರ್ವಹಿಸಬಹುದೆಂಬ ಸಂದೇಶವನ್ನು ಸಾರಿದೆ. ಲೈಂಗಿಕ ದೌರ್ಜನ್ಯ ನಡೆಸಿದ ಇನ್ನೂ ಮೂರು ಪ್ರಕರಣಗಳು ವಿಚಾರಣೆಗೆ ಒಳಪಟ್ಟು ತಾರ್ಕಿಕ ಅಂತ್ಯಕ್ಕೆ ಬರಬೇಕಾಗಿದೆ.

ಕಾನೂನು ರಚಿಸುವ ಜವಾಬ್ದಾರಿ ಇದ್ದ ಆರೋಪಿಯೊಬ್ಬರ ವಿರುದ್ಧದ ಈ ಪ್ರಕರಣದಲ್ಲಿ ತನಿಖಾ ಸಂಸ್ಥೆಯ ಎಚ್ಚರಿಕೆ ವಹಿಸಿ ನಿರ್ವಹಿಸಿದ ಕಾರ್ಯ ಶ್ಲಾಘನೀಯ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕರಾರುವಾಕ್ಕಾದ ಫಲಿತಾಂಶ ಪಡೆದು ಪ್ರಭಾವಿ ವ್ಯಕ್ತಿಯ ಅಕ್ಷಮ್ಯ ಕುಕೃತ್ಯವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿರುವುದನ್ನು ನ್ಯಾಯಾಧೀಶ ಸಂತೋಷ ಗಜಾನನ ಭಟ್ ಶ್ಲಾಘಿಸಿದ್ದಾರೆ.

ಮಹಿಳೆಯ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯವು ಎಲ್ಲ ರೀತಿಯ ಪುರಾವೆಗಳೊಂದಿಗೆ ನ್ಯಾಯಾಲಯದಲ್ಲಿ ಸಾಬೀತಾಗಿದ್ದರೂ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಅವರು ತೀರ್ಪು ಪ್ರಕಟಣೆಗೆ ಮೊದಲು ಸಿಕ್ಕ ಅವಕಾಶದಲ್ಲಿ ತಮ್ಮ ಏಳಿಗೆಯನ್ನು ಸಹಿಸದೆ ಷಡ್ಯಂತ್ರ ನಡೆಸಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂಬ ವಾದವನ್ನು ಮುಂದೆ ಮಾಡುವ ಮೂಲಕ ತಮ್ಮಲ್ಲಿ ಮಹಿಳೆಯರ ವಿರುದ್ಧ ನಡೆಸಿದ ದೌರ್ಜನ್ಯದ ಬಗ್ಗೆ ಸ್ವಲ್ಪವೂ ಪಶ್ಚಾತ್ತಾಪದ ಕುರುಹು ಇಲ್ಲದಿರುವುದನ್ನು ಪ್ರಕಟಿಸಿರುವುದು ಪ್ರಾಸಿಕ್ಯೂಷನ್ ವಕೀಲರು ಎತ್ತಿ ತೋರಿಸುವಂತಾಗಿದೆ.

ನಾಗರಿಕ ಸಮಾಜ ಜುಗುಪ್ಸೆ ಪಡುವಂತೆ ನಡುವಯಸ್ಸಿನ ಮಹಿಳೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದುದಲ್ಲದೆ, ಅದನ್ನು ಮೊಬೈಲ್ ನಲ್ಲಿ ಚಿತ್ರಿಸಿಕೊಂಡು ವಿಕೃತಿ ಮೆರೆದ ಪ್ರಕರಣ ಸಮಕಾಲೀನ ರಾಜಕೀಯ ನಡವಳಿಕೆಗಳಲ್ಲಿ ಅಪರೂಪದ ಪ್ರಸಂಗ ಎನಿಸಿದೆ.

ತಮ್ಮನ್ನು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಎಂಥ ವ್ಯಕ್ತಿಗಳು ಪ್ರತಿನಿಧಿಸಬೇಕು ಎಂಬುದನ್ನು ನಿರ್ಧರಿಸುವ ಮತದಾರರು ರಾಜಕೀಯ ಪಕ್ಷದ ಹಿನ್ನೆಲೆ, ಅಭ್ಯರ್ಥಿಯ ಕುಟುಂಬದ ಪ್ರಭಾವಳಿ, ಚುನಾವಣೆ ಪ್ರಚಾರದಲ್ಲಿ ನೀಡುವ ಭರವಸೆಗಳು ಮೊದಲಾದ ಸಂಗತಿಗಳ ಜೊತೆಗೆ ಅಭ್ಯರ್ಥಿಯ ಚಾರಿತ್ಯವನ್ನೂ ತಿಳಿದುಕೊಳ್ಳುವ ಎಚ್ಚರಿಕೆ ವಹಿಸಬೇಕು ಎಂಬ ಸಂದೇಶವನ್ನೂ ಈ ಪ್ರಕರಣದ ತೀರ್ಪು ನೀಡಿದೆ. ಕುಟುಂಬದ ಪ್ರತಿಷ್ಠೆ, ಸಾರ್ವಜನಿಕವಾಗಿ ವ್ಯಕ್ತವಾಗುವ ಶ್ರೀಮಂತಿಕೆ, ಅಧಿಕಾರ ದರ್ಪದ ನಡವಳಿಕೆಗಳು ತಮ್ಮ ಆಯ್ಕೆಯಾಗುವುದು ಎಷ್ಟರಮಟ್ಟಿಗೆ ಸರಿ ಎಂದು ಮತದಾರರು ತಮ್ಮ ನಿರ್ಧಾರದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೂ ಇಂಥ ಪ್ರಕರಣಗಳ ತೀರ್ಪು ಪ್ರೇರಣೆ ನೀಡುತ್ತವೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಡೆದಿರುವ ಅಪರಾಧಕ್ಕೆ ಭಾರತೀಯ ನ್ಯಾಯಸಂಹಿತೆಯ ಅನ್ವಯ ಗರಿಷ್ಠ ಪ್ರಮಾಣದ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗಿದ್ದರೂ ಮೇಲಿನ ನ್ಯಾಯಾಲಯಗಳಲ್ಲಿ ಮೇಲರಿಕೆ ಮಾಡಿಕೊಂಡು ನ್ಯಾಯ ಪಡೆದುಕೊಳ್ಳುವ ಅವಕಾಶ ಅಪರಾಧಿಗೆ ಮುಕ್ತವಾಗಿದೆ. ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿಯೂ ವಿಚಾರಣೆ ನಡೆಸಿ ಕರಾರುವಾಕ್ಕಾದ ಸಾಕ್ಷ್ಯ ಆಧರಿಸಿ ಕೈಗೊಂಡ ತೀರ್ಪು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳಲ್ಲಿಯೂ ನಿಲ್ಲುವುದು ನ್ಯಾಯನಿರ್ಣಯ ಪ್ರಕ್ರಿಯೆಯಲ್ಲಿ ಮಹತ್ವದ್ದಾಗುತ್ತದೆ. ಅಂಥ ಸಾಧ್ಯತೆಗಳು ಪ್ರಭಾವಿಗಳಿಗೆ ಮುಕ್ತವಾಗಿರುತ್ತವೆ ಎಂಬುದನ್ನು ಸಾರ್ವಜನಿಕರು ಕಡೆಗಣಿಸುವಂತಿಲ್ಲ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *