ಮಂಡ್ಯ : ನಿತ್ಯ ಜೀವನದ ಬದುಕಿನಲ್ಲಿ ಒಂದಲ್ಲ ಒಂದು ಕ್ಷೇತ್ರದಲ್ಲಿ ಮೋಸ ನಡೆಯುತ್ತಲೇ ಇರುತ್ತದೆ. ಅದೇ ರೀತಿ ಮಂಡ್ಯದಲ್ಲಿ ಗ್ರಾಹಕರಿಗೆ ತೂಕದಲ್ಲಿ ವ್ಯತ್ಯಾಸ ಮಾಡುತ್ತಿದ್ದ ಪಾಂಡವಪುರ ಪಟ್ಟಣದ ಮೂರು ಆಭರಣ ಮಳಿಗೆಗಳಿಗೆ ಬೀಗ ಹಾಕಲಾಗಿದೆ. ಮಹಾಲಕ್ಷ್ಮಿ ಬ್ಯಾಂಕರ್ ಅಂಡ್ ಜುವೆಲರ್ಸ್, ಮಹೇಂದ್ರ ಜುವೆಲರ್ಸ್ ,ಹಾಗೂ ಲಕ್ಷ್ಮೀ ಜುವೆಲರ್ಸ್ ಮಾಲೀಕರಿಗೆ ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳು ಎಚ್ಚರಿಕೆ ನೀಡಿ ನೋಟಿಸ್ ಜಾರಿ ಮಾಡಿದ್ದಾರೆ. ಈ ಮಳಿಗೆಗಳಲ್ಲಿದ್ದ ತೂಕದ ಯಂತ್ರಗಳಲ್ಲಿ ಒಂದರಿಂದ ಒಂದೂವರೆ ಗ್ರಾಮದಷ್ಟು ವ್ಯತ್ಯಾಸ ಬರುತ್ತಿತ್ತು. ಅಂದರೆ ಒಂದು ಗ್ರಾಮ್ ಚಿನ್ನದ ಮಾರುಕಟ್ಟೆ ಮೌಲ್ಯ ಪ್ರಸ್ತುತ 7 ಸಾವಿರವಿತ್ತು ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ಮೋಸವಾಗುತ್ತಿತ್ತು. ಪರವಾನಗಿ ಪಡೆಯದ ಮತ್ತು ನವೀಕರಣ ಮಾಡಿಸಿಕೊಳ್ಳದ ಕಾರಣಗಳು ಸೇರಿದಂತೆ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಗ್ರಾಹಕರಿಗೆ ಮೋಸ ಮಾಡುತ್ತಿದ್ದ ಆಭರಣ ಮಳಿಗೆಗೆ ಬೀಗ ?
