ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದಿದ್ದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜೂನ್‌ನಲ್ಲಿ ನಡೆದಿದ್ದ ಈ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಅತ್ಯಾಚಾರ ಎಸಗಿದವರ ಜೊತೆಗೆ ವಿಡಿಯೋ ವೈರಲ್ ಮಾಡಿದ ಒಟ್ಟು 8 ಆರೋಪಿಗಳನ್ನು ಬಂಧಿಸಿದ್ದಾರೆ.
ಹೇಗೆ ನಡೆದಿತ್ತು ಘಟನೆ?
* ಆರೋಪಿ ಇನ್ಸ್ಟಾಗ್ರಾಂ ಮೂಲಕ ಬಾಲಕಿಯನ್ನು ಪರಿಚಯಿಸಿಕೊಂಡಿದ್ದ.
* ನಂತರ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಒಬ್ಬನಿಂದ ಅತ್ಯಾಚಾರ ಎಸಗಲಾಯಿತು.
* ಇನ್ನೊಬ್ಬ ಆರೋಪಿ ಆ ಘಟನೆಯನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದ.
* ಬಳಿಕ ಆ ವಿಡಿಯೋ ಸ್ನೇಹಿತರಿಗೆ ಕಳುಹಿಸಿ, ಅವರು ಅದನ್ನು ವೈರಲ್ ಮಾಡಿದ ಪರಿಣಾಮ ಪ್ರಕರಣ ಬಯಲಿಗೆ ಬಂದಿದೆ.
ಬಾಗಲಕೋಟೆಯಲ್ಲಿ ಅಪ್ರಾಪ್ತ ಬಾಲಕನಿಂದ ಅಪ್ರಾಪ್ತೆಯ ಗರ್ಭಧಾರಣೆ!
ಬಾಗಲಕೋಟೆ: ಇಳಕಲ್ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಅಪ್ರಾಪ್ತ ಬಾಲಕನಿಂದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆದಿದ್ದು, ಸಂತ್ರಸ್ತೆ ಈಗ ಎರಡು ತಿಂಗಳ ಗರ್ಭಿಣಿಯಾಗಿದ್ದಾಳೆ. ಪೋಷಕರ ದೂರಿನ ಆಧಾರದ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿ ಪ್ರಸ್ತುತ 16 ವರ್ಷದವಳು, ಆರೋಪಿ ಬಾಲಕನಿಗೆ 17 ವರ್ಷ ವಯಸ್ಸು. ಇವರು ಶಾಲೆಯಲ್ಲಿದ್ದಾಗಲೇ ಪರಿಚಯವಾಗಿದ್ದು, ಬಳಿಕ ಆರೋಪಿ ಪುಸಲಾಯಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
For More Updates Join our WhatsApp Group :