ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್‌ನ್ನು ‘ಎಕ್ಸ್ಟ್ರಾ’ ಮಾಡಿದ ಬಾಲಿವುಡ್ – ಕೇರಳಿಗರ ಆಕ್ರೋಶ

ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್‌ನ್ನು ‘ಎಕ್ಸ್ಟ್ರಾ’ ಮಾಡಿದ ಬಾಲಿವುಡ್ – ಕೇರಳಿಗರ ಆಕ್ರೋಶ

ಮುಂಬೈ: ಬಾಲಿವುಡ್‌ನಲ್ಲಿ ದಕ್ಷಿಣ ಭಾರತೀಯರನ್ನು ಹಾಸ್ಯ, ವ್ಯಂಗ್ಯ ಪಾತ್ರಗಳ ಮೂಲಕ ತೋರಿಸುವ ಪ್ರವೃತ್ತಿ ಹೊಸದೇನಲ್ಲ. ಇತ್ತೀಚೆಗೆ ಬಿಡುಗಡೆಯಾದ ‘ಪರಮ್ ಸುಂದರಿ’ಚಿತ್ರ ಈ ವಿವಾದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರನ್ನು ಈ ಸಿನಿಮಾದಲ್ಲಿ ಕೇವಲ ಎಕ್ಸ್ಟ್ರಾ ನಟಿಯಾಗಿ ಬಳಸಿಕೊಂಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ವಿವಾದ ಹೇಗೆ ಶುರುವಾಯಿತು?

ಜಾನ್ಹವಿ ಕಪೂರ್ ಮಲಯಾಳಿ ಯುವತಿಯ ಪಾತ್ರದಲ್ಲಿ, ಸಿದ್ಧಾರ್ಥ್ ಮಲ್ಹೋತ್ರಾ ನಾಯಕನಾಗಿ ನಟಿಸಿರುವ ‘ಪರಮ್ ಸುಂದರಿ’ ಸಿನಿಮಾದಲ್ಲಿ, ಪ್ರಿಯಾ ಪ್ರಕಾಶ್ ವಾರಿಯರ್ ಕೇವಲ ಒಂದು ದೃಶ್ಯದಲ್ಲಿ, ಒಂದು ಸೆಕೆಂಡಿನಷ್ಟೇ ಕಾಣಿಸಿಕೊಂಡಿದ್ದಾರೆ.ಅವರ ಪಾತ್ರಕ್ಕೆ ಡೈಲಾಗ್ ಇಲ್ಲ ಪಾತ್ರ ಪರಿಚಯದಲ್ಲಿಯೂ ಹೆಸರು ಇಲ್ಲ ಇತರೆ ಎಕ್ಸ್ಟ್ರಾಗಳ ಜೊತೆ ನಿಂತು, ಹೀರೋ ಹಿಂದೆ ನಡೆದುಹೋಗುವಷ್ಟೇ ಸ್ಕ್ರೀನ್ ಪ್ರೆಸೆನ್ಸ್ಅಭಿಮಾನಿಗಳ ಆಕ್ರೋಶ

ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಾಯಕಿಯಾಗಿ ಮೆರೆದಿದ್ದ ಪ್ರಿಯಾ ಪ್ರಕಾಶ್‌ನ್ನು ಇಂತಹ ಪಾತ್ರದಲ್ಲಿ ತೋರಿಸಿರುವುದು ಕೇರಳಿಗರ ಕೋಪಕ್ಕೆ ಕಾರಣವಾಗಿದೆ.

“ಪ್ರಿಯಾ, ಜಾನ್ಹವಿಗಿಂತ ಉತ್ತಮ ನಟಿ. ಕೇರಳ ಯುವತಿಯ ಪಾತ್ರಕ್ಕೆ ಜಾನ್ಹವಿಗಿಂತ ಸೂಟ್ ಆಗುವವರು ಅವರು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.ಕೆಲವರು, “ಬಾಲಿವುಡ್ ತನ್ನ ಅಹಂಕಾರವನ್ನು ಮತ್ತೊಮ್ಮೆ ತೋರಿಸಿದೆ ಎಂದು ಟೀಕಿಸಿದ್ದಾರೆ.

ಸಿನಿಮಾದ ವಿರುದ್ಧ ಟೀಕೆ

ಈಗಾಗಲೇ ಸ್ಥಳೀಯತೆ, ಕಥಾಹಂದರದ ಸೂಕ್ಷ್ಮತೆ ಕೊರತೆ ಎಂಬ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದ ‘ಪರಮ್ ಸುಂದರಿ ಈಗ ಪ್ರಿಯಾ ಪ್ರಕಾಶ್ ವಾರಿಯರ್ ವಿವಾದದಿಂದ ಕೇರಳಿಗರ ಆಕ್ರೋಶಕ್ಕೆ ಗುರಿಯಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *