ಮಂಗಳೂರು || woman ಮೇಲೆ ಅ*ಚಾರ: ಪತಿ ಸೇರಿ Police Constable ನ ಬಂಧನ.

ಮಂಗಳೂರು || woman ಮೇಲೆ ಅ*ಚಾರ: ಪತಿ ಸೇರಿ Police Constable ನ ಬಂಧನ.

ಮಂಗಳೂರು: ಮಂಗಳೂರಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಆರೋಪದಡಿ ಕಾನ್ಸ್ಟೇಬಲ್ನನ್ನು ಅರೆಸ್ಟ್ ಮಾಡಲಾಗಿದೆ. ಪತಿಯ ಸಹಕಾರ ಪಡೆದು ಮಹಿಳೆಗೆ ಲೈಂಗಿಕ ದೌರ್ಜನ್ಯವೆಸಗಿರುವಂತಹ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಯ ಪತಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ಗೆ ಮಹಿಳೆ ದೂರು ನೀಡಿದ್ದರು.

ಮಹಿಳೆಯ ಮೇಲೆ ಅತ್ಯಾಚಾರ ಆರೋಪ ಹಿನ್ನಲೆ ಪೊಲೀಸ್ ಕಾನ್ಸ್ಟೇಬಲ್ನನ್ನು ಮಂಗಳೂರಿನ ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಕಾವೂರು ಪೊಲೀಸ್ ಠಾಣೆ ಕಾನ್ಸ್ಟೇಬಲ್ ಚಂದ್ರನಾಯಕ್ ಬಂಧಿತ ಆರೋಪಿ. ಇದೇ ಪ್ರಕರಣದಲ್ಲಿ ಪತ್ನಿಯ ಖಾಸಗಿ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಗಂಡನನ್ನು ಕೂಡ ಬಂಧಿಸಲಾಗಿದೆ. ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ಗೆ ಮಹಿಳೆ ದೂರು ನೀಡಿದ್ದರು.

ಸಂತ್ರಸ್ತ ಮಹಿಳೆಗೆ ಮದುವೆಯಾಗಿ ಕೆಲ ವರ್ಷ ಆಗಿತ್ತು. ಪತ್ನಿಯ ಖಾಸಗಿ ವಿಡಿಯೋವನ್ನು ಪತಿ ಸೆರೆ ಹಿಡಿದಿದ್ದ. ಈ ವಿಡಿಯೋ ತೋರಿಸಿ ಬ್ಲ್ಯಾಕ್ಮೇಲ್ ಕೂಡ ಮಾಡುತ್ತಿದ್ದ. ತಾನು ಹೇಳಿದವರ ಜೊತೆ ಮಲಗಬೇಕು ಅಂತ ಟಾರ್ಚರ್ ಕೊಟ್ಟಿದ್ದ. ವಿಡಿಯೋ ಇಟ್ಟುಕೊಂಡು ಬೇರೆಯವರ ಹಾಸಿಗೆಗೆ ಪತ್ನಿಯನ್ನು ಆರೋಪಿ ಪತಿ ದೂಡಿದ್ದ. ಇದರಿಂದ ತುಂಬಾ ನೊಂದಿದ್ದ ಸಂತ್ರಸ್ತೆ ಪೊಲೀಸನ ಸಂಪರ್ಕ ಮಾಡಿದ್ದಾರೆ.

Leave a Reply

Your email address will not be published. Required fields are marked *