ಬೆಂಗಳೂರು: ಹೆಂಡತಿ ವಿಚ್ಛೇದನ ನೀಡಿದಕ್ಕೆ ನೊಂದು ಅನ್ನ ನೀರು ಬಿಟ್ಟು, ಪ್ರತಿದಿನ ಬಿಯರ್ ಕುಡಿಯಲು ಶುರು ಮಾಡಿ, ಇದೀಗ ವ್ಯಕ್ತಿಯೊಬ್ಬ ಸಾವನ್ನಪ್ಪಿದ ವಿಚಿತ್ರ ಘಟನೆ ನಡೆದಿದೆ.. 44 ವರ್ಷದ ವ್ಯಕ್ತಿಯೊಬ್ಬ ವಿಚ್ಛೇದನದ ನಂತರ ನೋವಿನಲ್ಲಿ ಅನ್ನ ನೀರು ಬಿಟ್ಟು ಒಂದು ತಿಂಗಳು ಬರೀ ಬಿಯರ್ನ್ನು ಕುಡಿದು ತನ್ನ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಇತ್ತಿಚೀಗಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗಿದೆ. ಸಣ್ಣ ಸಣ್ಣ ಕಾರಣಗಳಿಗೆ ವಿಚ್ಛೇದನ ನೀಡುತ್ತಾರೆ. ಹೀಗೆ ಸುಮ್ಮಸುಮ್ಮನೆ ವಿಚ್ಛೇದನ ನೀಡಿ, ತಮ್ಮ ಜೀವನವನ್ನು ಹಾಳು ಮಾಡಿಕೊಂಡಿರುವ ಹಲವು ಉದಾಹರಣೆಗಳು ನಮ್ಮ ಮುಂದೆ ಇದೆ. ಇದೀಗ ಇಲ್ಲೊಂದು ಘಟನೆ ಕೂಡ ಅದೇ ರೀತಿ ಆಗಿದೆ, ಆದರೆ ಇದು ಸ್ವಲ್ಪ ವಿಚಿತ್ರವಾಗಿದೆ. ವಿಚ್ಛೇದನ ನೀಡಿದ ನಂತರ ಅನ್ನ ನೀರು ಬಿಟ್ಟು ಬಿಯರ್ ಮಾತ್ರ ಕುಡಿದು, ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಥೈಲ್ಯಾಂಡ್‌ನ ಬಾನ್ ಚಾಂಗ್ ಜಿಲ್ಲೆಯಲ್ಲಿ ನಡೆದಿದೆ. 44 ವರ್ಷದ ವ್ಯಕ್ತಿಯೊಬ್ಬ ವಿಚ್ಛೇದನದ ನಂತರ ಆ ನೋವಿನಲ್ಲಿ ಅನ್ನ ನೀರು ಬಿಟ್ಟು ಒಂದು ತಿಂಗಳು ಬಿಯರ್ನ್ನು ಕುಡಿದು ತನ್ನ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇನ್ನು ಸಾವನ್ನಪ್ಪಿರುವ ವ್ಯಕ್ತಿಯನ್ನು ಥವೀಸಕ್ ನಮ್ವೊಂಗ್ಸಾ ಎಂದು ಗುರುತಿಸಲಾಗಿದೆ.