ಕೋಗಿಲು ಪರಿಹಾರಕ್ಕೆ ಮಿಂಚಿನ ವೇಗ.

ಕೋಗಿಲು ಪರಿಹಾರಕ್ಕೆ ಮಿಂಚಿನ ವೇಗ.

ದಶಕಗಳಿಂದ ಕಾಯ್ತಿರುವವರಿಗಿಲ್ಲ ಸೂರು.

ಬೆಂಗಳೂರು : ಬೆಂಗಳೂರಿನ ಕೋಗಿಲು ಲೇಔಟ್​​ನಲ್ಲಿ ಅಕ್ರಮ ಶೆಡ್, ಮನೆಗಳ ತೆರವು ದೊಡ್ಡ ಮಟ್ಟದಲ್ಲಿ ರಾಜಕೀಯ ಕೋಲಾಹಲವನ್ನೇ ಸೃಷ್ಟಿಸಿದೆ. ಇಲ್ಲಿನ ಸಂತ್ರಸ್ತರಿಗೆ ಕೇವಲ ಎರಡೇ ದಿನದಲ್ಲಿ ಪರಿಹಾರ ಕೊಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಬೇರೆಬೇರೆ ಜಿಲ್ಲೆಗಳಲ್ಲಿ ವಸತಿರಹಿತ ಸಂತ್ರಸ್ತರಿದ್ದರೂ ಅವರಿಗೆ ದಶಕಗಳಿಂದ ಪರಿಹಾರ ಸಿಕ್ಕಿಲ್ಲ. ಕಾಂಗ್ರೆಸ್ ಸರ್ಕಾರದ ಈ ಇಬ್ಭಗೆ ನೀತಿ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

65 ವರ್ಷ ಕಳೆದ್ರೂ ಶರಾವತಿ ಸಂತ್ರಸ್ತರಿಗೆ ಸಿಗದ ಹಕ್ಕುಪತ್ರ

ಶಿವಮೊಗ್ಗದಲ್ಲಿ 1959 ಲಿಂಗನಮಕ್ಕಿ ಡ್ಯಾಂ ನಿರ್ಮಾಣ ಆಗಿದ್ದು, ಸಾಗರ, ಹೊಸನಗರ ತಾಲೂಕಿನ 6000ಕ್ಕೂ ಅಧಿಕ ರೈತರು ಭೂಮಿ ಕಳೆದುಕೊಂಡಿದ್ದರು. ಇವರಿಗೆ 9,600 ಎಕರೆ ಭೂಮಿ ನೀಡಲಾಗಿದೆ. ಆದರೂ, 65 ವರ್ಷದಿಂದ ಹಕ್ಕುಪತ್ರ ಸಿಕ್ಕಿಲ್ಲ. ಇದೇ ಕಾಂಗ್ರೆಸ್ ನಾಯಕರು ಸಂತ್ರಸ್ತರ ಪರ ಪಾದಯಾತ್ರೆ ಮಾಡಿದ್ದರು. ಆದರೆ ಪಕ್ಷ ಅಧಿಕಾರಕ್ಕೆ ಬಂದಮೇಲೆ ಮರೆತು ಬಿಟ್ಟಿದ್ದಾರೆ.

ಕೊಡಗು ಪ್ರವಾಹ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ

2019 ರಲ್ಲಿ ಕುಶಾಲನಗರ ತಾಲೂಕಿನ ಸಿದ್ದಾಪುರ, ಕರಡಿಗೋಡು, ನೆಲ್ಲಿಹುದಿಕೇರಿ, ಕುಂಬಾರಗುಂಡಿ ಗ್ರಾಮಗಳು ಪ್ರವಾಹಕ್ಕೆ ಸಿಲುಕಿದ್ದವು. ಅಂದು ಮನೆ ಕಳೆದುಕೊಂಡವರಿಗೆ ಇಂದಿಗೂ ಪ್ಲಾಸ್ಟಿಕ್ ಹೊದಿಕೆಯೇ ಆಶ್ರಯವಾಗಿದೆ. ಸರ್ಕಾರ ಪರಿಹಾರ ಕೊಟ್ಟಿಲ್ಲ. ಪ್ರರ್ಯಾಯ ಮನೆಗೆ 7 ಎಕರೆ ಜಾಗ ಗುರುತು ಮಾಡಿದ್ದರೂ ಭರವಸೆ ಈಡೇರಿಲ್ಲ.

ಬೆಳಗಾವಿಯಲ್ಲಿ 1095 ದಿನ ಕಳೆದ್ರೂ ಸಿಕ್ಕಿಲ್ಲ ಸೂರು

ಬೆಳಗಾವಿಯ ಕಲ್ಯಾಣನಗರದಲ್ಲಿ ಮಳೆಯಿಂದ ಪ್ರೇಮಾ ಎಂಬುವವರ ಮನೆ ಬಿದ್ದಿತ್ತು. 1095 ದಿನ ಕಳೆದರೂ ಸೂರು ಸಿಕ್ಕಿಲ್ಲ. ಹೊಸ ಮನೆಗೆ ಪಾಯ ಹಾಕಿ ಪರಿಹಾರಕ್ಕಾಗಿ ಕುಟುಂಬ ಕಾಯುತ್ತಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಕಣ್ಣೀರು ಒರೆಸದ ಸರ್ಕಾರ

ಬೆಂಗಳೂರು ಜನರಿಗೆ ಪರಿಹಾರ ಕೊಟ್ಟ ಸರ್ಕಾರದ ವಿರುದ್ಧ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರು ಆಕ್ರೋಶ ಹೊರಹಾಕಿದ್ದಾರೆ. ಸರಕಾರದ ಇಬ್ಬಗೆಯ ನೀತಿಗೆ ಕಿಡಿಕಾರಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *