ಪೌರಾಣಿಕ ಕಥೆಯನ್ನು ಆಧರಿಸಿ ಭವ್ಯವಾಗಿ ಮೂಡಿಬಂದ ‘ಮಹಾವತಾರ ನರಸಿಂಹ’ ಚಿತ್ರವು ಈಗ ನೆಟ್ಫ್ಲಿಕ್ಸ್ OTTನಲ್ಲಿ ಲಭ್ಯವಿದೆ. ಜುಲೈ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ರೆಕಾರ್ಡ್ ಬ್ರೀಕ್ ಕಲೆಕ್ಷನ್ ಗಳಿಸಿದ ಈ ಚಿತ್ರವು, ಈಗ ಮನೆಯಲ್ಲಿಯೇ ವೀಕ್ಷಣೆಗೆ ಲಭ್ಯವಾಗಿದ್ದು, ಪ್ರೇಕ್ಷಕರಿಗೆ ಇನ್ನಷ್ಟು ಅನುಕೂಲವಾಗಿದೆ.
OTTನಲ್ಲಿ ಯಾವಾಗ, ಎಲ್ಲಿಗೆ?
ಸೆಪ್ಟೆಂಬರ್ 19ರಂದು ಮಧ್ಯಾಹ್ನ 12:30ರಿಂದ ಈ ಚಿತ್ರ ನೆಟ್ಫ್ಲಿಕ್ಸ್ನಲ್ಲಿ ದೇಶಾದ್ಯಂತ ಸ್ಟ್ರೀಮ್ ಆಗುತ್ತಿದೆ. ಮೊದಲು ಸಿನಿಮಾ ಮಿಸ್ ಮಾಡಿಕೊಂಡವರಿಗೋಸ್ಕರ ಇದು ಭಕ್ತಿಯ ಜೊತೆ ಶಕ್ತಿ ತುಂಬಿಕೊಳ್ಳುವ ಒಳ್ಳೆಯ ಅವಕಾಶ.
ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ ಭಕ್ತಿಯ ಕಥೆ
- ವಿಶ್ವಾದ್ಯಂತ ಕಲೆಕ್ಷನ್: ₹325.65 ಕೋಟಿ
- ಭಾರತದಲ್ಲಿಯೇ: ₹250.2 ಕೋಟಿ
- ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ
- ಎಲ್ಲಾ ವಯಸ್ಸಿನವರು ಚಿತ್ರಮಂದಿರಗಳಿಗೆ ಹರಿದು ಬಂದಿದ್ದರು
ಚಿತ್ರದ ಸಾರಾಂಶ: ಭಕ್ತಿಯಿಂದ ಉದ್ಭವವಾದ ಅವತಾರ
ಚಿತ್ರದಲ್ಲಿ ಭಕ್ತ ಪ್ರಹ್ಲಾದನ ಕಥೆ, ಅವನ ನಿರಂತರ ಭಕ್ತಿಗೆ ಪ್ರತಿಯಾಗಿ ವಿಷ್ಣುನು ನರಸಿಂಹನ ಅವತಾರ ತೆಗೆದುಕೊಂಡು ಹಿರಣ್ಯಕಶಿಪುವನ್ನು ಸಂಹಾರ ಮಾಡುವ ಪೌರಾಣಿಕ ಘಟನೆಯನ್ನು ಆಧರಿಸಿದೆ. ಈ ಕಥೆಯನ್ನು ಅತ್ಯಾಧುನಿಕ ಅನಿಮೇಷನ್ ತಂತ್ರಜ್ಞಾನ ಬಳಸಿ ಪ್ರಸ್ತುತಪಡಿಸಲಾಗಿದೆ.
ನಿರ್ದೇಶಕ ಅಶ್ವಿನ್ ಕುಮಾರ್ ಮಾತನಾಡುತ್ತಾ…
“ಈ ಚಿತ್ರವು 100 ಕೋಟಿ ರೂ. ಕ್ಲಬ್‌ಗೆ ಪ್ರವೇಶಿಸಿದ ಕ್ಷಣ ಮರೆಯಲಾರದ ಅನುಭವ. ಭಾರತೀಯ ಆಧ್ಯಾತ್ಮಿಕತೆ ಮತ್ತು ಪೌರಾಣಿಕತೆಗೆ ಸಮರ್ಪಿತ ಚಿತ್ರವೊಂದು ಈ ಮಟ್ಟದ ಒಲವು ಗಳಿಸುವುದು ಅಪರೂಪ. ವಿಶೇಷವಾಗಿ, ಅನಿಮೇಷನ್ ಸಿನಿಮಾಗಳ ಬಗ್ಗೆ ಇರುವ ‘ಮಕ್ಕಳ ಸಿನಿಮಾ’ ಎಂಬ ಕಲ್ಪನೆ ಈ ಚಿತ್ರ ಬದಲಿಸಿದೆ” ಎಂದು ಹೇಳಿದರು.
For More Updates Join our WhatsApp Group :
