ದರ್ಶನ್ ತೂಗುದೀಪ್ ಅವರನ್ನ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಅರೆಸ್ಟ್ ಮಾಡಿದ್ದ & ನಿರ್ಭಯವಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ಎಸಿಪಿ ಚಂದನ್ ಅವರಿಗೆ ದೊಡ್ಡ ಕಂಟಕ ಎದುರಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾದ್ರೆ ಏನದು ಕಂಟಕ?
ಕರ್ನಾಟಕ ಪೊಲೀಸ್ ಖದರ್ ಏನು ಅನ್ನೋದು ಇಡೀ ದೇಶಕ್ಕೇ ಗೊತ್ತು. ಕರ್ನಾಟಕ ಖಾಕಿ ಪಡೆ ಕಂಡರೆ ಕಳ್ಳರು, ರೌಡಿಗಳು, ಸಮಾಜಘಾತುಕರು ಹೆದರುತ್ತಾರೆ. ಬೇರೆ ರಾಜ್ಯದ ಪೊಲೀಸ್ ಪಡೆಗೆ ಹೋಲಿಕೆ ಮಾಡಿದರೆ ಕರ್ನಾಟಕದ ಪೊಲೀಸರು ದೊಡ್ಡ ಮಟ್ಟಿಗೆ ಹವಾ ಇಟ್ಟಿದ್ದಾರೆ. ಹೀಗೆ ಭಾರಿ ಹೆಸರು ಮಾಡಿರುವ ಪೊಲೀಸ್ ಅಧಿಕಾರಿಗಳ ಪೈಕಿ ಎಸಿಪಿ ಚಂದನ್ ಅವರು ಕೂಡ ಒಬ್ಬರು. ಆದರೆ ಇದೇ ಎಸಿಪಿ ಚಂದನ್ ಅವರನ್ನು ಇದೀಗ ಬೇಕು ಅಂತಾ ಟಾರ್ಗೆಟ್ ಮಾಡಿ ಸುಳ್ಳು ಆರೋಪ ಹೊರಿಸುತ್ತಿರುವ ಮಾತು ಕೇಳಿಬಂದಿದೆ. ಹಾಗಾದ್ರೆ ಎಸಿಪಿ ಚಂದನ್ ಅವರಿಗೆ ದರ್ಶನ್ ತೂಗುದೀಪ್ ಅರೆಸ್ಟ್ ಮಾಡಿದ್ದೇ ಕಂಟಕ ಆಯ್ತಾ? ಅಥವಾ ಬೇರೆ ಏನಿದೆ ವಿಷಯ?
ಎಸಿಪಿ ಚಂದನ್ VS ಪ್ರತಾಪ್ ಸಿಂಹ
ಪ್ರತಾಪ್ ಸಿಂಹ ಇದೀಗ ದರ್ಶನ್ ತೂಗುದೀಪ್ ಅವರನ್ನು ಬಂಧಿಸಿದ್ದ ದಕ್ಷ ಅಧಿಕಾರಿ ಎಸಿಪಿ ಚಂದನ್ ಅವರ ವಿರುದ್ಧ ಗಂಭೀರ ಆರೋಪ ಒಂದನ್ನ ಮಾಡಿದ್ದಾರೆ. ಈ ಕುರಿತಾಗಿ ಟ್ವೀಟ್ ಒಂದನ್ನ ಮಾಡಿರುವ ಪ್ರತಾಪ್ ಸಿಂಹ, ‘ಸಹೋದರ ಪುನೀತ್ ಕೆರೆಹಳ್ಳಿ ಬಿಡುಗಡೆ ಆಗಿದ್ದಾನೆ. ಆತನನ್ನು ಠಾಣೆಯಲ್ಲಿ ಬೆತ್ತಲುಗೊಳಿಸಿ ಹಿಂಸೆ ಕೊಟ್ಟಿರುವ ACP ಚಂದನ್ ನಾಳೆ ಸ್ಟೇಷನ್ ಗೆ ಬರ್ತೀನಿ, ನೀವು ಇರಬೇಕು.’ ಎಂದು ಹೇಳಿ ಎಚ್ಚರಿಕೆಯ ನೀಡಿದ್ದಾರೆ. ಆದರೆ ಈ ವಿಚಾರಕ್ಕೆ ಮತ್ತು ದರ್ಶನ್ ತೂಗುದೀಪ್ ಬಂಧನಕ್ಕೂ ನಂಟು ಬೆಸೆದು ಕೆಲವರು ಆರೋಪ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದೆ.