‘ಸಿದ್ದರಾಮಯ್ಯ ಸರ್ಕಾರ ಕೇರಳದ್ದಾ ಅಥವಾ ಕರ್ನಾಟಕದ್ದಾ?’ – ಆರ್.ಅಶೋಕ್ ಕಿಡಿ.

 ‘ಸಿದ್ದರಾಮಯ್ಯ ಸರ್ಕಾರ ಕೇರಳದ್ದಾ ಅಥವಾ ಕರ್ನಾಟಕದ್ದಾ?’ – ಆರ್.ಅಶೋಕ್ ಕಿಡಿ.

ರಾಜಕೀಯ ವಾಗ್ದಾಳಿ ‘ಸಿದ್ದರಾಮಯ್ಯ ಸರ್ಕಾರ ಕೇರಳದ್ದಾ

ಬೆಂಗಳೂರುಕೋಗಿಲು ಲೇಔಟ್  ನಿವಾಸಿಗಳಿಗೆ ಮನೆ ಹಂಚಿಕೆಗೆ ನಿರ್ಧಾರ ವಿಚಾರ ಸದ್ಯ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ವಿಪಕ್ಷಗಳು ತೀವ್ರ ಕಿಡಿಕಾರಿವೆ. ಯಾವ ಕಾನೂನಿನಡಿಯಲ್ಲೂ ಅವರಿಗೆ ಮನೆ ಕೊಡಲು ಸಾಧ್ಯವೇ ಇಲ್ಲ. ಕನ್ನಡಿಗರ ನೆಲ ಪರಭಾರೆ ಮಾಡುವ ಅಧಿಕಾರ ನಿಮಗೆ ಯಾರು ಕೊಟ್ಟರು? ರಾಜ್ಯದಲ್ಲಿರುವ ಸರ್ಕಾರ ಕೇರಳದ್ದಾ ಅಥವಾ ಕರ್ನಾಟಕದ್ದಾ ಎಂದು ವಿಪಕ್ಷ ನಾಯಕ ಆರ್​. ಅಶೋಕ್ (R Ashoka)​ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಪಾಕಿಸ್ತಾನಕ್ಕೂ ನಮ್ಮನ್ನು ಕಾಂಗ್ರೆಸ್ನವರು ಅಡವಿಟ್ಟುಬಿಟ್ರಾ?: ಅಶೋಕ್ ಕಿಡಿ

ಕೋಗಿಲು ಅಕ್ರಮ ವಲಸಿಗರ ಮನೆ ತೆರವು ವಿಚಾರವಾಗಿ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್​​, ಕೋಗಿಲು ಲೇಔಟ್​ನಲ್ಲಿ ಅನಧಿಕೃತ ಮನೆಗಳ ತೆರವು ಸಂಬಂಧಿಸಿದ ದಾಖಲೆಗಳ ಬಿಡುಗಡೆ ಮಾಡಿದ್ದಾರೆ. ಮನೆ ಹಂಚಿಕೆ ವಿಚಾರ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಿಬಿಟ್ಟಿದೆ. ಈಗ ಪಾಕಿಸ್ತಾನಕ್ಕೂ ನಮ್ಮನ್ನು ಕಾಂಗ್ರೆಸ್​ನವರು ಅಡವಿಟ್ಟುಬಿಟ್ರಾ? ಪಾಕಿಸ್ತಾನದವರು ಕರ್ನಾಟಕದ ಬಗ್ಗೆಯೇ ಯಾಕೆ ಮಾತಾಡುತ್ತಾರೆ? ಪಾಕ್​ನವರು ಮಹಾರಾಷ್ಟ್ರ, ತಮಿಳುನಾಡು ಬಗ್ಗೆ ಯಾಕೆ ಮಾತಾಡಲ್ಲ. ಸಿಎಂ, ಡಿಸಿಎಂ ಜಗಳದಲ್ಲಿ ನಾವು ದುರಂತದ ತುದಿಗೆ ಬಂದು ಬಿಟ್ಟಿದ್ದೇವೆ. ಬಾಂಗ್ಲಾದವರಿಗೆ ಜಮೀನು‌ ಕೊಡುತ್ತೀರಿ ಅಂತಾದರೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.

ಕೋರ್ಟ್ಮೊರೆ ಹೋಗುವ ಸಂಬಂಧ ಚರ್ಚೆ

ಕೋಗಿಲು ಲೇಔಟ್​ ನಿವಾಸಿಗಳಿಗೆ ಮನೆ ಹಂಚಿಕೆ ವಿಚಾರವಾಗಿ ಕೋರ್ಟ್​ ಮೊರೆ ಹೋಗುವ ಸಂಬಂಧ ಚರ್ಚೆ ನಡೆಸಿದ್ದೇವೆ. ಈಗಾಗಲೇ ಈ ಬಗ್ಗೆ ಕಾನೂನು ತಂಡಕ್ಕೆ ಸೂಚನೆ ನೀಡಿದ್ದೇನೆ. ವಿಜಯಪುರ ಜಿಲ್ಲೆಯ ಆಲಮಟ್ಟಿ, ಕೊಡಗು ಸೇರಿದಂತೆ ರಾಜ್ಯದಲ್ಲಿರುವ ಸಂತ್ರಸ್ತರಿಗೆ ಮನೆ ಕೊಡಲು ಯೋಗ್ಯತೆ ಇಲ್ಲ ಎಂದಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *