ಮಧುಗಿರಿ: ಕರ್ಪೂರದ ಘಾಟು ವಾಸನೆಗೆ ಮರದಲ್ಲಿದ್ದ ಹೆಜ್ಜೇನು ಹುಳುಗಳು ಮೇಲೆದ್ದು ಸಮೀಪದಲ್ಲಿದ್ದ ಜನರ ಮೇಲೆ ದಾಳಿ ನಡೆಸಿರುವ ಘಟನೆ ಗುರುವಾರ ನಡೆದಿದೆ. ಪಟ್ಟಣದ ರಾಘವೇಂದ್ರ ಸ್ವಾಮಿ ದೇವಾಲಯದ ಬಳಿಯಿರುವ ಅರಳಿಮರದಲ್ಲಿ ಹೆಜ್ಜೇನು ನೊಣಗಳು ಗೂಡು ಕಟ್ಟಿದ್ದು, ಎಂದಿನಂತೆ ಭಕ್ತರೊಬ್ಬರು ಕರ್ಪೂರದ ದೀಪ ಬೆಳಗಿದಾಗ ಕರ್ಪೂರದ ವಾಸನೆಗೆ ಮರದಲ್ಲಿದ್ದ ಹೆಜ್ಜೇನು ಹುಳುಗಳು ಸಮೀಪದಲ್ಲಿದ್ದ ಜನರ ಮೇಲೆ ಏಕಾಏಕಿ ದಾಳಿ ಮಾಡಿದ್ದು ಜನರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ದಾಳಿಗೆ ಕಾಲೇಜು ವಿದ್ಯಾರ್ಥಿಗಳು, ಆಟೋ ಚಾಲಕರು, ಸಾರ್ವಜನಿಕರು ಸೇರಿದಂತೆ ಸುಮಾರು 17 ಕ್ಕೂ ಹೆಚ್ಚು ಜನರು ತುತ್ತಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗಳಿಗೆ ವಾಪಸ್ ತೆರಳಿದ್ದಾರೆ.

ಇನ್ನೂ ಪುರಸಭೆಯ ಕಟ್ಟಡದಲ್ಲಿ ಒಂದು, ನ್ಯಾಯಾಲಯದ ಸಂಕೀರ್ಣದ ಬಳಿ ಸುಮಾರು 4 ಭಾಗಗಳಲ್ಲಿ ಹೆಜ್ಜೇನು ಗೂಡು ಕಟ್ಟಿದ್ದು, ಈ ಭಾಗಗಳಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಿರುವುದರಿಂದ ಮುಂದೆ ಆಗಬಹುದಾದ ಅನಾಹುತ ತಡೆಯುವಂತೆ ಪ್ರಜ್ಞಾವಂತರು ಆಗ್ರಹಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ವಿವರ:
ಕೇಶವ್ (೨೫), ಚಂದ್ರನಾಯಕ್(೫೬), ಲಕ್ಷ್ಮಿನಾರಾಯಣ(೬೦), ಶಶಿಕುಮಾರ(೨೬), ಸೌಮ್ಯ(೨೮), ಅನಸೂಯಮ್ಮ(೬೦), ರಾಮಾಂಜಿ(೪೬), ಕುಶಾಲ್(೧೩), ಸಿದ್ದರಾಜು(೪೫), ವೆಂಕಟೇಶ್(೭೦), ಭೂತರಾಜು(೫೫), ಸುರೇಶ್(೫೭), ವೆಂಕಟೇಶ್(೫೦), ಪವಿತ್ರ(೨೬), ನಾಗೇಶಯ್ಯ(೪೮), ಗೌಸ್ ಪೀರ್(೩೪), ಸಣ್ಣಲಿಂಗಪ್ಪ(೬೬) ಇವರುಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ವಿವರ ತಿಳಿದು ಬಂದಿಲ್ಲ.