ತುಮಕೂರು : ಸುಪೀಂ ಕೋರ್ಟ್ ಅದೇಶದಂತೆ ಕರ್ನಾಟಕ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಬೃಹತ್ ತಮಟೆ ಚಳುವಳಿ ನಡಿಸಿ ತಿಪಟೂರು ಶಾಸಕ ಕೆ.ಷಡಕ್ಷರಿ ಹಾಗೂ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ತಿಪಟೂರು ನಗರದ ಡಾ. ಬಿಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾ ಕಾರರಿಂದ ಮನವಿಪತ್ರ ಸ್ವೀಕರಿಸಿದ ತಿಪಟೂರು ಶಾಸಕ ಕೆ.ಷಡಕ್ಷರಿ ನಮ್ಮ ಸರ್ಕಾರ ಒಳಮೀಸಲಾತಿ ಜಾರಿಗೆ ಬದ್ದವಾಗಿಗೆ, ಕಾನೂನು ತಜ್ಞರ ಅಭಿಪ್ರಾಯದಂತೆ ಸರ್ಕಾರ ಸೂಕ್ತ ಸಂದರ್ಭದಲ್ಲಿ, ಒಳಮೀಸಲಾತಿ ಜಾರಿಗೊಳಿಸುತ್ತದೆ,ನಾನು ಸಹ ಸರ್ಕಾರದ ಜೊತೆ ನಿಮ್ಮ ಪರವಾಗಿ ಧ್ವನಿಎತ್ತುತ್ತೇನೆ ಎಂದು ತಿಳಿಸಿದರು
ನಂತರ ಡಾ//ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆಸಲ್ಲಿಸಿ, ಬಿ.ಹೆಚ್ ರಸ್ತೆ ಮೂಲಕ ಸಾಗಿದ ಪ್ರತಿಭಟನಾ ಕಾರರು ಉಪವಿಭಾಗಾಧಿಕಾರಿಗಳ ಕಚೇರಿಮುಂದೆ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರಸಲ್ಲಿಸಿದರು,ಉಪವಿಭಾಗಾಧಿಕಾರ ಸಪ್ತಶ್ರೀ ಮನವಿಪತ್ರ ಸ್ವೀಕರಿಸಿದರು.
ಪ್ರತಿಭಟನಾ ನಿರತರನ್ನ ಉದ್ದೇಶಿಸಿ ಮಾತನಾಡಿದ ಮಾದಿಗ ದಂಡೋರ ಮುಖಂಡ ಕುಪ್ಪಾಳು ರಂಗಸ್ವಾಮಿ ಮಾತನಾಡಿ ಪರಿಶಿಷ್ಟ ಪಟ್ಟಿಯಲ್ಲಿ ಸುಮಾರು 116 ಜಾತಿಗಳಿವೆ,ಶೋಷಿತರು, ಅಸ್ಪೃಶ್ಯತೆಯ ನೋವಿನಲ್ಲಿ ಬೆಯುತ್ತಿರುವ, ಜಾತಿಗಳಿಗೆ, ಮೀಸಲಾತಿ ಸರಿಯಾಗಿ ದೊರೆಯುತ್ತಿಲ್ಲ,ಸಂವಿಧಾನದ ಮೂಲತತ್ವದ ಆಶವೇ ಶೋಷಿತರು ದಮನಿತರು ಮುಖ್ಯವಾಹಿನಿಗೆ ಬರಬೇಕು ಎನ್ನುವುದು. ಸರ್ವರಿಗೂ ಸಮಪಾಲು ದೊರೆಯಬೇಕಾದರೆ ಒಳಮೀಸಲಾತಿಯ ಅಗತ್ಯವಿದೆ
ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮಾದಿಗ ಸಮಾಜ ಮೀಸಲಾತಿ ಸವಲತ್ತುಗಳು ಜನಸಂಖ್ಯೆಯ ಆಧಾರದಲ್ಲಿ ದೊರೆಯದೆ ಅನ್ಯಾಯ ಕೊಳಗಾಗಿದೆ.
ಜನಸಂಖ್ಯಾ ವಾರು ಮೀಸಲಾತಿ ಹಂಚಿಕೆಯಾಗಬೇಕು ಮೀಸಲಾತಿ ಸೌಲಭ್ಯಗಳಿಂದ ವಂಚನೆಗೊಳಗಾಗಿರುವ ಮಾದಿಗ ಸಂಬಂಧಿತ ಜಾತಿಗಳಿಗೆ ಹೆಚ್ಚಿನ ಸವಲತ್ತು ದೊರೆಯಬೇಕು ಎನ್ನುವ ಕಾರಣಕ್ಕಾಗಿ ಹಲವಾರು ದಶಕಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು ಇಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಸಚಿವ ಸಂಪುಟದಲ್ಲಿ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ದತ್ತಾಂಶದ ಅಟಧಾರದಲ್ಲಿ ಒಳ ಮೀಸಲಾತಿಯನ್ನ ಅಂಗೀಕರಿಸಿದ್ದು ಒಳಮಿಸಲಾತಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ, ಮಾನ್ಯ ಸುಪ್ರೀಂ ಕೋರ್ಟ್ ಸಹ ಒಳ ಮೀಸಲಾತಿ ಬೇಡಿಕೆ, ನ್ಯಾಯ ಬದ್ಧವಾಗಿದ್ದು ರಾಜ್ಯ ಸರ್ಕಾರಗಳು ಒಳ ಮೀಸಲಾತಿ ಜಾರಿ ಅಧಿಕಾರವನ್ನು ಹೊಂದಿರುವುದಾಗಿ ಆದೇಶ ನೀಡಿರುವ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೊಳಿಸದೆ ಮೀನಾ ಮೇಷ ಎಣಿಸುತ್ತಿರುವುದು ಖಂಡನೀಯವಾಗಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಪರವಾಗಿರುವ ಒಳ ಮೀಸಲಾತಿಯನ್ನ ಕೂಡಲೇ ಸಚಿವ ಸಂಪುಟದ ಮುಂದಿಟ್ಟು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಕೊಪ್ಪ ಶಾಂತಪ್ಪ ಮಾತನಾಡಿ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು ಜಾರಿಗೊಳಿಸಲು ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಬೇಕು ಕರ್ನಾಟಕ ತಮಿಳುನಾಡು.ತೆಲಂಗಾಣ ಆಂಧ್ರಪ್ರದೇಶ ಮಹಾರಾಷ್ಟ್ರ ಜಾರ್ಖಂಡ್ ಸೇರಿದಂತೆ ಹಲವಾರು ರಾಜ್ಯಗಳು ಒಳ ಮೀಸಲಾತಿ ಜಾರಿಗೆ ಬದ್ಧವಾಗಿರುವುದಾಗಿ ಘೋಷಣೆ ಮಾಡಿವೆ. ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿಯೇ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ, ಅಧಿಕಾರ ಬಂದಾಗಿನಿಂದ ಒಳಮಿಸಲಾತಿ ವಿಚಾರವನ್ನು ಮೂಲೆಗುಂಪು ಮಾಡಿದೆ.ಸುಪೀಂ ಕೋರ್ಟ್ ನಿರ್ದೇಶನದಂತೆ ಒಳಮಿಸಲಾತಿಯನ್ನು ಜಾರಿಗೊಳಿಸಬೇಕು.ನಮ್ಮ ಬೇಡಿಕೆ ನಿರ್ಲಕ್ಷ್ಯ ಮಾಡಿದರೆ, ಮಾದಿಗ ಸಮುದಾಯ ಸಂಘಟಿತರಾಗಿ ಉಗ್ರ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು
ಪ್ರತಿಭಟನೆಯಲ್ಲಿ ಉಪಸ್ಥಿತರಿದ ಪೆದ್ದಿಹಳ್ಳಿ ನರಸಿಂಹಯ್ಯ ಮಾತನಾಡಿ ರಾಜ್ಯ ಸರ್ಕಾರ ಒಳ ಮೀಸಲಾತಿಗೆ ಜಾರಿಗೊಳಿಸಲು ಮೀನಾ ಮೇಷ ಎಣಿಸುತ್ತಿರುವುದು ಸರಿಯಲ್ಲ ಚುನಾವಣಾ ಪೂರ್ವದಲ್ಲಿ ಒಳಮೀಸಲಾತಿ ಜಾರಿಯ ಭರವಸೆ ನೀಡಿದ್ದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಳ ಮೀಸಲಾತಿಯ ವಿಚಾರದಲ್ಲಿ ತಟಸ್ಥ ಧೋರಣೆ ಅನುಸರಿಸುತ್ತಿದೆ. ಒಳಮೀಸಲಾತಿ ಶೋಷಿತ ಸಮುದಾಯಗಳ ಸಂವಿಧಾನಬದ್ಧ ನ್ಯಾಯಸಮ್ಮತ ಹಕ್ಕು ನಾವು ಯಾವುದೇ ಜಾತಿ ಜನಾಂಗಗಳ ವಿರೋಧಿಗಳಲ್ಲ, ನಮಗೆ ಮೀಸಲಾತಿಯಲ್ಲಿ ಆಗಿರುವಂತಹ ಅನ್ಯಾಯವನ್ನು ಸರಿಪಡಿಸಲು ಒಳಮಿಸಲಾತಿ ಜಾರಿಯಾಗಬೇಕೆಂದು ಹೋರಾಟ ನಡೆಸುತ್ತಿದ್ದೇವೆ ನಮ್ಮ ನ್ಯಾಯ ಸಮತವಾದ ಹೋರಾಟವನ್ನು ಸರ್ಕಾರ ಪರಿಗಣಿಸಿ ಒಳಮಿಸಲಾತಿಯನ್ನ ಕೂಡಲೇ ಜಾರಿಗೊಳಿಸಬೇಕು ಸಾಮಾಜಿಕ ನ್ಯಾಯದ ಪರವಾಗಿ ಮಾತನಾಡುವ ಮುಖ್ಯಮಂತ್ರಿಗಳು ಹಾಗೂ ಪರಿಶಿಷ್ಟ ಜಾತಿ ಪ್ರತಿನಿಧಿಸುತ್ತಿರುವ ಸಚಿವರಾದ ಎಚ್. ಸಿ ಮಹದೇವಪ್ಪ ಪ್ರಿಯಾಂಕ ಖರ್ಗೆ ಡಾ//ಜಿ. ಪರಮೇಶ್ವರ್ ರವರು ಕೂಡಲೇ ಒಳಮಿಸಲಾತಿ ಪರವಾಗಿ ಧ್ವನಿಎತ್ತಬೇಕು.ನಮ್ಮ ಹೋರಾಟವನ್ನು ನಿರ್ಲಕ್ಷಿಸಿದರೆ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಪ್ರತಿಭಟನೆಯಲ್ಲಿ ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ಬೇವಿನಹಳ್ಳಿ ಚೆನ್ನಬಸವಯ್ಯ. ಬಿಳಿಗೆರೆ ಚಂದ್ರಶೇಖರ್. ಗಾಂಧಿನಗರ ಬಸವರಾಜು ನಾಗತಿಹಳ್ಳಿ ಕೃಷ್ಣಮೂರ್ತಿ ರಾಘವೇಂದ್ರ ಯಗಚೀಕಟ್ಟೆ. ಹರೀಶ್ ಗೌಡ. ಹತ್ಯಾಳ್ ಮೂರ್ತಿ. ಈಚನೂರು ಸೋಮಶೇಖರ್ ಮಂಜುನಾಥ ಹರ್ಚನಹಳ್ಳಿ. ಈಡೇನಹಳ್ಳಿ ಕಾಂತರಾಜು ಗೌಡನಕಟ್ಟೆ ಅಶೋಕ್ ಶೆಟ್ಟಿಹಳ್ಳಿ ಕಲ್ಲೇಶ್ ಬಾಗುವಾಳ ಲಿಂಗದೇವರು.ಟಿ.ರಾಜು.ಜಗದಾರ್ಯ.ಟಿ.ಕೆ ಕುಮಾರ್ ಮುಂತ್ತಾದವರು ಉಪಸ್ಥಿತರಿದರು