ಮಂಗಳೂರು || ED ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿ ಮನೆಗೆ ನುಗ್ಗಿ 30 ಲಕ್ಷ ರೂ. ದರೋಡೆ, ಆರೋಪಿ ಬಂಧನ

ಮಂಗಳೂರು || ED ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿ ಮನೆಗೆ ನುಗ್ಗಿ 30 ಲಕ್ಷ ರೂ. ದರೋಡೆ, ಆರೋಪಿ ಬಂಧನ

ಮಂಗಳೂರು: ಇಡಿ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯೊಬ್ಬರ ಮನೆಗೆ ದಾಳಿ ನಡೆಸಿ 30 ಲಕ್ಷ ನಗದು ದರೋಡೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ಕೇರಳದ ಕೊಲ್ಲಂ ಜಿಲ್ಲೆಯ ಯಸುದಾಸ್ ಲಿಯಾನ್ ಫರ್ನಾನ್ಸ್ ಎಂಬವರ ಪುತ್ರ ಅನಿಲ್ ಫೆರ್ನಾಂಡಿಸ್ (49) ಎಂದು ಗುರುತಿಸಲಾಗಿದೆ.

ಜ.6ರಂದು 6 ಜನ ದುಷ್ಕರ್ಮಿಗಳು ತಾವು ಇಡಿ ಅಧಿಕಾರಿಗಳೆಂದು ಹೇಳಿ ಸಿಂಗಾರಿ ಬೀಡಿ ಉದ್ಯಮಿಯ ಮನೆಯಲ್ಲಿ ಶೋಧ ನಡೆಸಿದ್ದರು. ಸುಮಾರು 30 ಲಕ್ಷ ನಗದು ದೋಚಿ, ಇದಕ್ಕೆ ಸಂಬಂಧಿಸಿ ದಾಖಲೆ ನೀಡುವಂತೆ ಸೂಚಿಸಿ ಮಂಗಳೂರಿನ ಕಚೇರಿಗೆ ಭೇಟಿ ನೀಡುವಂತೆ ಹೇಳಿದ್ದರು.

ಹಣ ಪಡೆದುಕೊಂಡು ಹೋದ ಬಳಿಕ ಮೊಬೈಲ್ ನಂಬರ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದರು. ಈ ಆರೋಪಿಗಳ ಪತ್ತೆಗೆ ಪೊಲೀಸ್ ಅಧೀಕ್ಷಕ ಯತೀಶ್ ಎನ್ ಅವರ ಆದೇಶದ ಮೇರೆಗೆ 4 ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಅಪರಾಧಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಕೇರಳ ರಾಜ್ಯದ ಈ ಆರೋಪಿಯಿಂದ ಕೃತ್ಯಕ್ಕೆ ಉಪಯೋಗಿಸಿದ ಕಾರು, 5 ಲಕ್ಷ ರೂಪಾಯಿ ನಗದು ಹಾಗೂ ನಕಲಿ ಕೃತ್ಯ ನಡೆಸುವಾಗ ಕಾರಿಗೆ ಅಳವಡಿಸಿದ್ದ ನಕಲಿ ನಂಬರ್ ಪ್ಲೇಟ್ನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದಲ್ಲಿ ಉಳಿದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದ್ದು, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ವಿವಿಧ ಠಾಣೆಗಳಿಂದ, ಅಪರಾಧ ಪ್ರಕರಣಗಳಲ್ಲಿ ನುರಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ನಾಲ್ಕು ವಿಶೇಷ ತನಿಖಾ ತಂಡಗಳು ಕಾರ್ಯನಿರ್ವಹಿಸಿರುತ್ತಿವೆ.

Leave a Reply

Your email address will not be published. Required fields are marked *