ಬೆಂಗಳೂರು: ಸಂಚಾರ ದಟ್ಟಣೆಗೆ (ಟ್ರಾಫಿಕ್) ಹೆಸರು ವಾಸಿಯಾಗಿರುವ ಬೆಂಗಳೂರಿನಲ್ಲಿ ಆಗಾಗ ಸಂಚಾರ ನಿಯಮಗಳು ಬ್ರೇಕ್ ಆಗುತ್ತಲೇ ಇರುತ್ತವೆ. ಟ್ರಾಫಿಕ್ ಕಿರಿ ಕಿರಿ ತಪ್ಪಿಸಲು ಬೈಕ್ ಸವಾರರು ಫುಟ್ ಪಾತ್ ಮೇಲೆ ಏರುವ ದೃಶ್ಯಗಳನ್ನು ಸಾಮಾನ್ಯವಾಗಿ ಕಾಣಬಹುದು. ಆದರೆ ಇಲ್ಲೋಬ್ಬ ಭೂಪ ಬೃಹತ್ ಕಾರನ್ನು ನೋಡು ನೋಡುತ್ತಿದ್ದಂತೆ ಫುಟ್ಪಾತ್ ಮೇಲೆ ಏರಿದ್ದಾನೆ. ಈ ವಿಡಿಯೋ ಭಾರೀ ವೈರಲ್ ಆಗಿದೆ.
ಬೆಂಗಳೂರು ರಸ್ತೆಗಳು ಸದಾ ವಾಹನಗಳಿಂದ ತುಂಬಿರುತ್ತವೆ. ಈ ಟ್ರಾಫಿಕ್ ಸಮಸ್ಯೆಗೆ ಸುಸ್ತಾದ ಮಹಿಂದ್ರಾ ಥಾರ್ ಕಾರಿನ ಚಾಲಕನೊಬ್ಬ ಪಾದಾಚಾರಿಗಳು ಓಡಾಡುವ ಪುಟ್ಪಾತ್ ಮೇಲೆ ವೇಗವಾಗಿ ಓಡಿಸಿದ್ದಾನೆ. ಬೈಕುಗಳೇ ಸರತಿ ಸಾಲಿನಲ್ಲಿ ನಿಂತರೆ ಈ ಚಾಲಕ ಮಾತ್ರ ಪುಟ್ಪಾತ್ ಏರುವ ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ. ಕಾರು ಸಮೇತ ಚಾಲಕನ್ನು ಪೊಲೀಸರು ಗಂಟೆಗಳ ಅಂತರದಲ್ಲಿ ಹಿಡಿಯುವ ಮೂಲಕ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಈ ಘಟನೆ ಬೆಂಗಳೂರಿನ ಹೂಡಿ ವೃತ್ತ ಬಳಿ ನಡೆದಿದೆ. ವೃತ್ತದಲ್ಲಿ ರೆಡ್ ಸಿಗ್ನಲ್ ಇದ್ದಾಗ ಈತ ಮಾತ್ರ ರಸ್ತೆ ಬಿಟ್ಟು ಪಾದಾಚಾರಿ ಮಾರ್ಗ ಪ್ರವೇಶಿಸಿದ್ದಕ್ಕೆ, ಪಾದಾಚಾರಿಗಳು ಗಾಬರಿಯಾದರು. ಸಂಚಾರ ನಿಯಮ ಉಲ್ಲಂಘಿಸಿರುವ ಈ ಥಾರ್ ಚಾಲಕನ ಪರವಾನಿಗೆ ರದ್ದುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಭಾರೀ ದಂಡ, ಲೈಸೆನ್ಸ್ ರದ್ದಿಗೆ ಬಳಕೆದಾರರ ಮನವಿ
ಘಟನೆಗೆ ಸಂಬಂಧಿಸಿದ ವಿಡಿಯೋ ಅನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ @unknownman7777 ಎಂಬುವವರು ಶೇರ್ ಮಾಡಿಕೊಂಡಿದ್ದಾರೆ. ” ಬೆಂಗಳೂರು ಸಂಚಾರಿ ಪೊಲೀಸರ ನಿಮ್ಮ ಅನುಮತಿಯೊಂದಿಗೆ ಕಾನೂನನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಅವರು ಸಂಚಾರ ನಿಯಮಗಳನ್ನು ಉಲ್ಲಂಘಿಸದಂತೆ ಅವರ ಈ ಚಾಲಕನ ಪರವಾನಗಿಯನ್ನು ರದ್ದುಗೊಳಿಸಬೇಕು. ಜೊತೆಗೆ ಭಾರೀ ದಂಡ ವಿಧಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಇಂತವರಿದ್ದಾಗಿ ಬೆಂಗಳೂರಿನ ಹೆಸರು ಹಾಳಾಗುತ್ತಿದೆ” ಎಂದು ಅವರು ಬರೆದುಕೊಂಡಿದ್ದಾರೆ.
ಇಂತಹ ಘಟನೆಗಳಿಂದ ಪಾದಚಾರಿ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಇದೆಲ್ಲ ಗಮನಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಪಾದಾಚಾರಿಗಳು ಫುಟ್ಪಾತ್ ಮೇಲೆ ಇದ್ದರೂ ಹಾರ್ನ್ ಸದ್ದು ಮಾಡುತ್ತಲೇ ಕಪ್ಪು ಬಣ್ಣದ ಕಾರು ತೆರಳಿದ್ದು ಕಂಡು ಬಂದಿದೆ.
ಬಿಬಿಎಂಪಿ, ಬೆಂಗಳೂರು ಪೊಲೀಸರು ಪಾದಚಾರಿ ಪಾದಚಾರಿ ಮಾರ್ಗಗಳನ್ನು ದುರ್ಬಳಕೆ ಆಗದಂತೆ ತಪ್ಪಿಸಬೇಕು. ಬೈಕು ಇತರ ವಾಹನಗಳ ಚಾಲಕರು ಫುಟ್ಪಾತ್ ಏರದಂತೆ ಅಲ್ಲಲ್ಲಿ ಬ್ಯಾರಿಕೇಡ್ ಹಾಕಬೇಕು. ರಸ್ತೆ, ಪಾದಾಚಾರಿಗಳನ್ನು ಶಿಸ್ತುಬದ್ಧಗೊಳಿಸಬೇಕು” ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಕೋರಿದ್ದಾರೆ. ಬೆಂಗಳೂರು ಪೊಲೀಸರು ಕ್ಷಿಪ್ರವಾಗಿ ಚಕ್ರದ ಹಿಂದಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಎಕ್ಸ್ ಪೋಸ್ಟ್ನಲ್ಲಿ, ಬೆಂಗಳೂರು ಪೊಲೀಸರು ಮಹದೇವಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರಿನ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು “ಅವನ ವಿರುದ್ಧ ಕ್ರಮ ತೆಗೆದುಕೊಳ್ಳಿ” ಎಂದು ಹೇಳಿದ್ದಾರೆ. ಮಹಾದೇವಪುರ ಪೊಲೀಸರಿಂದ ಚಾಲಕ ವಶಕ್ಕೆ ಈ ಘಟನೆಯ ವಿಡಿಯೋ ಗುರುವಾರ ನವೆಂಬರ್ 28 ರಂದು ಹಂಚಿಕೊಳ್ಳಲಾಗಿದೆ. ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಲಾಗಿತ್ತು. ಅಲರ್ಟ್ ಆದ ಮಹಾದೇವಪುರ ಪೊಲೀಸರು ಕಾರನ್ನು ಪತ್ತೆ ಮಾಡಿ ಚಾಲಕನನ್ನು ವಶಕ್ಕೆ ಪಡೆದಿರುವ ಫೋಟೋವನ್ನು ಅವರು ಕಾಮೆಂಟ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ವಿಡಿಯೋ ಸಹ ಪೋಸ್ಟ್ ಮಾಡಿರುವ ಪೊಲೀಸರು ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.